ಹಿರಿಯರಿಗಾಗಿ ಮಾಡಿರುವ ಸ್ಟಾರ್ಟ್‌ಅಪ್‌ಗೆ ಟಾಟಾ ಹೂಡಿಕೆ
Team Udayavani, Aug 16, 2022, 10:25 PM IST
ಮುಂಬೈ: ಒಬ್ಬಂಟಿಯಾಗಿರುವ ಹಿರಿಯ ನಾಗರಿಕರಿಗೆಂದೇ ಆರಂಭಿಸಲಾಗಿರುವ “ಗುಡ್‌ಫೆಲ್ಲೋಸ್’ (Goodfellows)ಸಂಸ್ಥೆಯಲ್ಲಿ ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಅವರು ಹೂಡಿಕೆ ಮಾಡಿದ್ದಾರೆ.
ಈ ಸಂಸ್ಥೆಯು ಹಿರಿಯ ನಾಗರಿಕರೊಂದಿಗೆ ಮಾತನಾಡಿಕೊಂಡು, ಅವರ ಕೆಲಸ ಮಾಡಿಕೊಡುವುದಕ್ಕೆ ಆತ್ಮೀಯ ಸಹಚರರನ್ನು ಪೂರೈಸುವ ಕೆಲಸ ಮಾಡುತ್ತದೆ.
ಸದ್ಯ ಸಂಸ್ಥೆಯೊಂದಿಗೆ 20 ಯುವಕರು ಕೈ ಜೋಡಿಸಿದ್ದು, ಅವರು ಹಿರಿಯ ನಾಗರಿಕರನ್ನು ವಾರಕ್ಕೆ 3 ಬಾರಿ ಭೇಟಿಯಾಗುತ್ತಾರೆ. ಒಮ್ಮೆ ಭೇಟಿ ಮಾಡಿದಾಗ ಅವರೊಟ್ಟಿಗೆ 4 ಗಂಟೆ ಕಳೆಯುತ್ತಾರೆ. ಆ ಸಮಯದಲ್ಲಿ ಹಿರಿಯರ ನೋವು ಕೇಳುವುದು, ಅವರೊಂದಿಗೆ ಆಟವಾಡುವುದು, ಖುಷಿಯಿಂದ ಸಮಯ ಕಳೆಯುವುದನ್ನು ಅವರು ಮಾಡುತ್ತಾರೆ. ಈ ಸೌಲಭ್ಯಕ್ಕೆ ಹಿರಿಯರು ತಿಂಗಳಿಗೆ 5 ಸಾವಿರ ರೂ. ಪಾವತಿಸಬೇಕಾಗುತ್ತದೆ.
ಇಂಥದ್ದೊಂದು ವಿಶೇಷ ಸ್ಟಾರ್ಟ್‌ಅಪ್‌ಗೆ ಹೂಡಿಕೆ ಮಾಡಿರುವ ರತನ್ ಟಾಟಾ, “ವಯಸ್ಸಾದ ಮೇಲೆ ಒಬ್ಬಂಟಿಯಾಗಿರುವುದು ಎಷ್ಟು ಕಷ್ಟವೆಂದು ಹೇಳಲಾಗದು. ಹಾಗಾಗಿ ಇದರಲ್ಲಿ ಹೂಡಿಕೆ ಮಾಡಿದ್ದೇನೆ’ ಎಂದಿದ್ದಾರೆ. ರತನ್ ಟಾಟಾ ಅವರು ಈಗಾಗಲೇ ಸುಮಾರು 50ಸ್ಟಾರ್ಟ್‌ಅಪ್ ಗಳಿಗೆ ಹೂಡಿಕೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.