ಮಣಿಪಾಲದ ಆರ್ಕಿಟೆಕ್ಟ್ ಡಿಪಾರ್ಟೆಂಟ್ ನ ನಿವೃತ್ತ ಉದ್ಯೋಗಿ ಮಧ್ವರಾಜ್ ಭಟ್ ನಿಧನ
Team Udayavani, Aug 16, 2022, 5:08 PM IST
ಉಡುಪಿ: ಮಣಿಪಾಲದ ಆರ್ಕಿಟೆಕ್ಟ್ ಡಿಪಾರ್ಟೆಂಟ್ ನ ನಿವೃತ್ತ ಉದ್ಯೋಗಿ, ಕಟ್ಟಡಗಳ ವಿನ್ಯಾಸಕಾರ, ವಾಜಶಕ್ಷೇತ್ರ ನಿವಾಸಿ ಮಧ್ವರಾಜ್ ಭಟ್ ರವರು (70) ಆ.16 ರಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು,ಓರ್ವ ಪುತ್ರಿ ಸಹಿತ ಹಲವಾರು ಬಂಧು ಮಿತ್ರರನ್ನು ಅಗಲಿದ್ದಾರೆ.
ಶ್ರಿಕೃಷ್ಣ ಮಠದ ಸುತ್ತು ಪೌಳಿಯ ನಿರ್ಮಾಣ ಕಾರ್ಯದಲ್ಲಿ ರಾಜಾಂಗಣ,ಗೀತಾ ಮಂದಿರ ನಿರ್ಮಾಣ ಸಂಧರ್ಭ ವಿಶೇಷ ಮುತುವರ್ಜಿ ವಹಿಸಿದ್ದ ಇವರನ್ನು ಪೇಜಾವರ ಹಿರಿಯ ಶ್ರಿಗಳು ಶ್ರಿ ಕೃಷಾನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು. ನೇಪಾಳ,ಗುಜರಾತ್ ನ ದ್ವಾರಕಾ, ದ.ಕ, ಉಡುಪಿ, ಬೆಂಗಳೂರು, ಕೋಲಾರ, ಕುಂಭಾಶಿ ಆಯ್ಯಪ್ಪ ಸ್ವಾಮಿ ದೇವಾಲಯ, ಸಹಿತ ಹಲವೆಡೆ ದೇವಸ್ಥಾನ ಮತ್ತು ಮಠಗಳ ಮರು ನಿರ್ಮಾಣದ ಕಾಮಗಾರಿಗೆ ನಕ್ಷೆಗಳನ್ನು ತಯಾರಿಸಿ ಕಟ್ಟಡಗಳ ನಿರ್ಮಾಣಕ್ಕೆ ರೂಪು ರೇಷೆಗಳನ್ನು ತಯಾರಿಸಿ ಕೊಡುತ್ತಿದ್ದರು.
ಸಾತ್ವಿಕ ಸ್ವಭಾವದವರಾಗಿದ್ದು, ಜನಾನುರಾಗಿಯಾಗಿದ್ದ ಶ್ರೀಯುತರ ನಿಧನಕ್ಕೆ ಅಷ್ಟ ಮಠಗಳ ಶ್ರೀಗಳು, ಉಡುಪಿ ಶಾಸಕ ರಘುಪತಿ ಭಟ್,ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಹಿತ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.