ಸಂಘಟನೆಯಿಂದ ಸಮಾಜಕ್ಕೆ ಶಕ್ತಿ: ಎಚ್ಕೆ
ತಾಲೂಕಿನಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕೂಡಾ ಭವ್ಯವಾದ ದೇವಸ್ಥಾನ ನಿರ್ಮಾಣ ಮಾಡಲಾಗಿದೆ
Team Udayavani, Aug 17, 2022, 6:07 PM IST
ಮುಂಡರಗಿ: ಕೃಷಿ ಉದ್ಯೋಗವೆಂದು ಅವಲಂಬಿತವಾಗಿರುವಂತಹ ರಡ್ಡಿ ಸಮಾಜವು ರಾಜ್ಯದಲ್ಲಿ ಸಣ್ಣ ಸಮುದಾಯವಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದಲ್ಲಿ ತಾಲೂಕಾ ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ್ ಕಮೀಟಿ ವತಿಯಿಂದ, ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಕಳಸಾರೋಹಣ ಹಾಗೂ ಶಿವಪ್ಪ ಮೇಟಿ ಸಮುದಾಯ ಭವನ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ರಡ್ಡಿ ಸಮಾಜದ ಮಹಾತ್ಮರಾದ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನ ತತ್ವ ಆದರ್ಶಗಳ ಅಡಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಆ ತತ್ವಗಳಲ್ಲಿ ವಿಶ್ವದ ಮನುಕುಲಕ್ಕೆ ವೇಮನು ಮಾರ್ಗದರ್ಶನಾಗಿದ್ದಾನೆ. ಅಂತಹ ವಂಶಜರಾದ ರಡ್ಡಿ ಜನಾಂಗವು ಉದ್ಯೋಗದಲ್ಲಿ ಕೃಷಿಕರಾಗಿದ್ದಾರೆ. ಸ್ವಾಭಿಮಾನದಿಂದ ಎಲ್ಲರೂ ಸಂಘಟಿತರಾದಾಗ ಸಮಾಜಕ್ಕೆ ಶಕ್ತಿ ಹಾಗೂ ಸಾಮರ್ಥ್ಯ ಬರುತ್ತದೆ.
ತಾಲೂಕಿನಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕೂಡಾ ಭವ್ಯವಾದ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಸರಳವಾಗಿ ಸಮುದಾಯ ಭವನ ಕಟ್ಟಬಹುದು. ಅದಕ್ಕೆ ವಿಧಾನ ಪರಿಷತ್ತಿನ ಸದಸ್ಯರು, ಬೇರೆ ಶಾಸಕರ, ಸಚಿವರು, ಸಂಸದರನ್ನು ಸಂಪರ್ಕಿಸಿ ಅವರ ಮೂಲಕ 25 ಲಕ್ಷ ರೂ. ಅನುದಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ 2025 ಸಾಲಿನ ವೇಮನ ಜಯಂತಿಗೆ ಭವನ ಉದ್ಘಾಟನೆ ಮಾಡುವುದಕ್ಕೆ ಸಮಾಜದ ಮುಖಂಡರು ಮುಂದಾಗಬೇಕು ಎಂದರು.
ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಲಕೇರಿ ವಿರುಪಾಪುರ ಗುರು ಮುದುಕೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ರಾಯಬಾಗದ ಲಡ್ಡು ಮುತ್ಯಾ ಸಾನ್ನಿಧ್ಯ ವಹಿಸಿದ್ದರು.
ಡಾ| ಬಸವರಾಜ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಬಿ.ಆರ್. ಯಾವಗಲ್, ಎಸ್.ಎಸ್. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಗಡ್ಡದೇವರ ಮಠ, ಜಿ.ವೀರಪ್ಪ, ವಿರುಪಾಕ್ಷಪ್ಪ ಸಂಗನಾಳ, ವಾಸಣ್ಣ ಕುರಡಗಿ, ಎಸ್.ಬಿ. ನಾಗರಳ್ಳಿ, ಅಂದಾನಪ್ಪ ಮೇಟಿ, ಎಸ್.ಸಿ. ಡಂಬಳ, ಪ್ರಭು ಹೆಬ್ಟಾಳ, ರವಿ ಮೂಲಿಮನಿ, ಹೇಮಂತಗೌಡ ಪಾಟೀಲ, ಸಿ.ಬಿ. ಚನ್ನಳ್ಳಿ, ವ್ಹಿ.ಟಿ. ಮೇಟಿ, ಎ.ಬಿ. ಚನ್ನಳ್ಳಿ ಬಾಬು, ಹನಮಂತಗೌಡ
ಪಾಟೀಲ, ಚನ್ನಪ್ಪ ತಾಂಬ್ರಗುಂಡಿ, ಸುರೇಶ ಅಬ್ಬಿಗೇರಿ, ಉಮೇಶ ಚನ್ನಳ್ಳಿ, ಅಂದಪ್ಪ ಗಡ್ಡದ, ವಿಶ್ವನಾಥಗೌಡ ಪಾಟೀಲ, ಶಿವಾನಂದ ಚಾಕಲಬ್ಬಿ, ಗುರುಪುತ್ರಪ್ಪ ಸಂಶಿ, ಪ್ರಲ್ಹಾದಗೌಡ ಮೂಗನೂರು, ರಾಮಚಂದ್ರ ಕಲಾಲ್, ಶಿವಪ್ಪ ಚಿಕ್ಕಣ್ಣನವರ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ವಿರುಪಾಕ್ಷಪ್ಪ ತಾಂಬ್ರಗುಂಡಿ, ರಾಮಪ್ಪ ನಾಗನೂರು, ಈರಣ್ಣ ಜೋಬಾಳಿ, ಶೋಭಾ ಮೇಟಿ ಮತ್ತಿತರರು ಪಾಲ್ಗೊಂಡಿದ್ದರು. ಸೋಮರಡ್ಡಿ ಬಸಾಪುರ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಮೇಟಿ ಸ್ವಾಗತಿಸಿದರು. ಕಲ್ಮೇಶ ಕಳಕರಡ್ಡಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.