ಪ್ರಾಥಮಿಕ ಶಿಕ್ಷಾ ವರ್ಗ ಆಯೋಜನೆ ಸ್ವಾಗತಾರ್ಹ
Team Udayavani, Aug 19, 2022, 3:03 PM IST
ದಾವಣಗೆರೆ: ಬಂಜಾರ (ಲಂಬಾಣಿ) ಸಮಾಜದಕುಲಗುರು ಸಂತ ಸೇವಾಲಾಲ್ ಅವರ ಜನ್ಮಸ್ಥಳಸೂರಗೊಂಡನಕೊಪ್ಪದ ಮಹಾಮಠದಲ್ಲಿಆರ್‌ಎಸ್ಸೆಸ್ ಐಟಿಸಿ (ಉದ್ಯೋಗಿನಿ ಪ್ರಾಥಮಿಕಶಿಕ್ಷಾ ವರ್ಗ) ಶಿಬಿರ ಹಮ್ಮಿಕೊಂಡಿರುವುದುಸ್ವಾಗತಾರ್ಹ ಎಂದು ಜಿಲ್ಲಾ ಬಂಜಾರ(ಲಂಬಾಣಿ) ಸೇವಾ ಸಂಘದ ಗೌರವಾಧ್ಯಕ್ಷಜಿ. ಮಂಜಾ ನಾಯ್ಕ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಆರೆಸ್ಸೆಸ್, ಸಂಘಪರಿವಾರದೊಂದಿಗೆ ಗೋರ್ ಬಂಜಾರಸಮುದಾಯ ಅವಿನಾಭಾವ ಸಂಬಂಧಹೊಂದಿದೆ. ನಮ್ಮ ಸಮುದಾಯದವರುಕಾರ್ಯಕ್ರಮಕ್ಕೆ ಪ್ರಾರಂಭ ಹಂತದಿಂದಮುಕ್ತಾಯದವರೆಗೂ ರಕ್ಷಣೆಗೆ ನಿಂತುಯಾವುದೇ ಅಡ್ಡಿ ಅಡೆತಡೆ ಇಲ್ಲದಂತೆ ಸುಗಮವಾಗಿ ನಡೆಸಿಕೊಡುತ್ತೇವೆ ಎಂದರು. ಆರ್‌ಎಸ್‌ಎಸ್ ಸ್ಥಾಪನೆಯ ಕ್ಷಣದಿಂದಕರ್ನಾಟಕ ರಾಜ್ಯವೂ ಸೇರಿದಂತೆ ಇಡೀಭಾರತಾದ್ಯಂತ ಗೋರ್ ಬಂಜಾರ ಸಮುದಾಯನಿರಂತರವಾಗಿ ವಿವಿಧ ಕ್ಷೇತ್ರಗಳಲ್ಲಿ ಕೈಜೋಡಿಸಿಸೇವೆ ಸಲ್ಲಿಸುತ್ತಿದೆ.
ಗೋರ್ ಸಮುದಾಯದಅನೇಕರು ಸಂಘ ಮತ್ತು ಪರಿವಾರದವಿವಿಧ ಸಂಘಟನೆಗಳಲ್ಲಿ ಉನ್ನತ ಜವಾಬ್ದಾರಿನಿರ್ವಹಿಸುತ್ತಿದ್ದಾರೆ. ಅಂತಹ ದೇಶಭಕ್ತ ಧರ್ಮಸಂಘಟನೆಯೊಂದಿಗೆ ದೇಶಸೇವೆಯ ಕೆಲಸದಲ್ಲಿಭಾಗಿಯಾಗಿರುವುದು ನಮ್ಮ ಹೆಮ್ಮೆ. ಯಾವುದೇಜಾತಿ ಭೇದವಿಲ್ಲದೆ ಗೋರ್ ಬಂಜಾರಸಮುದಾಯದ ಸಹಸ್ರಾರು ಯುವಕರಿಗೆ ಪ್ರಶಿಕ್ಷಣವನ್ನು ನೀಡಿ ಅವರಲ್ಲಿ ಮಾನಸಿಕ ,ತಾರ್ಕಿಕ ಬೌದ್ಧಿಕ ಮತ್ತು ದೈಹಿಕ ಸಾಮರ್ಥಯವನ್ನುವೃದ್ಧಿಸಿ ಅವರ ಅಭಿರುಚಿ ಮತ್ತು ಸಾಮರ್ಥ್ಯಕ್ಕೆಅನುಗುಣವಾಗಿ ರಾಜ್ಯ ಮತ್ತು ರಾಷ್ಟ್ರೀಯಪ್ರಮುಖ ಜವಾಬ್ದಾರಿಗಳನ್ನು ನೀಡಿದೆ ಮತ್ತುಬೆಳವಣಿಗೆಯಲ್ಲಿ ಸಹಕಾರ ನೀಡುತ್ತಿದೆ.
ಎಲ್ಲಸಮುದಾಯಗಳನ್ನು ಸಮನವಾಗಿ ಗೌರವಿಸುವಎಲ್ಲ ಸಂಪ್ರದಾಯಗಳನ್ನು ಪರಂಪರೆಗಳನ್ನುಎಲ್ಲ ಪೂಜಾ ಪದ್ಧತಿಗಳನ್ನು ಶ್ರದ್ಧೆಯಿಂದ ಗೌರವಿಸುವ ರಾಷ್ಟ್ರೀಯ ಸ್ವಯಂಸೇವಕಸಂಘದ ಬಗ್ಗೆ ಇಲ್ಲ ಸಲ್ಲದ ಆರೋಪಗಳುಖಂಡನೀಯ. ಶಿಬಿರದ ರಕ್ಷಣೆಗೆ ನಾವು ಬದ್ಧಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.