ಉಡುಪಿ ಜಿಲ್ಲೆಯ ರಜತೋತ್ಸವ ಸಂಭ್ರಮಕ್ಕೆ ದಿನಗಣನೆ…
Team Udayavani, Aug 22, 2022, 11:41 AM IST
ಉಡುಪಿ: ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟದ ಕೇಂದ್ರವಾಗಿದ್ದ ಅಜ್ಜರಕಾಡು 25 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಉದ್ಘಾಟನೆಗೂ ಕಾರಣವಾಯಿತು. ಈಗ ಜಿಲ್ಲೆಯ ರಜತೋತ್ಸವ ಉದ್ಘಾಟನೆಗೂ ಅಜ್ಜರಕಾಡು ಮೈದಾನ ಸಾಕ್ಷಿಯಾಗುತ್ತಿದೆ. ಆಗಲೂ ಸ್ವಾತಂತ್ರ್ಯ ದಿನಾಚರಣೆ ಮುಗಿದು 10 ದಿನಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮರುದಿನ ಮೊಸರು ಕುಡಿಕೆಯ ಸಂಭ್ರಮದಲ್ಲಿ ಜಿಲ್ಲೆ ಉದಯಿಸಿದಾಗ ಕೃಷ್ಣನ ಜನ್ಮದಿನದ ಸಡಗರದಂತೆಯೆ ಆಯಿತು. 20ನೇ ವರ್ಷದಂದು ಗಣೇಶ ಚತುರ್ಥಿ ಬಂದಿತ್ತು, ಈಗ ಜನ್ಮಾಷ್ಟಮಿ ಮುಗಿದು ಗಣೇಶ ಚತುರ್ಥಿ ಸಂಕ್ರಮಣ ಕಾಲಘಟ್ಟದಲ್ಲಿ ರಜತೋತ್ಸವಆಚರಣೆಯಾಗುತ್ತಿದೆ.
ಬೃಹತ್ ರ್ಯಾಲಿ
ಸಭಾ ಕಾರ್ಯಕ್ರಮದ ಮುನ್ನ ಆ. 25ರ ಅಪರಾಹ್ನ 3 ಗಂಟೆಗೆ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡು ಮೈದಾನದವರೆಗೂ ಬೃಹತ್ ರ್ಯಾಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಅರ್ಜುನ್ ಜನ್ಯ ಅವರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿವೆ.
ಐದು ತಿಂಗಳು ನಿರಂತರ ಕಾರ್ಯಕ್ರಮ
ಜಿಲ್ಲೆಯ ಎಲ್ಲ ಕಡೆಗಳಲ್ಲಿ ರಜತೋತ್ಸವದ ಸಂದೇಶ ನೀಡಲು ಮುಂದಿನ ಜ.25ರವರೆಗೆ ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ 25ನೇ ತಾರೀಕಿನಂದು ಉತ್ಸವ ನಡೆಸಲಾಗುತ್ತಿದ್ದು, ಸಮಾರೋಪದಲ್ಲಿ ಬೀಚ್ ಉತ್ಸವವೇ ಮೊದಲಾದ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸುವ ಇರಾದೆ ಇದೆ. ಪ್ರವಾಸೋದ್ಯಮವನ್ನು ಆಕರ್ಷಿಸಲು ಉಡುಪಿಯಿಂದ ರಥಯಾತ್ರೆ ಹೊರಡಲಿದೆ.
ಆಗ ಮುಖ್ಯಮಂತ್ರಿ, ಈಗ ರಾಜ್ಯಪಾಲರು
ಜಿಲ್ಲೆಯನ್ನು 1997ರ ಆ. 25 ರಂದು ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಉದ್ಘಾ ಟಿಸಿದ್ದರೆ ಈಗ ರಜತೋತ್ಸವ ಸಂಭ್ರಮವನ್ನು ಆ. 25ರ ಸಂಜೆ 5 ಗಂಟೆಗೆ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಉದ್ಘಾಟಿಸುವರು.
ಅಗಿಪಥ್ ದೌಡ್
ಆ.24ರಂದು ಕಾರ್ಕಳದ ಭುವನೇಂದ್ರ ಕಾಲೇಜಿನಿಂದ ಅಗ್ನಿಪಥ್ ದೌಡ್ ರ್ಯಾಲಿ ಹೊರಡಲಿದ್ದು ಕಾರ್ಕಳ, ಬೆಳ್ಮಣ್, ಶಿರ್ವ ಮಾರ್ಗವಾಗಿ ಆ.25ರಂದು ರಜತೋತ್ಸವದಲ್ಲಿ ಸಂಲಗ್ನಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ
Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ
Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.