ಶನಿವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ
Team Udayavani, Aug 20, 2022, 7:25 AM IST
ಮೇಷ: ವಿದ್ಯಾರ್ಥಿಗಳಿಗೆ ಧಾರ್ಮಿಕ ಮುಖಂಡ ರಿಗೆ, ರಾಜಕೀಯ ಕ್ಷೇತ್ರದವರಿಗೆ, ಆಹಾ ರೋದ್ಯಮ, ಧಾತುದ್ರವ್ಯ ಉದ್ಯಮದವರಿಗೆ ಉತ್ತಮ ಶುಭಫಲ. ದೀರ್ಘ ಪ್ರಯಾಣದಿಂದ ನಿರೀಕ್ಷಿತ ಲಾಭ. ದಾಂಪತ್ಯ ಸುಖ. ವೈವಾಹಿಕ ವಿಚಾರದಲ್ಲಿ ಪ್ರಗತಿ.
ವೃಷಭ: ಭೂ, ಗೃಹ, ವಾಹನಾದಿ ವಿಚಾರದಲ್ಲಿ ಪ್ರಗತಿ. ಮಿತ್ರರಿಂದಲೂ ಮಾತೃಸಮಾನರಿಂದಲೂ ಪ್ರೋತ್ಸಾಹ. ಪರರಿಗೋಸ್ಕರ ಪ್ರಯಾಣ. ವಸ್ತ್ರೋದ್ಯಮ ಆಭರಣೋದ್ಯಮದವರಿಗೆ ಶುಭಫಲ. ನಿರೀಕ್ಷಿತ ಸ್ಥಾನ ಸುಖ. ಆರೋಗ್ಯ ಸ್ಥಿರ . ಇಂದ್ರಿಯ ನಿಗ್ರಹವಿರಲಿ.
ಮಿಥುನ: ಸಜ್ಜನರಲ್ಲಿ ಸ್ತ್ರೀಯರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಜಲೋತ#ನ್ನ ವಸ್ತುಗಳ ಉದ್ಯಮಿಗಳಿಗೆ ಅಭಿವೃದ್ಧಿ. ವಿದೇಶ ವ್ಯವಹಾರದಲ್ಲಿ ಅನುಕೂಲ. ನಿರೀಕ್ಷಿತ ಧನಾಗಮ. ಉದರ ಸಂಬಂಧಿ ಆರೋಗ್ಯದ ಕಡೆ ಗಮನವಿರಲಿ. ದಂಪತಿಗಳು ಚರ್ಚೆಗೆ ಅವಕಾಶ ನೀಡದಿರಿ.
ಕರ್ಕ: ನೂತನ ಮಿತ್ರರ ಆಗಮನ. ಪ್ರಯಾಣ ಪಾಲುಗಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ. ಜಲೋತ್ಪನ್ನ ವಸ್ತುಗಳಿಂದ ಲಾಭ. ಆರೋಗ್ಯದಲ್ಲಿ ಸುಧಾರಣೆ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಗೃಹೋಪರಕರಣ ವಸ್ತು ಸಂಗ್ರಹ. ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿ ಸುಖ.
ಸಿಂಹ: ವಿದ್ಯಾರ್ಥಿಗಳಿಗೆ ಶ್ರಮದಿಂದ ನಿರೀಕ್ಷಿತ ಸ್ಥಾನ ಸುಖ. ದಂಪತಿಗಳು ಆರೋಗ್ಯದ ಬಗ್ಗೆ ಗಮನಹರಿಸಿ. ಸೌಂದರ್ಯವರ್ಧಕ ವಸ್ತುಗಳ ವ್ಯವಹಾರಸ್ಥರಿಗೆ, ಸಮುದ್ರೋತ್ಪನ್ನ ವಸ್ತುಗಳ ಕ್ರಯ ವಿಕ್ರಯರಿಗೆ, ವಿದೇಶ ವ್ಯವಹಾರಸ್ಥರಿಗೆ ಪ್ರಗತಿ.
ಕನ್ಯಾ: ಆರೋಗ್ಯದ ಬಗ್ಗೆ ಎಚ್ಚರವಿರಲಿ. ಸಂಸಾರದಲ್ಲಿ, ಪಾಲುದಾರಿಕಾ ವ್ಯವಹಾರದಲ್ಲಿ ಹೊಂದಾಣಿಕೆಯಿಂದ ಕಾರ್ಯ ಸಿದ್ಧಿ. ದೂರ ಪ್ರದೇಶದ ವ್ಯವಹಾರದಲ್ಲಿ ನಿರೀಕ್ಷಿತ ಫಲಿತಾಂಶ. ಅತಿಯಾಗಿ ನಂಬಿ ಮೋಸ ಹೋಗದಿರಿ. ವಿದ್ಯಾರ್ಥಿಗಳಿಗೆ ಯೋಗ್ಯ ಸ್ಥಾನ.
ತುಲಾ: ಆರೋಗ್ಯ ಸುದೃಢ. ದೈಹಿಕವಾಗಿಯೂ ಮಾನಸಿಕವಾಗಿಯೂ ಸಂತೋಷ ಪ್ರದ. ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಉದ್ಯೋಗ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಅಧ್ಯಯನ ಪ್ರವೃತ್ತಿಯವರಿಗೆ ಸದವಕಾಶ ಲಭ್ಯ. ಗುರುಹಿರಿಯರ ಮಾರ್ಗದರ್ಶನ ಲಭ್ಯ.
ವೃಶ್ಚಿಕ: ಉತ್ತಮ ನಾನಾ ರೀತಿಯ ಚಟುವಟಿಕೆ ಗಳಿಂದ ಕೂಡಿದ ದಿನ. ಆಸ್ತಿ ವಿಚಾರದಲ್ಲಿ ಅಭಿವೃದ್ಧಿಯ ನಡೆ. ಮನೆಯಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಲಿಗೆ ಅನುಕೂಲಕರ ಪರಿಸ್ಥಿತಿ. ದೀರ್ಘ ಪ್ರಯಾಣಗಳಿಂದ ನಿರೀಕ್ಷಿತ ಕಾರ್ಯ ಪ್ರಗತಿ.
ಧನು: ಮಾನಿಸಿಕ ಗೊಂದಲಗಳಿದ್ದರೂ ಶಾರೀರಿಕ ಸುಖ ಉತ್ತಮ. ಅನಿರೀಕ್ಷಿತ ಧನಾಗಮ. ಮಾತಿನಲ್ಲಿ ಎಚ್ಚರವಿರಲಿ. ಸಹೋದ್ಯೋಗಿಗಳ ಬಗ್ಗೆ ಗಮನಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ ಸಂಭವ. ನೂತನ ಮಿತ್ರರ ಸಮಾಗಮ. ಸಾಂಸಾರಿಕ ಸುಖ ಮಧ್ಯಮ.
ಮಕರ: ಆರೋಗ್ಯ ಉತ್ತಮ ಆದರೂ ಶಿಸ್ತಿನ ಕೊರತೆ ಆಗದಂತೆ ಗಮನಹರಿಸಿ. ವಾಕ್ ಚತು ರತೆ ಯಿಂದ ಕೆಲಸಕಾರ್ಯಗಳಲ್ಲಿ ಜಯ. ಉತ್ತಮ ಧನಾ ರ್ಜನೆ. ಸಹೋದರ ಸಮಾನರು ಸಹೋದ್ಯೋಗಿ ಗಳಿಂದ ಸಹಕಾರ ಸ್ಪಂದನ. ದೂರದ ಮಿತ್ರರ ಸಮಾಗಮ.
ಕುಂಭ: ಮಧ್ಯಮ ಆರೋಗ್ಯ. ಭೂಮಿ ವಾಹನ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ನಿರೀಕ್ಷಿತ ಪ್ರಗತಿ. ದೂರದ ಪ್ರಯಾಣ ಸಂಭವ. ಅಧಿಕ ಧನಾರ್ಜನೆ. ಮಿತ್ರರಿಂದ ಬಂಧುಗಳಿಂದಲೂ ಉತ್ತಮ ಸಹಕಾರ. ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದ ದಿನ.
ಮೀನ: ಆರೋಗ್ಯ ಉತ್ತಮ. ಧನಾರ್ಜನೆ ತೃಪ್ತಿದಾಯಕ. ಅನ್ಯರ ಸಹಾಯ ದೊರಕದು. ಸ್ವಂತ ಪರಿಶ್ರಮದ ಮೇಲೆ ಗಮನವಿರಲಿ. ವ್ಯವಹಾರ ಉದ್ಯೋಗ ಸಾವದಾನದ ಪ್ರಗತಿ. ದಂಪತಿಗಳಲ್ಲಿ ಪರಸ್ಪರ ಪ್ರೋತ್ಸಾಹ ಅಗತ್ಯ. ವಿದ್ಯಾರ್ಥಿಗಳಿಗೆ ಗುರು ಹಿರಿಯರಿಗೆ ಸಂತೋಷದಿಂದ ಕೂಡಿದ ದಿನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.