Boycott ಎಫೆಕ್ಟ್: 7 ದಿನದಲ್ಲಿ 50 ಕೋಟಿ ರೂ. ಗಳಿಸಲು ವಿಫಲವಾದ “ಲಾಲ್ ಸಿಂಗ್ ಚಡ್ಡಾ”
ಕಳೆದ ಗುರುವಾರ ಬಿಡುಗಡೆಗೊಂಡಿದ್ದ ಲಾಲ್ ಸಿಂಗ್ ಚಡ್ಡಾ ಮೊದಲ ದಿನ 11.70 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.
Team Udayavani, Aug 18, 2022, 1:38 PM IST
ಮುಂಬೈ: ದೇಶಾದ್ಯಂತ ತೀವ್ರ ವಿರೋಧ ಹಾಗೂ ಬಾಯ್ಕಾಟ್ ಟ್ರೆಂಡಿಂಗ್ ಆದ ಪರಿಣಾಮ ಆಮಿರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾಕ್ಕೆ ಪ್ರೇಕ್ಷಕರ ನೀರಸ ಪ್ರತಿಕ್ರಿಯೆಯಿಂದ ಬಾಕ್ಸಾಫೀಸ್ ನಲ್ಲಿ ದಯನೀಯ ಸೋಲು ಕಂಡಿದೆ.
ಇದನ್ನೂ ಓದಿ:ನಕಲಿ ಸುದ್ದಿ ಹರಡುತ್ತಿದ್ದ ಭಾರತದ 7 ಮತ್ತು ಪಾಕ್ ನ 1 ಯೂಟ್ಯೂಬ್ ಚಾನೆಲ್ ನಿಷೇಧಿಸಿದ ಕೇಂದ್ರ
ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಆದರೆ ಬಾಕ್ಸಾಫೀಸ್ ನಲ್ಲಿ 50 ಕೋಟಿ ರೂಪಾಯಿ ಗಳಿಸಲು ವಿಫಲವಾಗಿದೆ. ಪಿಂಕ್ ವಿಲ್ಲಾ ಮಾಹಿತಿ ಪ್ರಕಾರ, ಆಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ 7ನೇ ದಿನ ಗಳಿಸಿದ್ದು ಕೇವಲ 1.55 ಕೋಟಿ ರೂಪಾಯಿ. ಆಗಸ್ಟ್ 17ರಂದು ಚಿತ್ರದ ಒಟ್ಟು ಕಲೆಕ್ಷನ್ 49.23 ಕೋಟಿ ರೂಪಾಯಿ ಎಂದು ತಿಳಿಸಿದೆ.
ಹಾಲಿವುಡ್ ನ ಕ್ಲಾಸಿಕ್ ಸಿನಿಮಾವಾದ ಫಾರೆಸ್ಟ್ ಗಂಪ್ ನ ರಿಮೇಕ್ ಆಗಿರುವ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದು, ಸುಮಾರು 180 ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿನಿಮಾ ಚಿತ್ರೀಕರಣಗೊಂಡಿತ್ತು.
ಕಳೆದ ಗುರುವಾರ ಬಿಡುಗಡೆಗೊಂಡಿದ್ದ ಲಾಲ್ ಸಿಂಗ್ ಚಡ್ಡಾ ಮೊದಲ ದಿನ 11.70 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಸಿನಿಮಾ ವಾರಾಂತ್ಯದ ರಜೆಯಲ್ಲಿ ಭರ್ಜರಿ ಗಳಿಕೆ ಕಾಣಲಿದೆ ಎಂಬುದು ಚಿತ್ರತಂಡದ ನಿರೀಕ್ಷೆಯಾಗಿತ್ತು. ಆದರೆ Boycott ಲಾಲ್ ಸಿಂಗ್ ಚಡ್ಡಾ ಟ್ರೆಂಡಿಂಗ್, ಕರಿನಾ ಕಪೂರ್ ಹೇಳಿಕೆ ಇದೀಗ ಮುಳುವಾದಂತಾಗಿದೆ.
ಏಳು ದಿನಗಳಲ್ಲಿಯೂ ಲಾಲ್ ಸಿಂಗ್ ಚಡ್ಡಾ ಬಾಕ್ಸಾಫೀಸ್ ನಲ್ಲಿ 50 ಕೋಟಿ ರೂಪಾಯಿ ಗಳಿಸಲು ಹೆಣಗಾಡುವಂತಾಗಿದೆ. ಈ ನಿಟ್ಟಿನಲ್ಲಿ ಆಮಿರ್ ಅವರ ಸಿನಿ ಪಯಣದಲ್ಲಿ ಕಳಪೆ ಪ್ರದರ್ಶನ ಕಂಡ ಕೆಲವು ಸಿನಿಮಾಗಳ ಪಟ್ಟಿಗೆ ಲಾಲ್ ಸಿಂಗ್ ಚಡ್ಡಾ ಕೂಡಾ ಸೇರಿದಂತಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.