ಪದವಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕೌಶಲ್ಯ ಅಗತ್ಯ
ಪಠ್ಯೇತರ ಚಟುವಟಿಕೆಗಳ ಸಮಾರೋಪದಲ್ಲಿ ಬಿಇಎಸ್ ಕಾಲೇಜು ಪ್ರಾಚಾರ್ಯ ಡಾ|ಎಸ್.ಜಿ.ವೈದ್ಯ ಅಭಿಮತ
Team Udayavani, Aug 21, 2022, 3:50 PM IST
ಬ್ಯಾಡಗಿ: ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಬೆನ್ನಲ್ಲೇ, ಯುವಕರಿಗೆ ಉದ್ಯೋಗ ಕಲ್ಪಿಸುತ್ತಿರುವ ಮಾರುಕಟ್ಟೆಗಳು ತಂತ್ರಜ್ಞಾನದೊಂದಿಗೆ ಅತ್ಯಾಧುನಿಕವಾಗುತ್ತಿವೆ. ಇಂತಹ ನಾಟಕೀಯ ಬದಲಾವಣೆ ಕಂಡುಕೊಳ್ಳುವ ಮೂಲಕ ಯಾಂತ್ರೀಕೃತಗೊಂಡ ಕಂಪನಿಗಳು ಕೃತಕ ಬುದ್ಧಿಮತ್ತೆ ಹೊಂದಿರುವ ವಿದ್ಯಾರ್ಥಿಗಳ ಹುಡುಕಾಟದಲ್ಲಿವೆ. ಇದರಿಂದ ಉದ್ಯೋಗ ಪಡೆಯುವಲ್ಲಿ ಪೈಪೋಟಿ ಸಾಮಾನ್ಯವಾಗಿದೆ ಎಂದು ಬಿಇಎಸ್ ಕಾಲೇಜು ಪ್ರಾಚಾರ್ಯ ಡಾ|ಎಸ್.ಜಿ.ವೈದ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಬಿಇಎಸ್ ಮಹಾವಿದ್ಯಾಲಯದ ಸಭಾಭವನದಲ್ಲಿ ಏರ್ಪಡಿಸಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣವನ್ನು ಔಪಚಾರಿಕ ಶಿಕ್ಷಣದ ಅಂತಿಮ ಹಂತವೆಂದು ಪರಿಗಣಿಸುತ್ತಿರುವುದೇನೋ ನಿಜ. ಆದರೆ, ಸುಧಾರಿತ ತಂತ್ರಜ್ಞಾನ ಹೊಂದಿದ ಉದ್ಯೋಗಗಳಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಇಂತಹ ಅಗತ್ಯಗಳನ್ನು ನಿಭಾಯಿಸಬಲ್ಲ ಶೈಕ್ಷಣಿಕ ವ್ಯವಸ್ಥೆ ಅವಶ್ಯಕವೆನಿಸುತ್ತಿದೆ. ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣದಲ್ಲಿ ಇಂತಹ ಅವಕಾಶ ಕಲ್ಪಿಸುವ ಮೂಲಕ ಅವರಲ್ಲಿ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಬೇಕಾಗಿದೆ ಎಂದರು.
ಶೇ.54 ಪದವಿ ಶಿಕ್ಷಣ: ಹಿಂದಿನ ದಿನಗಳನ್ನು ಜ್ಞಾಪಿಸಿಕೊಂಡಾಗ ಉನ್ನತ ಶಿಕ್ಷಣದವರೆಗೂ ಹೋದವರ ಸಂಖ್ಯೆ ವಿರಳವಾಗಿತ್ತು. ಅವಿಭಕ್ತ ಕೌಟುಂಬಿಕ ವ್ಯವಸ್ಥೆಯಲ್ಲಿ ಬಹುತೇಕರು ಹೆಚ್ಚು ಸಮಯವನ್ನು ಕೃಷಿ ಚಟುವಟಿಕೆಯಲ್ಲಿ ಕಳೆಯುತ್ತಿದ್ದರು, ಹೀಗಾಗಿ, ಪದವಿ ಪಡೆದ ಮತ್ತು ಪಡೆಯದವರ ನಡುವೆ ಬಹಳಷ್ಟು ಅಂತರ ಸೃಷ್ಟಿಯಾಗಿತ್ತು. ಇದೀಗ ಶಿಕ್ಷಣ ರೂಪಾಂತರಗೊಂಡಿದ್ದು, ಉನ್ನತ ಶಿಕ್ಷಣ ಪಡೆದವರು ಆರ್ಥಿಕ ಭದ್ರತೆ ಕಂಡುಕೊಂಡಿದ್ದಾರೆ. ಹೀಗಾಗಿ, ಶೇ.54ರಷ್ಟು ಯುವಕರು ಪದವಿ ಶಿಕ್ಷಣ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ ಎಂದರು.
ಸ್ಕಿಲ್ ಡೆವೆಲಪಮೆಂಟ್ ಮಾಡಿಕೊಳ್ಳಿ:ಪಠ್ಯೇತರ ಚಟುವಟಿಕೆಗಳ ವಿಭಾಗದ ಮುಖ್ಯಸ್ಥ ಉಪನ್ಯಾಸಕ ಕೆ.ಎಂ.ಕಟಗಿಹಳ್ಳಿ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ. ಇದರಲ್ಲಿಯೇ ಉದ್ಯೋಗ ಬಯಸುವವರು ಸಂವಹನ (ಕಮ್ಯೂನಿಕೇಶನ್ ಸ್ಕಿಲ್) ಕಲೆಯಲ್ಲಿ ಪ್ರಾವೀಣ್ಯತೆ ಹೊಂದಬೇಕಾಗುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ನಡೆಯುವ ಸಂವಾದ (ಡಿಬೇಟ್) ಕಾರ್ಯಕ್ರಮ ಸೇರಿದಂತೆ ಪಠ್ಯೇತರ ವಿಭಾಗದಲ್ಲಿ ಹೆಚ್ಚಿನ ಆಸಕ್ತಿ ತೋರಬೇಕೆಂದರು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಡಾ.ಎಸ್.ಎನ್.ನಿಡಗುಂದಿ, ಗೌರವ ಕಾರ್ಯದರ್ಶಿ ಮುರುಳಿ ಜೋಷಿ, ನಿವೃತ್ತ ಪ್ರಾಚಾರ್ಯ ಕೆ.ಜಿ.ಖಂಡೇಬಾಗೂರ, ನಿವೃತ್ತ ಉಪನ್ಯಾಸಕರಾದ ಡಾ.ಪ್ರೇಮಾನಂದ ಲಕ್ಕಣ್ಣನವರ, ಎಂ.ಜಿ. ನಂದರಗಿ, ಡಾ.ಎಸ್.ಡಿ.ಬಾಲಾಜಿರಾವ್, ಚನ್ನಮ್ಮ ಕೋರಿಶೆಟ್ಟರ, ಪಿಎಂ.ರಾಮಗಿರಿ, ಎಸ್.ವಿ.ಉಜ್ಜಯನಿಮಠ, ನಿವೃತ್ತ ದೈಹಿಕ ನಿರ್ದೇಶಕ ಎಸ್.ಎಲ್.ತೆಂಬದ, ನಿವೃತ್ತ ಗ್ರಂಥಪಾಲಕ ಸಿ.ಸಿ.ಕೊಟಗಿ, ಉಪನ್ಯಾಸಕಾರದ ಡಾ.ಸುರೇಶ ಪಾಂಗಿ, ಎನ್. ಎಸ್.ಪ್ರಶಾಂತ್, ಪ್ರಭು ದೊಡ್ಮನಿ, ಮಹೇಶ ದೇವರಗುಡ್ಡ, ಶಿವನಗೌಡ ಪಾಟೀಲ, ನಿಂಗಪ್ಪ ಕುಡುಪಲಿ, ವಿಶ್ವನಾಥ ವಡೆಯನಪುರ, ಪ್ರವೀಣ ಬಿದರಿ, ಎಂ.ಎಚ್.ಮುಧೋಳಕರ, ಗ್ರಂಥಪಾಲಕ ಸಂತೋಷ್ ಉದ್ಯೋಗಣ್ಣನವರ ಸಿಬ್ಬಂದಿ ಗಳಾದ ಎಸ್.ಎಚ್.ಕುರಕುಂದಿ, ಮಾಲತೇಶ ಕರುಗಲ್ಲ, ಬಸಮ್ಮ ನಾಯ್ಕರ್ ಎಂ.ಆರ್.ಕೋಡಿಹಳ್ಳಿ ಇನ್ನಿತರರಿದ್ದರು.
ಪ್ರಾಧ್ಯಾಪಕಿ ಜ್ಯೋತಿ ಹಿರೇಮಠ ಸ್ವಾಗತಿಸಿ, ನಿವೇದಿತ ವಾಲಿಶೆಟ್ಟರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.