ಶಿವಮೊಗ್ಗ : ತುರ್ತು ಸಂದರ್ಭ ಹೊರತುಪಡಿಸಿ ರಾತ್ರಿ ಹೊತ್ತು ಬೈಕ್ ಸಂಚಾರ ನಿಷೇಧ : ಎಡಿಜಿಪಿ
ಹಿರಿಯರು, ಮಹಿಳೆಯರನ್ನು ಬಿಟ್ಟು ಬೈಕ್ ನಲ್ಲಿ ಇಬ್ಬರು ಸಂಚರಿಸುವಂತಿಲ್ಲ
Team Udayavani, Aug 16, 2022, 9:34 AM IST
ಶಿವಮೊಗ್ಗ : ನಗರದಲ್ಲಿ ಸೋಮವಾರ ನಡೆದ ಗಲಭೆ ಹಿನ್ನೆಲೆಯಲ್ಲಿ ಚೂರಿ ಇರಿತ ಘಟನೆಗಳು ನಡೆದು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಿಷೇದಾಜ್ಞೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ ಹೊತ್ತು ಬೈಕ್ ಸಂಚಾರ ನಿಷೇಧಿಸಿದ್ದಲ್ಲದೆ ಬೈಕ್ ನಲ್ಲಿ ಇಬ್ಬರು ಯುವಕರು ಸಂಚರಿಸದಂತೆ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ದ್ವಿ ಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇದಿಸಲಾಗಿದೆ. (40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತು ಪಡಿಸಿ) ಅಲ್ಲದೆ ರಾತ್ರಿ 9:00 ರಿಂದ ಬೆಳಗಿನ ಜಾವ 05:00 ರವೆಗೆ ತುರ್ತು ಸಂದರ್ಭವನ್ನು ಹೊರತು ಪಡಿಸಿ ದ್ವಿ ಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಬಂದಿದ್ದು, ತುಂಗಾನಗರ, ದೊಡ್ಡಪೇಟೆ, ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಮಾಡಿದ್ದೇವೆ , ಬೇರೆ ಸ್ಟೇಷನ್ ಗಳಲ್ಲಿ ರಾತ್ರಿ ಗಸ್ತು ಇರಲಿದೆ. 40 ವರ್ಷ ಮೇಲೆ ಇರುವ ಪಿಲಿಯನ್ ರೈಡರ್ಸ್ ಮೇಲೆ ನಿಗಾ ಇಡುತ್ತೇವೆ ಎಂದರು.
ಇನ್ನು ಮುಂದೆ ಇಂತಹ ಘಟನೆ ನಡೆಯಲು ಆಸ್ಪದ ನೀಡುವುದಿಲ್ಲ ಎಂದು ಹೇಳಿದ್ದಾರೆ. ಯಾರು ಈ ರೀತಿ ಘಟನೆ ನಡೆಸಲು ಮುಂದಾಗುತ್ತಾರೋ ಅಂತವರ ವಿರುದ್ದ ಕಠಣ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು ಈ ಘಟನೆ ಆರೋಪಿಗಳನ್ನು ಅದಷ್ಟು ಬೇಗಾ ದಸ್ತುಗಿರಿ ಮಾಡ್ತಿವಿ. ಐಜಿಯವರ ಮಾರ್ಗದರ್ಶನಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದರು.
ಚೌತಿ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಗಣಪತಿ ಹಬ್ಬಕ್ಕೆ ಏನು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೇವೆ, ರ್ಯಾಪಿಡ್ ಆಕ್ಷನ್ ಫೋರ್ಸ್ ಈಗಾಗಲೇ ಬಂದಿದೆ. ಮೂರು ಜನ ಅಡಿಷನಲ್ ಎಸ್ ಪಿ, ಒಬ್ಬ ಎಸ್ ಪಿ ಲೆವೆಲ್ ಆಫಿಸರ್, ಹತ್ತು ಜನ ಡಿಎಸ್ಪಿ , 30 ಜನ ಪಿಎಸ್ಐ ಸೇರಿದಂತೆ ಸಿಬ್ಬಂದಿಗಳು ಬಂದಿದ್ದಾರೆ ಎಂದರು.
ಇದನ್ನೂ ಓದಿ : ಬಿಹಾರ ಸಂಪುಟ ಇಂದು ವಿಸ್ತರಣೆ: ನಿತೀಶ್ ಸರ್ಕಾರದಲ್ಲಿ ಲಾಲೂ ಪಕ್ಷದವರದ್ದೇ ರಾಜ್ಯಭಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.