ಮೊಬೈಲ್ ಚಾರ್ಜರ್‌ನಲ್ಲಿ ರಹಸ್ಯ ಕ್ಯಾಮೆರಾವಿಟ್ಟು ಅಶ್ಲೀಲ ದೃಶ್ಯ ಸೆರೆ: ಆರೋಪಿ ಬಂಧನ
Team Udayavani, Aug 21, 2022, 2:12 PM IST
ಬೆಂಗಳೂರು: ಸಾರ್ವಜನಿಕರೇ ಮೊಬೈಲ್ ಚಾರ್ಜರ್‌ನಲ್ಲೂ ರಹಸ್ಯ ಕ್ಯಾಮೆರಾಗಳಿರುತ್ತವೆ ಎಚ್ಚರ. ಹೌದು, ಯುವತಿಯೊಬ್ಬಳ ಜತೆ ಲೈಂಗಿಕ ಸಂಪರ್ಕ ಬೆಳೆಸುವ ಉದ್ದೇಶದಿಂದ ಆಕೆಯ ಖಾಸಗಿ ಕೋಣೆಯಲ್ಲಿ ಮೊಬೈಲ್ ಜಾರ್ಜ್‌ರ್ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಅಶ್ಲೀಲ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಈಶಾನ್ಯ ವಿಭಾಗದ ಪೊಲೀಸರ ಅತಿಥಿಯಾಗಿದ್ದಾನೆ.
ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಮಹೇಶ್(30) ಬಂಧಿತ. ಆರೋಪಿಯಿಂದ ರಹಸ್ಯ ಕ್ಯಾಮೆರಾ ಅಳವಡಿಸಿದ್ದ ಮೊಬೈಲ್ ಚಾರ್ಜರ್, ಲ್ಯಾಪ್‌ಟಾಪ್, 2 ಮೆಮೊರಿ ಕಾರ್ಡ್, ಪೆನ್‌ಡ್ರೈವ್, 2 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ದೂರುದಾರ ಸಂತ್ರಸ್ತೆಯ ಪರಿಚಯಸ್ಥನಾಗಿದ್ದು, ಆಕೆಯ ಮನೆಗೆ ಬಂದಾಗ ರಹಸ್ಯ ಕ್ಯಾಮೆರಾ ಇಟ್ಟು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.
ಮಹೇಶ್ ಸಂತ್ರಸ್ತೆಯ ದೂರದ ಸಂಬಂಧಿ ಹಾಗೂ ಪರಿಚಯಸ್ಥ, ಸಂತ್ರಸ್ತೆಯ ಜತೆ ಲೈಂಗಿಕ ಸಂಪರ್ಕ ಬೆಳೆಸಲು ಅಪೇಕ್ಷಿಸಿದ್ದ. ಹೀಗಾಗಿ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆಕೆಯ ಮನೆಗೆ ಹೋಗಿದ್ದಾಗ, ಆಕೆಯ ಬೆಡ್‌ರೂಮ್ ನಲ್ಲಿ ಮೊಬೈಲ್ ಚಾರ್ಜ್‌ರ್‌ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದ. ಆಕೆಯ ಖಾಸಗಿ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅದನ್ನು ಆರೋಪಿ ಸಂಗ್ರಹಿಸಿ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ಕೆಲಸ ಅರಸಿ ಬಂದವಳನ್ನು ವೇಶ್ಯಾವಾಟಿಕೆಗೆ ದೂಡಿ,ಸಾಮೂಹಿಕ ಅತ್ಯಾಚಾರ: ಮಹಿಳೆ ಸೇರಿ ಮೂವರ ಬಂಧನ
ಇನ್‌ಸ್ಟ್ರಾಗ್ರಾಂನಲ್ಲಿ ಬ್ಲ್ಯಾಕ್‌ಮೇಲ್ : ಸಂತ್ರಸ್ತೆ ಇನ್‌ಸ್ಟ್ರಾಗ್ರಾಂನಲ್ಲಿ ಖಾತೆ ಹೊಂದಿದ್ದು, ಈ ವೇಳೆ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿದ್ದಾನೆ. ಪರಿಚಯವಿಲ್ಲದರಿಂದ ಸಂತ್ರಸ್ತೆ ಬ್ಲಾಕ್ ಮಾಡಿದ್ದರು. ಪುನಃ ಬೇರೆ ಬೇರೆ ಇನ್‌ಸ್ಟ್ರಾಗ್ರಾಂ ಖಾತೆಯಿಂದ ಸಂದೇಶ ಕಳುಹಿಸಿದ ಆರೋಪಿ, ಸಲುಗೆಯಿಂದ ಮಾತನಾಡುವಂತೆ ಸೂಚಿಸಿದ್ದಾನೆ. ಒಂದು ವೇಳೆ ಚಾಟ್ ಮಾಡದಿದ್ದರೆ ನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಅದನ್ನು ಸಂತ್ರಸ್ತೆ ನಿರ್ಲಕ್ಷಿಸಿದ್ದಾರೆ. ಬಳಿಕ ಆಕೆ ಕೆಲ ಸೆಕೆಂಡ್‌ಗಳ ವಿಡಿಯೋ ಕಳುಹಿಸಿ ಎಚ್ಚರಿಕೆ ನೀಡಿದ್ದಾನೆ. ಅದನ್ನು ನೋಡಿದ ಸಂತ್ರಸ್ತೆ, ಇದು ತನ್ನ ಖಾಸಗಿ ಕೋಣೆಯಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಖಾತ್ರಿಯಾಗುತ್ತಿದ್ದಂತೆ ಕೂಡಲೇ ಸೆನ್ ಠಾಣೆಗೆ ದೂರು ನೀಡಿದ್ದಾರೆ.
ಬಳಿಕ ತನಿಖೆ ನಡೆಸಿದ ಸೆನ್ ಠಾಣೆ ಠಾಣಾಧಿಕಾರಿ ಸಂತೋಷ್ ರಾಮ್ ಮತ್ತು ತಂಡ ಆರೋಪಿಯನ್ನು ಮೈಸೂರಿನ ಟಿ.ನರಸಿಪುರದಲ್ಲಿ ಬಂಧಿಸಿದ್ದಾರೆ. ಆಕೆ ಜತೆ ಲೈಂಗಿಕ ಸಂಪರ್ಕ ಬೆಳೆಸಲು ನಿರ್ಧರಿಸಿ, ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Waqf Notice: ವಕ್ಫ್ ಬೋರ್ಡ್ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
Election Campaign: ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ
Loan facility: ಕೇಂದ್ರ ಸರಕಾರದ ಯೋಜನೆಗಳಡಿ ಸಾಲ ಮಂಜೂರು ಹೆಚ್ಚಿಸಿ: ನಿರ್ಮಲಾ
MUST WATCH
ಹೊಸ ಸೇರ್ಪಡೆ
Toxic: ಯಶ್ ಚಿತ್ರಕ್ಕೆ ಬಂದ ಹಾಲಿವುಡ್ ನ ಜೆ.ಜೆ.ಪೆರ್ರಿ
Final Verdict: ಬುಲ್ಡೋಜರ್ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್ ಅಂತಿಮ ತೀರ್ಪು
BGT: ಭಾರತ ವಿರುದ್ದದ ಮೊದಲ ಟೆಸ್ಟ್ ಗೆ ಆಸೀಸ್ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ
Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!
Covid Scam: ಕೋವಿಡ್ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.