ಹನಿಟ್ರ್ಯಾಪ್: 50 ಲಕ್ಷ ರೂ. ಕಳಕೊಂಡ ಉದ್ಯಮಿ: ಓರ್ವ ಆರೋಪಿ, ಕಾಂಗ್ರೆಸ್ ನಾಯಕಿಯ ಬಂಧನ
Team Udayavani, Aug 22, 2022, 6:25 AM IST
ಮಂಡ್ಯ: ಲಾಡ್ಜ್ ನಲ್ಲಿ ಯುವತಿಯ ಜತೆಗಿದ್ದ ವೀಡಿಯೋವನ್ನು ಚಿತ್ರೀಕರಿಸಿಕೊಂಡು ಉದ್ಯಮಿಯಿಂದ ಸುಮಾರು 50 ಲಕ್ಷ ರೂ. ಪಡೆದಿರುವ ಆರೋಪದಲ್ಲಿ ಮಹಿಳೆಯೊಬ್ಬರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ನಗರದ ವಿವಿ ರಸ್ತೆಯಲ್ಲಿರುವ ಶ್ರೀನಿಗೋಲ್ಡ್‌ನ ಮಾಲಕ ಹಾಗೂ ಬಿಜೆಪಿ ವ್ಯಾಪಾರಿ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಜಗನ್ನಾಥ್ ಎಸ್. ಶೆಟ್ಟಿ ವಂಚನೆಗೆ ಒಳಗಾದವರು. ಮಂಡ್ಯದ ಸುಭಾಷ್ ನಗರದ 8ನೇ ಕ್ರಾಸ್ ನಿವಾಸಿ ಸಲ್ಮಾಬಾನು ಹಾಗೂ ಜಯಂತ್ ಆರೋಪಿಗಳಾಗಿದ್ದಾರೆ. ಪೊಲೀಸರು ಸಲ್ಮಾ ಬಾನುಳನ್ನು 10 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪ್ರಕರಣದ ವಿವರ
2022ರ ಫೆ. 26ರಂದು ರಾತ್ರಿ 10.45ರ ಸುಮಾ ರಿಗೆ ಮೈಸೂರಿಗೆ ತೆರಳಲು ಮಂಡ್ಯದ ಸಾರಿಗೆ ಬಸ್ ನಿಲ್ದಾಣದಲ್ಲಿ ಜಗನ್ನಾಥ್ ಎಸ್. ಶೆಟ್ಟಿ ನಿಂತಿದ್ದಾಗ ಆರೋಪಿಗಳಾದ ಸಲ್ಮಾಬಾನು ಹಾಗೂ ಜಯಂತ್ ಸೇರಿ ಇತರರು ಕಾರಿನಲ್ಲಿ ಬಂದು ಪರಿಚಯ ಮಾಡಿಕೊಂಡು ತಾವು ಮೈಸೂರಿಗೆ ತೆರಳುತ್ತಿದ್ದು, ಬನ್ನಿ ಎಂದು ಹತ್ತಿಸಿಕೊಂಡಿದ್ದಾರೆ.
ಅನಂತರ ನಮ್ಮ ಸ್ನೇಹಿತ ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ಚಿನ್ನದ ಬಿಸ್ಕೆಟ್ ತಂದಿದ್ದಾನೆ. ಅದನ್ನು ಪರೀಕ್ಷಿಸಿ ಅಸಲಿಯೇ, ನಕಲಿಯೇ ಎಂದು ತಿಳಿದು ಹೇಳಿ ಎಂದು ತಿಳಿಸಿದ್ದಾರೆ.
ನಾನು ಮಂಗಳೂರಿಗೆ ಹೋಗಬೇಕು. ಸಮಯ ಇಲ್ಲ ಎಂದಾಗ, 5 ನಿಮಿಷ ಬನ್ನಿ ಎಂದು ದರ್ಶನ್ ಲಾಡ್ಜ್ಗೆ ಕರೆದೊಯ್ದರು. ರೂಮಿಗೆ ಬಂದ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದರು. ಸ್ವಲ್ಪ ಹೊತ್ತಿನಲ್ಲಿ ರೂಮಿಗೆ 22ರಿಂದ 25 ವರ್ಷದ ಯುವತಿ ಬಂದಿದ್ದಳು. ಕೆಲವೇ ನಿಮಿಷಗಳಲ್ಲಿ ಸಲ್ಮಾಬಾನು, ಜಯಂತ್ ಹಾಗೂ ಇತರರು ಬಂದು, ನೀನು ಯುವತಿಯೊಂದಿಗೆ ಇರುವ ವೀಡಿಯೋ ಚಿತ್ರೀಕರಿಸಿಕೊಂಡಿದ್ದೇವೆ. ನಮಗೆ 4 ಕೋಟಿ ರೂ. ನೀಡಬೇಕು ಎಂದು ಹೇಳಿ ಹಲ್ಲೆ ನಡೆಸಿದರು. ಅನಂತರ ನಾನು 50 ಲಕ್ಷ ರೂ. ಕೊಡುವುದಾಗಿ ಒಪ್ಪಿಕೊಂಡು ಮಾರನೇ ದಿನ ಬೆಳಗ್ಗೆ 10 ಗಂಟೆಗೆ 25 ಲಕ್ಷ ರೂ. ಕೊಟ್ಟಿದ್ದೇನೆ. ಬಳಿಕ ಇದುವರೆಗೂ ಒಟ್ಟು 50 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಕಾರಣ ದೂರು ನೀಡಿದ್ದೇನೆಂದು ಜಗನ್ನಾಥ್ ತಿಳಿಸಿದ್ದಾರೆ.
ಆರೋಪಿಗಳು ಕುಖ್ಯಾತರು
ಸಲ್ಮಾಬಾನು, ಜಯಂತ್ ಸಹಿತ ಇತರ ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ದ್ದಾರೆ ಎಂದು ತಿಳಿದು ಬಂದಿದೆ. ಸಲ್ಮಾಬಾನು ಕಾಂಗ್ರೆಸ್ ಮುಖಂಡೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.