ಜಾಲಿಕಟ್ಟಿ ಶ್ರೀ ಬಸವೇಶ್ವರ ಜಾತ್ರೆ ಇಂದಿನಿಂದ

ಉತ್ತರ ಕರ್ನಾಟಕ ಬಹುಸಂಖ್ಯಾತ ಭಕ್ತರ ಆರಾಧ್ಯ ದೇವ

Team Udayavani, Aug 21, 2022, 12:31 PM IST

8

ಬೆನಕಟ್ಟಿ: ಹಚ್ಚ ಹಸರಿನ ತಪ್ಪಲಿನ ಗುಡ್ಡದ ಪ್ರದೇಶದ ಮಧ್ಯೆ ಉದ್ಭವಗೊಂಡಿರುವ ಉತ್ತರ ಕರ್ನಾಟಕ ಬಹುಸಂಖ್ಯಾತ ಭಕ್ತರ ಆರಾಧ್ಯ ದೇವನಾಗಿರುವ ಜಾಲಿಕಟ್ಟಿ- ಜೀವಾಪೂರ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ ಆ.21ರಂದು ಆರಂಭಗೊಂಡು ಆ.25ರಂದು ಮಂಗಲಗೊಳ್ಳಲಿದೆ.

ಋಷಿ-ಮುನಿಗಳ ತಪೋವನ, ಸುತ್ತಲೂ ಹಸಿರು ಕಾನನ, ದೇವಸ್ಥಾನ ಹತ್ತಿರ ಕೊಳ್ಳವಿದೆ. ದೇವಸ್ಥಾನದಲ್ಲಿ ಕಪ್ಪು ಕಲ್ಲಿನ ಸುಂದರ ಕೆತ್ತನೆಯುಳ್ಳ ನಂದಿ ವಿಗ್ರಹವಿದೆ. ಇದೇ ಶ್ರೀ ಬಸವೇಶ್ವರ. ಶ್ರೀ ಬಸವೇಶ್ವರ ಮುಂಭಾಗದಲ್ಲಿ ಶ್ರೀ ವೀರಭದ್ರೇಶ್ವರ, ಶಿವಪಾರ್ವತಿ, ನೀಲಾಂಬಿಕಾ ನವಗ್ರಹ ದೇಗುಲಗಳೂ ಇವೆ. ಬೆಟ್ಟದಲ್ಲಿ 117 ಮೆಟ್ಟಿಲಗಳನ್ನೇರಿ ಬಂದರೆ ಕೂಗುವ ಬಸವಣ್ಣ ಎಂಬ ಪುಟ್ಟ ದೇವಾಲಯವಿದೆ. ಗ್ರಾಮದಲ್ಲಿ ಎಲ್ಲ ದೇವಾಲಯವನ್ನು ಹೊಂದಿದ್ದರಿಂದ ಜಾಲಿಕಟ್ಟಿ ಗ್ರಾಮವು ದೇವ ಮಂದಿರ ಗ್ರಾಮವಾಗಿದೆ.

ಇತಿಹಾಸ: 12ನೇ ಶತಮಾನದಲ್ಲಿ ಶರಣರ ವಧೆಯಾಯಿತು. ನಂತರ ಶರಣರು ಕಲ್ಯಾಣ ತೊರೆದು ರಾಜ್ಯದ ಪಶ್ಚಿಮ ಕರಾವಳಿಯ ಮೂಲೆ ಮೂಲೆಗಳಲ್ಲಿ ಸಂಚರಿಸಿದರು. ಶರಣರು ಗೊಡಚಿ, ಕಟಕೋಳ, ಚುಂಚನೂರ, ಬೆನಕಟ್ಟಿ ಮಾರ್ಗವಾಗಿ ಜಾಲಿಕಟ್ಟಿಗೆ ಆಗಮಿಸಿ ಅಲ್ಲಿನ ಬೆಟ್ಟದ ಪ್ರದೇಶದಲ್ಲಿ ತಂಗಿದರು. ಅಲ್ಲಿ ಶರಣ ಮಾಚಿದೇವ(ಮಾಚಯ್ಯ)ನ ಅನುಚರಣರೆಲ್ಲ ಕೆಲ ಕಾಲ ಜಾಲಿಗಿಡದ ಬುಡದಲ್ಲಿ ತಂಗಿ ಪೂಜೆ ಮಾಡಿದರು ಅದಕ್ಕಾಗಿ ಜಾಲಿಕಟ್ಟಿ ಎಂಬ ನಾಮಕರಣವಾಯಿತೆಂದು ಪ್ರತೀತಿಯಿದೆ.

ಕಾರ್ಯಕ್ರಮಗಳು

ಆ.21ರಂದು ಶ್ರೀ ಬಸವೇಶ್ವರ ರಥೋತ್ಸವಕ್ಕೆ ಕಳಸ ಇಡಲಾಗುವುದು, ರಾತ್ರಿ ಭಜನಾ ಮಂಡಳದವರಿಂದ ಭಜನಾ ಜಾಗರಣೆ ಜರುಗಲಿದೆ. ಆ.22ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಬಸವೇಶ್ವರ, ಈಶ್ವರ ದೇವರುಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಜರುಗಲಿದೆ. ಮದ್ಲೂರ ಗ್ರಾಮದ ಕುರಿಯವರ ಮನೆತನದಿಂದ ನೈವೇದ್ಯ ಆಗಮಿಸುವುದು. ಸಂಜೆ 4 ಗಂಟೆಗೆ ಮಲ್ಲಪಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಅವಧೂತ ಅಜ್ಜನವರ ನೇತೃತ್ವದಲ್ಲಿ ರಥೋತ್ಸವಕ್ಕೆ ಪೂಜೆ ಸಲ್ಲಿಸಲಾಗುವುದು. ಜಾಲಿಕಟ್ಟಿ, ಜೀವಾಪೂರ, ತಲ್ಲೂರ ದೇಸಾರ ವಾಡೆಯಿಂದ ವಿವಿಧ ವಾದ್ಯ ಮೇಳದೊಂದಿಗೆ ಆರತಿಗಳು ಗ್ರಾಮಕ್ಕೆ ಆಗಮಿಸುವವು. ಶ್ರೀ ಬಸವೇಶ್ವರನ ಪಲ್ಲಕಿ, ನಂದಿಕೋಲ ಉತ್ಸವ, ನಂತರ ಸಂಜೆ 5 ಗಂಟೆಗೆ ಶ್ರೀ ಬಸವೇಶ್ವರನ ರಥೋತ್ಸವ ಜರುಗಲಿದೆ. ಆ.23ರಂದು ಬಯಲು ಜಾತ್ರೆ ವಿಜೃಂಭಣೆಯಿಂದ ಜರುಗಲಿದೆ. ಅದೇ ದಿನ ರಾತ್ರಿ 10 ಗಂಟೆಗೆ ಶ್ರೀ ಕೂಗು ಬಸವೇಶ್ವರ ಪವರ್‌ ಸ್ಟಾರ್‌ ನಾಟ್ಯ ಸಂಘ ಹಾಗೂ ಗೆಳೆಯರ ಬಳಗದವರಿಂದ “ವಿಷದ ಹುತ್ತಕ್ಕೆ ಹಾಲೆರೆದ ಮುತ್ತೈದೆ’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಆ.25ರಂದು ಸಂಜೆ 5 ಗಂಟೆಗೆ ಶ್ರೀ ಬಸವೇಶ್ವರ ರಥೋತ್ಸವ ಕಳಸ ಇಳಿಸುವುದರೊಂದಿಗೆ ಜಾತ್ರೆ ಮಂಗಲಗೊಳ್ಳಲಿದೆ ಎಂದು ಶ್ರೀ ಬಸವೇಶ್ವರ ದೇವಸ್ಥಾನದ ಟ್ರಸ್ಟ್‌ ಕಮಿಟಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಜಾಲಿಕಟ್ಟಿ-ಜೀವಾಪೂರ ಗ್ರಾಮಸ್ಥರು ತಿಳಿಸಿದ್ದಾರೆ.

ಮಹಾಂತೇಶ ಗಿಲಾಕಿ

ಟಾಪ್ ನ್ಯೂಸ್

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: UT Khader, Basavaraja Horatti visited Suvrana vidhasoudha

Belagavi: ಸುವರ್ಣ ವಿಧಾನಸೌಧಕ್ಕೆ‌ ಯು.ಟಿ.ಖಾದರ್‌, ಬಸವರಾಜ ಹೊರಟ್ಟಿ ಭೇಟಿ

Belagavi: ಉದ್ಯಮಿ ಹ*ತ್ಯೆ ಪ್ರಕರಣ: ಪತ್ನಿ ಸೇರಿ ಮೂವರ ಬಂಧನ

Belagavi: ಉದ್ಯಮಿ ಹ*ತ್ಯೆ ಪ್ರಕರಣ: ಪತ್ನಿ ಸೇರಿ ಮೂವರ ಬಂಧನ

Belagavi: ಕಿತ್ತರೂ ಉತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲೂ ರಸಮಂಜರಿ ಕಾರ್ಯಕ್ರಮ

Belagavi: ಕಿತ್ತರೂ ಉತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲೂ ರಸಮಂಜರಿ ಕಾರ್ಯಕ್ರಮ

Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ

Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ

11-

Bailhongal: ಕರೆಂಟ್ ಶಾಕ್ ತಗುಲಿ ಮಹಿಳೆ ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Belagavi: UT Khader, Basavaraja Horatti visited Suvrana vidhasoudha

Belagavi: ಸುವರ್ಣ ವಿಧಾನಸೌಧಕ್ಕೆ‌ ಯು.ಟಿ.ಖಾದರ್‌, ಬಸವರಾಜ ಹೊರಟ್ಟಿ ಭೇಟಿ

16-bng

Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

15-

Bengaluru: ಎಎಸ್‌ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು

9

Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.