ಕಾಂಗ್ರೆಸ್ ನಿಂದ ತಿಂಗಳಿಗೊಂದು ಹೋರಾಟ? ಚುನಾವಣಾ ವಸ್ತುವಿಗೆ ಇನ್ನೂ ಹುಡುಕಾಟ
Team Udayavani, Aug 16, 2022, 10:56 AM IST
ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಚುನಾವಣಾ “ನೆರೇಟಿವ್ ಸೆಟ್” ಮಾಡುವಲ್ಲಿ ಇನ್ನು ಸಫಲವಾಗದೇ ಇರುವ ಕಾಂಗ್ರೆಸ್ ಈಗ ತಿಂಗಳಿಗೊಂದು ರಾಜ್ಯ ಮಟ್ಟದ ಹೋರಾಟ ನಡೆಸುವುದಕ್ಕೆ ಚಿಂತನೆ ನಡೆಸಿದೆ.
ಸಿದ್ದರಾಮೋತ್ಸವ, ಸ್ವಾತಂತ್ರ್ಯ ದಿನಾಚರಣೆಯ ಫ್ರೀಡಂ ಮಾರ್ಚ್ ಕಾಂಗ್ರೆಸ್ ಗೆ ತಕ್ಕಮಟ್ಟಿಗಿನ ಯಶಸ್ಸು ನೀಡಿದೆ. ಆದರೆ ಚುನಾವಣಾ ನೆರೇಟಿವ್ ಸೆಟ್ ಮಾಡುವುದಕ್ಕೆ ಇನ್ಬೂ ಸಾಧ್ಯವಾಗಿಲ್ಲ. 2013 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿಕ್ಕಂತ ಅಕ್ರಮ ಗಣಿಗಾರಿಕೆ ಹಾಗೂ ದುರಾಡಳಿತದ ಅಸ್ತ್ರ ಕಾಂಗ್ರೆಸ್ ಗೆ ಲಭಿಸಿಲ್ಲ. ಹೀಗಾಗಿ ಚುನಾವಣಾ ವಸ್ತುವಿನ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರು ಮುಳುಗಿದ್ದಾರೆ.
ಇದನ್ನೂ ಓದಿ:ಅತಿಯಾದ ಹಸ್ತಕ್ಷೇಪ: ಭಾರತೀಯ ಫುಟ್ ಬಾಲ್ ಸಂಸ್ಥೆಯನ್ನು ಅಮಾನತು ಮಾಡಿದ ಫಿಫಾ
ಆಗಸ್ಟ್ ತಿಂಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಪ್ರದರ್ಶನ ಕಾರ್ಯಕ್ರಮಗಳು ಮುಕ್ತಾಯಗೊಂಡಿದೆ. ಹೀಗಾಗಿ ಮುಂದಿನ ನಡೆ ಏನು ಎಂಬ ಪ್ರಶ್ನೆ ಸಹಜವಾಗಿಯೇ ಕೈ ಪಾಳಯವನ್ನು ಕಾಡುತ್ತಿದೆ. ಸೆಪ್ಟೆಂಬರ್ ನಲ್ಲಿ ಕಾಂಗ್ರೆಸ್‍ನಿಂದ ಮತ್ತೊಂದು ಹೋರಾಟಕ್ಕೆ ಸಿದ್ಧತೆ ಆರಂಭವಾಗಿದೆ. ತಿಂಗಳಿಗೊಂದು ಜನರ ಮನಸ್ಸನ್ನು ಸೆಳೆಯುವ ಹೋರಾಟ ರೂಪಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶನ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.