ಬೊಮ್ಮಾಯಿಗೆ ಚೌತಿ ಚಂದ್ರನಂತಾದ ಜನೋತ್ಸವ: 28ರ ಜನೋತ್ಸವ ಮತ್ತೆ ಮುಂದಕ್ಕೆ..

Team Udayavani, Aug 18, 2022, 9:55 AM IST

news basavaraj

ಬೆಂಗಳೂರು : ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ‌ ಬಸವರಾಜ್ ಬೊಮ್ಮಾಯಿ ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮ ಈಗ ಅವರ ಪಾಲಿಗೆ ಚೌತಿ ಚಂದ್ರಮನಂತಾಗಿದೆ.
ಒಂದಿಲ್ಲೊಂದು ಕಾರಣಕ್ಕೆ ಜನೋತ್ಸವ ಕಾರ್ಯಕ್ರಮದತ್ತ ಕಣ್ಣಿಟ್ಟು ನೋಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಬೊಮ್ಮಾಯಿ ಅವರಿಗೆ ಎದುರಾಗುತ್ತಿದ್ದು, ಜನೋತ್ಸವ ಈಗ ಮತ್ತೆ ಮುಂದೂಡಿಕೆಯಾಗಿದೆ.

ಈ‌‌ ಹಿಂದೆ ಜನೋತ್ಸವ ಕಾರ್ಯಕ್ರಮ‌ ನಿಗದಿಯಾಗಿದ್ದಾಗ ಪ್ರವೀಣ್ ನೆಟ್ಟಾರು ಹತ್ಯೆ ನಡೆಯಿತು. ಆಗ ಸರಕಾರ ವರ್ಷಾಚರಣೆ ಸಂಭ್ರಮ ನಡೆಸುವುದು ಬೇಡ ಎಂದು ಕಾರ್ಯಕರ್ತರು ಪಟ್ಟು ಹಿಡಿದರೂ ಬೊಮ್ಮಾಯಿ ಜನೋತ್ಸವದ ಜಪದಲ್ಲಿದ್ದರು. ತಡರಾತ್ರಿ ಹೈಕಮಾಂಡ್ ನ ಹಿರಿಯರೊಬ್ಬರು ಕರೆ ಮಾಡಿ ” ಪ್ರಸಂಗಾವಧಾನತೆ” ಎಂಬ ಶಬ್ದ ಕನ್ನಡದ ಡಿಕ್ಶನರಿಯಲ್ಲಿ ಇರುವುದು ಗೊತ್ತೇ ? ಎಂದು ಪ್ರಶ್ನಿಸಿದ್ದರು.

ಹೀಗಾಗಿ ಜಗವೆಲ್ಲ ಮಲಗಿರಲು ಎದ್ದ ಬುದ್ಧನ ರೀತಿ ಮಧ್ಯರಾತ್ರಿ 12 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಜನೋತ್ಸವವನ್ನು ರದ್ದುಗೊಳಿಸಿದ ನಿರ್ಧಾರ ಪ್ರಕಟಿಸಿದ್ದರು. ಈಗ ಪಕ್ಷದ ವೇದಿಕೆಯಲ್ಲಿ ಚರ್ಚಿಸದೇ ಆಗಷ್ಟ್ ೨೮ ರಂದು ಜನೋತ್ಸವ ನಡೆಸುವುದಾಗಿ ಪ್ರಕಟಿಸಿದ್ದರು. ಆದರೆ ಪಕ್ಷ ಅದಕ್ಕೆ ಮತ್ತೆ ತಡೆ ಒಡ್ಡಿದೆ. ನಾಡು ಗೌರಿ- ಗಣೇಶ ಹಬ್ಬದ ಸಂಭ್ರಮದಲ್ಲಿ ಇರುವಾಗ ಜನೋತ್ಸವ ಬೇಡ ಎಂದು ಕಾರಣ ನೀಡಲಾಗಿದೆ.

ಬೊಮ್ಮಾಯಿ ಅವರ ” ಪೊಲಿಟಿಕಲ್ ಬಾಸ್ ” ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದ ಬೆನ್ನಲ್ಲೇ ಬೊಮ್ಮಾಯಿ ಅವರ ರಾಜಕೀಯ ಸಮಾವೇಶಕ್ಕೆ ಮತ್ತೊಮ್ಮೆ ಬ್ರೇಕ್ ಬಿದ್ದಿದೆ. ಕಾಕತಾಳೀಯವಾದರೂ ರಾಜಕೀಯವಾಗಿ ಇದು ಹಲವು ಲೆಕ್ಕಾಚಾರ ಹಾಗೂ ಸಂದೇಶ ರವಾನೆಗೆ ಕಾರಣವಾಗಿದ್ದು, ಜನೋತ್ಸವದಲ್ಲಿ ಜನರತ್ತ ವಿಕ್ಟರಿ ಸಿಂಬಲ್ ಬೀಸಲು ಕಾಯುತ್ತಿರುವ ಬೊಮ್ಮಾಯಿ ಅವರಿವೆ ಜನೋತ್ಸವ ಚೌತಿ ಚಂದ್ರನ‌ ದರ್ಶನದಂತಾಗಿದೆ.

ಟಾಪ್ ನ್ಯೂಸ್

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Denotification Case: ಬಿಎಸ್‌ವೈ-ಎಚ್‌ಡಿಕೆ ಮೇಲೆ ಡಿನೋಟಿಫೈ ಅಸ್ತ್ರ

Denotification Case: ಬಿಎಸ್‌ವೈ-ಎಚ್‌ಡಿಕೆ ಮೇಲೆ ಡಿನೋಟಿಫೈ ಅಸ್ತ್ರ

GDP

GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

kKasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

Kasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

6

Anekal: ಶಾಲಾ ಬಸ್‌ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-GGV

Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Denotification Case: ಬಿಎಸ್‌ವೈ-ಎಚ್‌ಡಿಕೆ ಮೇಲೆ ಡಿನೋಟಿಫೈ ಅಸ್ತ್ರ

Denotification Case: ಬಿಎಸ್‌ವೈ-ಎಚ್‌ಡಿಕೆ ಮೇಲೆ ಡಿನೋಟಿಫೈ ಅಸ್ತ್ರ

GDP

GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.