![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 20, 2022, 2:59 PM IST
ಬೆಂಗಳೂರು:ಜನಪ್ರಿಯ ಟಿವಿ ಧಾರವಾಹಿ ”ಜೊತೆ ಜೊತೆಯಲಿ” ತಂಡ ಪ್ರಮುಖ ಪಾತ್ರಧಾರಿ ಅನಿರುದ್ಧ್ ಜತ್ಕರ್ ಅವರನ್ನು ತಂಡದಿಂದ ಹೊರ ಹಾಕಿದೆ ಮಾತ್ರವಲ್ಲದೆ ಕಿರುತೆರೆಯಿಂದ 2 ವರ್ಷ ಬ್ಯಾನ್ ಮಾಡಲಾಗಿದೆ.
ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರು ಅನಿರುದ್ಧ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅವರ ವಿರುದ್ಧ ದೂರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅನಿರುದ್ಧ್ ಮತ್ತು ನಿರ್ದೇಶಕ ಆರೂರು ಜಗದೀಶ್ ನಡುವೆ ಧಾರವಾಹಿ ಸೆಟ್‌ನಲ್ಲಿ ಹಲವು ಭಿನ್ನಾಭಿಪ್ರಾಯಗಳು ಕಂಡುಬಂದಿದ್ದು, ರಾಜಿ ಸಂಧಾನ ನಡೆದರೂ ಬಗೆ ಹರಿದಿಲ್ಲ ಎನ್ನಲಾಗಿದೆ. ಶೂಟಿಂಗ್ ಸೆಟ್‌ನಿಂದ ಅನಿರುದ್ಧ್ ಹೊರನಡೆದಿದ್ದು,ಅಸಹಕಾರ ತೋರಿರುವ ಅವರನ್ನು ಕಿರುತೆರೆಯಿಂದ 2 ವರ್ಷ ಬ್ಯಾನ್ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿರುದ್ಧ್ ಘಟನೆಯಿಂದ ನನ್ನ ಮಾನ ಹಾನಿಯಾಗಿದೆ. ಅವರಿಗೇನೂ ತೊಂದರೆ ಆಗಿಲ್ಲ. ನಾನು ಶೂಟಿಂಗ್ ಹಿಂದಿನ ದಿನ ಸೀನ್ ಪೇಪರ್ ಕೊಡಲು ಹೇಳುತ್ತಿದ್ದೆ. ಸಾಕಷ್ಟು ತಯಾರಿ ಮಾಡಿಯೇ ಹೋಗುತ್ತಿದ್ದೆ. ಅಧಿಕೃತ ಮಾಹಿತಿ ಬಂದಿದ್ದು, ಮನಸ್ತಾಪಗಳು ಸರ್ವೇ ಸಾಮಾನ್ಯ. ಇಲ್ಲಿ ಆಗಿದ್ದು ಕಥೆಗೋಸ್ಕರ, ಅದನ್ನು ಹೊರಗಡೆ ಹೇಳುವ ಅವಶ್ಯಕತೆ ಇಲ್ಲ. ಅವರು ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಹಾಗಾಗಿ ನಾನು ಮಾತನಾಡುತ್ತಿದ್ದೇನೆ. ನನ್ನಲ್ಲಿ ದುರಹಂಕಾರ ಇಲ್ಲ, ಅಭಿಮಾನಿಗಳಿಗೂ ಗೊತ್ತಿದೆ ಎಂದರು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.