ಆಟಿಕೆಗಳನ್ನು ಕೊಳ್ಳುವಾಗ ಎಚ್ಚರದಿಂದಿರಿ! ;ಕಿವಿಗಳ ಬಗ್ಗೆ ಎಚ್ಚರ ವಹಿಸಿ


Team Udayavani, Aug 21, 2022, 10:19 AM IST

2

ಮಕ್ಕಳು ಸದ್ದು ಉಂಟು ಮಾಡುವ ಆಟಿಕೆಗಳನ್ನು ಬಹುವಾಗಿ ಪ್ರೀತಿಸುತ್ತಾರೆ. ದಡಬಡ ಸದ್ದು ಮಾಡುವ, ಕೀರಲು ಧ್ವನಿ ಹೊರಡಿಸುವ ಅಥವಾ ವಿಚಿತ್ರ ಸದ್ದು ಉಂಟು ಮಾಡುವ ಆಟಿಕೆಗಳು ಎಂದರೆ ಮಕ್ಕಳಿಗೆ ಬಹಳ ಇಷ್ಟ. ತಮ್ಮ ಮಕ್ಕಳನ್ನು ಖುಷಿಯಾಗಿರಿಸುವುದಕ್ಕಾಗಿ ಹೆತ್ತವರು ಶಬ್ದ ಮಾಡುವ ಆಟಿಕೆಗಳನ್ನು ಖರೀದಿಸಿಕೊಡಬಹುದು. ಆದರೆ ಇಂತಹ ಗೊಂಬೆಗಳನ್ನು ಕೊಳ್ಳುವುದಕ್ಕೆ ಮುನ್ನ ಎರಡೆರಡು ಬಾರಿ ಆಲೋಚಿಸಿ. ಜಾಗ್ರತೆಯಿಂದ ಇರಿ. ಶಬ್ದ ಉಂಟು ಮಾಡುವ ಗೊಂಬೆಗಳು ನಿಮ್ಮ ಮಕ್ಕಳ ಆಲಿಸುವ ಸಾಮರ್ಥ್ಯಕ್ಕೆ ಅಪಾಯಕಾರಿಯಾಗಿರಬಹುದು. ಈ ಲೇಖನದ ಮೂಲಕ ಅವು ಹೇಗೆ ಮತ್ತು ಯಾಕೆ ಅಪಾಯಕಾರಿ ಎಂಬುದನ್ನು ತಿಳಿದುಕೊಳ್ಳೋಣ.

ಬಕೆಟ್‌ನಲ್ಲಿ ಸ್ವಲ್ಪ ಕಾಲದ ಬಳಿಕ ಹನಿ ಹನಿ ನೀರು ಸಂಗ್ರಹಗೊಂಡು ಬಕೆಟ್‌ ತುಂಬುವ ಹಾಗೆಯೇ ಭಾರೀ ಸದ್ದುಗದ್ದಲದಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟ ಕೂಡ ನಿಧಾನವಾಗಿ ಬೆಳೆದುಬರುವಂಥದ್ದು. ಒಂದೇ ಬಾರಿಗೆ ಇದು ಉಂಟಾಗುವುದಿಲ್ಲ. ಪ್ರತೀ ಬಾರಿ ಸದ್ದನ್ನು ಕೇಳಿಸಿಕೊಂಡಾಗಲೂ ಅದು ಸ್ವಲ್ಪ ಸ್ವಲ್ಪವೇ ಹೆಚ್ಚಾಗುತ್ತ ಹೋಗುತ್ತದೆ. ಭಾರೀ ಸದ್ದಿನಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟವು ವಿಶೇಷವಾಗಿ ಉದ್ಯೋಗ ಸಂಬಂಧಿಯಲ್ಲದ ಪರಿಸರಗಳಲ್ಲಿ ಸಾಮಾನ್ಯವಾಗಿ ಗುರುತಿಸಲಾಗದ ತೊಂದರೆಯಾಗಿರುತ್ತದೆ. ಮಕ್ಕಳು ಮತ್ತು ಹದಿಹರಯದವರು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಸದ್ದಿನಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟಕ್ಕೀಡಾಗುತ್ತಿದ್ದಾರೆ ಅಥವಾ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಸಂಶೋಧನೆಗಳು ಹೇಳಿವೆ. ಬಹಳ ಸರಳವಾದ ಎಚ್ಚರಿಕೆಯ ಕ್ರಮಗಳಿಂದ ಸದ್ದಿನಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟವನ್ನು ಸಂಪೂರ್ಣವಾಗಿ ತಪ್ಪಿಸಬಹುದಾಗಿದೆ.

ಸದ್ದನ್ನು ಡೆಸಿಬಲ್‌ (ಛಆ)ಗಳಲ್ಲಿ ಅಳೆಯುತ್ತಾರೆ. ಸಾಮಾನ್ಯ ಸಂಭಾಷಣೆಗಳು 60-70 ಡಿಬಿಗಳಲ್ಲಿದ್ದರೆ 85 ಡಿಬಿಗಿಂತ ಮೇಲ್ಪಟ್ಟ ಯಾವುದೇ ಸದ್ದು ಹಾನಿಕರ ಎಂದು ಗುರುತಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಸದ್ದು ಮಾಡುವ ಜನಪ್ರಿಯ ಆಟಿಕೆಗಳು ಈ ಮಿತಿಗಿಂತ ಬಹಳಷ್ಟು ಹೆಚ್ಚು ಡೆಸಿಬಲ್‌ ಸದ್ದು ಹೊರಡಿಸುತ್ತಿದ್ದು, 110 ಡಿಬಿವರೆಗಿನ ಸದ್ದು ಹೊರಡಿಸುತ್ತವೆ. ಇಂತಹ ಆಟಿಕೆಗಳ ಸದ್ದನ್ನು ವಯಸ್ಕರ ಕಿವಿ ಒಂದು ನಿಮಿಷದ ವರೆಗೆ ಕೇಳಿಸಿಕೊಳ್ಳುವುದು ಸುರಕ್ಷಿತ. ಹಾಗಾದರೆ ಅಂತಹ ಆಟಿಕೆಗಳು ಮಕ್ಕಳ ಶ್ರವಣ ಶಕ್ತಿಯ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದನ್ನು ಆಲೋಚಿಸಿ. ಮಕ್ಕಳ ಕಿವಿಗಳು ವಯಸ್ಕರದ್ದಕ್ಕಿಂತ ಬಹಳ ಸಣ್ಣದಾಗಿರುತ್ತವೆ; ಅದರಲ್ಲೂ ಸದ್ದನ್ನು ಕಿವಿ ತಮಟೆಯತ್ತ ಕಳುಹಿಸಿಕೊಡುವ ಕಿವಿ ಕುಹರ ಸಣ್ಣದಾಗಿರುತ್ತದೆ. ಇದರರ್ಥವೆಂದರೆ, ದೊಡ್ಡವರ ಕಿವಿಗೆ ದೊಡ್ಡದೆನಿಸುವ ಸದ್ದು ಮಕ್ಕಳ ಕಿವಿಗೆ ಭಾರೀ ದೊಡ್ಡ ಸದ್ದಾಗಿರುತ್ತದೆ. ಇಷ್ಟು ದೊಡ್ಡ ಸದ್ದು ಹೊರಡಿಸುವ ಗೊಂಬೆಗಳ ಜತೆಗೆ ಮಕ್ಕಳು ದಿನದಲ್ಲಿ ಕೆಲವು ನಿಮಿಷಗಳ ಕಾಲ ಕಳೆದರೂ ಕಾಲಾಂತರದಲ್ಲಿ ಅವರ ಕಿವಿಗಳಿಗೆ ಶಾಶ್ವತವಾದ ಹಾನಿಯನ್ನು ಉಂಟು ಮಾಡಬಹುದು. ಮಕ್ಕಳಲ್ಲಿ ಶೇ. 20ರಷ್ಟು ಮಂದಿ ಯಾವುದಾದರೊಂದು ವಿಧದ ಭಾರೀ ಸದ್ದಿನಿಂದ ಉಂಟಾಗುವ ಶ್ರವಣಶಕ್ತಿ ನಷ್ಟ ಹೊಂದಿರುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ.

ಗೊಂಬೆಗಳು ಹೊರಡಿಸುವ ಸದ್ದು -ಒತ್ತಡದ ಮಟ್ಟವು ಗೊಂಬೆ ಇರುವ ಮೇಲ್ಮೈಯಿಂದ 50 ಸೆಂ. ಮೀ. (19 ಇಂಚುಗಳು)ಗೆ 85 ಡೆಸಿಬಲ್‌ಗ‌ಳನ್ನು ಮೀರಬಾರದು ಎಂದು ಅಮೆರಿಕನ್‌ ಸೊಸೈಟಿ ಆಫ್ ಟೆಸ್ಟಿಂಗ್‌ ಆ್ಯಂಡ್‌ ಮೆಟೀರಿಯಲ್ಸ್‌ (ಎಎಸ್‌ಟಿಎಂ) ಹೇಳುತ್ತದೆ. ಆದರೆ ಮಗು ಆಟಿಕೆಯನ್ನು ತನ್ನ ಕಿವಿಯ ಹತ್ತಿರ ಹಿಡಿದಾಗ ಸದ್ದಿನ ಮಟ್ಟ ಬಹಳ ಹೆಚ್ಚಾಗಿರುತ್ತಿದ್ದು, ಇದರಿಂದ ಶ್ರವಣ ಸಾಮರ್ಥ್ಯಕ್ಕೆ ಅಪಾಯ ಉಂಟಾಗುತ್ತದೆ. ಮಕ್ಕಳು ಸಾಮಾನ್ಯವಾಗಿ ಆಟಿಕೆಗಳನ್ನು ಮುಖ, ಕಿವಿಯ ಹತ್ತಿರ ಹಿಡಿದುಕೊಂಡು ಆಟವಾಡುತ್ತಾರೆ, ಅಲ್ಲದೆ ಅವರ ತೋಳುಗಳು ದೊಡ್ಡವರದ್ದಕ್ಕಿಂತ ಕಿರಿದಾಗಿರುತ್ತವೆ. ಹೀಗಾಗಿ ನಿಮ್ಮ ಮಗುವಿಗೆ ಸದ್ದು ಮಾಡುವ ಆಟಿಕೆ ಖರೀದಿಸುವುದಕ್ಕೆ ಮುನ್ನ ನಿಮ್ಮ ಮನೆಯ ನೈಜ ಪರಿಸರದಲ್ಲಿ ಮಗು ಅದರ ಜತೆಗೆ ಹೇಗೆ ಆಟವಾಡುತ್ತದೆ ಎಂಬ ಬಗ್ಗೆ ಎರಡೆರಡು ಬಾರಿ ಆಲೋಚಿಸಿ.

ಶ್ರವಣ ಸಾಮರ್ಥ್ಯವನ್ನು ಗಮನದಲ್ಲಿ ಇರಿಸಿಕೊಂಡು, ಹೆಚ್ಚು ಉತ್ತಮ ಆಟೋಟ ಕಾರ್ಯಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ನಿಮ್ಮ ಮಗುವಿಗೆ ನೆರವಾಗಿ. ಇಂದಿನ ಮನೋರಂಜನೆಯ ದೃಶ್ಯಗಳು ಮತ್ತು ಆಟಿಕೆಗಳು ಮಕ್ಕಳು ಮಾತ್ರವಲ್ಲದೆ ಹಿರಿಯರನ್ನು ಕೂಡ ಭಾರೀ ಸದ್ದುಗದ್ದಲದತ್ತ ಆಕರ್ಷಿಸುವಂತಿವೆ. ಅದೃಷ್ಟವಶಾತ್‌ ಕಡಿಮೆ ಸದ್ದಿನ, ಮೌನವಾಗಿದ್ದೂ ಮನೋರಂಜನೆ ಅನುಭವಿಸುವ ಅನೇಕ ಆಯ್ಕೆಗಳು ನಮ್ಮೆದುರಿಗಿವೆ. ಹೆತ್ತವರು ಮತ್ತು ಮಕ್ಕಳ ಆರೈಕೆದಾರರು ಮಕ್ಕಳ ಜತೆಗೆ ಈ ಆಯ್ಕೆಗಳನ್ನು ಮಾಡಿಕೊಂಡು ಸಂತೋಷವಾಗಿರಬೇಕು. ಉದಾಹರಣೆಗೆ, ಮಕ್ಕಳಿಗೆ ಒಳ್ಳೆಯ ಪುಸ್ತಕಗಳನ್ನು ಓದಿಹೇಳುವ ಹವ್ಯಾಸವನ್ನು ಬೆಳೆಸಿಕೊಂಡರೆ ಅವರ ಜ್ಞಾನ ವೃದ್ಧಿಯಾಗುತ್ತದೆ ಮಾತ್ರವಲ್ಲದೆ ಹೆತ್ತವರು ಮತ್ತು ಮಕ್ಕಳ ನಡುವೆ ಉತ್ತಮ ಸಂಬಂಧದ ಬೆಸುಗೆ ಉಂಟಾಗುತ್ತದೆ. ಸದ್ದು ಮಾಡುವ ಆಟಿಕೆಗಳನ್ನು ಸಂಪೂರ್ಣವಾಗಿ ವರ್ಜಿಸಬೇಕು ಎಂದೇನಿಲ್ಲ. ಕಡಿಮೆ ಪ್ರಮಾಣದ ಸದ್ದು ಮಾಡುವ, ಶೈಕ್ಷಣಿಕ ಕಂಪ್ಯೂಟರ್‌ ಗೇಮ್‌ಗಳು, ಮಿದುಳಿಗೆ ಕೆಲಸ ಕೊಡುವ ಪಝಲ್‌ ಗಳು, ರಚನಾತ್ಮಕ ಆಟಗಳು ಮತ್ತು ಚೆಸ್‌ನಂತಹ ಬೋರ್ಡ್‌ ಆಟಗಳು ಕಡಿಮೆ ಸದ್ದಿನ ನಡುವೆ ಆಟವಾಡುತ್ತ ಕಲಿಯುವುದಕ್ಕೆ ಕೂಡ ಅನುವು ಮಾಡಿಕೊಡುತ್ತವೆ. ಕೊನೆಯದಾಗಿ, ಸಂಗೀತ ರಸಮಂಜರಿಗಳು, ಹಬ್ಬಗಳು, ಸುಡುಮದ್ದು ಪ್ರದರ್ಶನ ಇತ್ಯಾದಿಗಳನ್ನು ನೋಡಲು ಹೋಗುವಾಗ ನೀವು ಮತ್ತು ನಿಮ್ಮ ಮಗು ಸಹಿತ ಕುಟುಂಬದವರು ಇಯರ್‌ ಪ್ಲಗ್‌ ಹಾಕಿಕೊಳ್ಳುವುದನ್ನು ಮರೆಯದಿರಿ.

ಮುಂದಿನ ಬಾರಿ ನಿಮ್ಮ ಮಗುವಿಗೆ ಆಟಿಕೆ ಖರೀದಿಸುವುದಕ್ಕೆ ಮುನ್ನ ಅದು ಮಗುವಿನ ಶ್ರವಣ ಸಾಮರ್ಥ್ಯಕ್ಕೆ ಉಂಟುಮಾಡಬಲ್ಲ ಅಪಾಯದ ಬಗ್ಗೆ ಗಮನ ಹರಿಸಿ. ಇದರ ಜತೆಗೆ ಮಕ್ಕಳು ವೀಡಿಯೋ/ ಕಂಪ್ಯೂಟರ್‌ ಗೇಮ್‌ಗಳು ಮತ್ತು ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ಹೆಡ್‌ಫೋನ್‌ಗಳನ್ನು ಉಪಯೋಗಿಸುತ್ತಾರೆ. ಸದ್ದಿನಿಂದ ಶ್ರವಣ ಶಕ್ತಿ ನಷ್ಟ ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಇಲ್ಲಿ ಕೆಲವು ಸರಳ ತಂತ್ರಗಳನ್ನು ನೀಡಲಾಗಿದೆ.

„ ನಿಮ್ಮ ಮಗು ಹೆಡ್‌ಫೋನ್‌ಗಳನ್ನು ಅತೀ ಹೆಚ್ಚು ವ್ಯಾಲ್ಯೂಮ್‌ನಲ್ಲಿ ಇರಿಸಿ ಕೇಳದಂತೆ ನೋಡಿಕೊಳ್ಳಿ.

„ ಮೊಬೈಲ್‌ ಫೋನನ್ನು ಮಗುವಿನ ಕೈಗೆ ಕೊಡುವಾಗ ಧ್ವನಿಯನ್ನು ಸ್ವೀಕಾರಾರ್ಹ ಮಟ್ಟದಲ್ಲಿಯೇ ಲಾಕ್‌ ಮಾಡಿ ಕೊಡಿ.

„ ಸದ್ದು ಹೊರಡಿಸುವ ಆಟಿಕೆಗಳನ್ನು ಮಗುವಿಗೆ ಕೊಡುವುದಕ್ಕೆ ಮುನ್ನ ಪರೀಕ್ಷಿಸಿಯೇ ಕೊಡಿ. ನೀವು ಗಮನಿಸಬೇಕಾದ ಸರಳ ಸತ್ಯವೆಂದರೆ, ಆಟಿಕೆಯ ಸದ್ದು ನಿಮಗೆ ಕಿರಿಕಿರಿ ಎನ್ನಿಸುವಂತಿದ್ದರೆ ನಿಮ್ಮ ಮಗುವಿಗೆ ಅದು ಭಾರೀ ದೊಡ್ಡ ಸದ್ದಾಗಿರುತ್ತದೆ.

„ ಆಟಿಕೆ ದೊಡ್ಡ ಸದ್ದು ಹೊರಡಿಸುತ್ತದೆಯೇ ಇಲ್ಲವೇ ಎಂಬ ಬಗ್ಗೆ ಗೊಂದಲ ಇದೆಯೇ? ನಿಮ್ಮ ಮೊಬೈಲ್‌ಗೆ ಉಚಿತವಾಗಿ ಸಿಗುವ ಡೆಸಿಬಲ್‌ ಮೀಟರ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. 85 ಡೆಸಿಬಲ್‌ಗಿಂತ ಹೆಚ್ಚಿರುವ ಯಾವುದೇ ಸದ್ದು ನಿಮ್ಮ ಮಗುವಿಗೆ ತೊಂದರೆದಾಯಕವಾಗಿರುತ್ತದೆ.

-ಡಾ| ಉಷಾ ಶಾಸ್ತ್ರಿ, ಅಸೋಸಿಯೇಟ್‌ ಪ್ರೊಫೆಸರ್‌, ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.