ರಾಷ್ಟ್ರೀಯ ಲೋಕ ಅದಾಲತ್; 1942 ಪ್ರಕರಣ ಇತ್ಯರ್ಥ
Team Udayavani, Aug 18, 2022, 5:40 PM IST
ಆಳಂದ: ಇಲ್ಲಿನ ನ್ಯಾಯಾಲಯದಲ್ಲಿ ಬಹುದಿನಗಳಿಂದ ಇತ್ಯರ್ಥವಾಗದೆ ಉಳಿದುಕೊಂಡಿದ್ದ ಕಕ್ಷಿದಾರರ ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪರಸ್ಪರ ರಾಜೀ ಸಂಧಾನದ ಮೂಲಕ ಇಲ್ಲಿನ ಮೂವರು ನ್ಯಾಯಾಧೀಶರು ಪ್ರತ್ಯೇಕವಾಗಿ ತಮ್ಮ ವ್ಯಾಪ್ತಿಯ ಒಟ್ಟು 1942 ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು.
ನ್ಯಾಯಾಲಯ ಸಭಾಂಗಣದಲ್ಲಿ ಲೋಕ ಅದಾಲತ್ ನಡೆಸಿದ ಹಿರಿಯ ಶ್ರೇಣಿಯ ನ್ಯಾಯಾಧೀಶ ಎಸ್.ಎಂ. ಅರುಟಗಿ ಹಲವು ರೀತಿಯ ಪ್ರಕರಣಗಳ ವಿಚಾರಣೆ ನಡೆಸಿ, ಸಂಧಾನ ಮೂಲಕ ಬ್ಯಾಂಕ್‌ಗಳ ಮತ್ತು ಗ್ರಾಹಕರ ನಡುವಿನ ವ್ಯಾಜಗಳು, ಸಿವಿಲ್ ಪ್ರಕರಣ, ಆಸ್ತಿ ಇಬ್ಭಾಗ ಪ್ರಕರಣ, ಭೂ ಕಬ್ಜೆ ಪ್ರಕರಣ, ವಾಹನ ಅಪಘಾತ ಪ್ರಕರಣಗಳು ಹೀಗೆ ಒಟ್ಟು 12 ಪ್ರಕರಣಗಳನ್ನು ಇತ್ಯರ್ಥಪಡಿಸಿದರು.
ಮತ್ತೊಂದೆಡೆ ಪ್ರಧಾನ ಸಿವಿಲ್ ನ್ಯಾಯಾಲಯ ಸಭಾಂಗಣದಲ್ಲಿ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ ಅವರು, ಪ್ರಕರಣ ಪೂರ್ವ ವ್ಯಾಜ್ಯಗಳ ಆಸ್ತಿ ವಿವಾದ, ಜೀವನಾಂಶ ಭತ್ಯೆ ಪ್ರಕರಣ ಹಾಗೂ ಜನನ ಮತ್ತು ಮರಣ ದಾವೆಗಳು, ಕ್ರಿಮಿನಲ್ ಪ್ರಕರಣ, ಎನ್‌ಐಎ ಆ್ಯಕ್ಟ್ ಪ್ರಕರಣ ಸೇರಿ 1095 ಪ್ರಕರಣ ಇತ್ಯರ್ಥಗೊಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಕು. ಸ್ನೇಹ ಪಾಟೀಲ ವಿವಿಧ ರೀತಿಯ 835 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ಇಲ್ಲಿನ ಮೂರು ನ್ಯಾಯಾಲಯದಲ್ಲಿನ ಒಟ್ಟು ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ 12 ಮತ್ತು ಕಿರಿಯ ಶ್ರೇಣಿಯಲ್ಲಿ 1095 ಹಾಗೂ ಹೆಚ್ಚುವರಿ ನ್ಯಾಯಾಲಯದಲ್ಲಿ 835 ಪ್ರಕರಣ ಸೇರಿ ಒಟ್ಟು 1942 ಪ್ರಕರಣಗಳು ರಾಜೀಸಂಧಾನ ಮೂಲಕ ಇತ್ಯರ್ಥಗೊಂಡಿವೆ.
ಪ್ರಕರಣ ಇತ್ಯರ್ಥಪಡಿಸಲು ಪ್ರಧಾನ ಸಿವಿಲ್ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಿಕಿ ಶುಭಶ್ರೀ ಬಡಿಗೇರ, ಹೆಚ್ಚುವರಿ ಸಿವಿಲ್ ನಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕಿ ಜ್ಯೋತಿ ವಿ., ನ್ಯಾಯವಾದಿ ಸಂಘದ ಅಧ್ಯಕ್ಷ ನಾಗೇಶ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕಮಲಾಕರ್ ವಿ. ರಾಠೊಡ, ಹಿರಿಯ ನ್ಯಾಯವಾದಿ ಎ.ಡಬ್ಲ್ಯು. ಅನ್ಸಾರಿ, ಬಿ.ಎ. ದೇಶಪಾಂಡೆ, ಸಿ.ಎನ್. ತಾಟಿ, ಎಸ್.ಎ. ಪಾಟೀಲ, ದೇವಾನಂದ ಹೋದಲೂರಕರ್, ಡಿ.ಎಸ್. ನಾಡಕರ್, ಎಸ್.ಡಿ.ಬೋಸಗೆ, ಮಹಾದೇವ ಹತ್ತಿ, ಸ್ವಾಮಿರಾವ್ ಚನ್ನಗುಂಡ ಹಾಗೂ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳ ಸಹಕಾರದಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.