ಬಿಬಿಎಂಪಿಗೆ ಹೊರೆಯಾದ ಮಾರ್ಷಲ್‌ಗಳು
Team Udayavani, Aug 22, 2022, 1:18 PM IST
ಬೆಂಗಳೂರು: ಗುತ್ತಿಗೆದಾರರ ಬಿಲ್ ಪಾವತಿ, ಯೋಜನೆಗಳ ಅನುಷ್ಠಾನಕ್ಕೆ ಹಣವಿಲ್ಲದೆ ಸರ್ಕಾರದಿಂದ ಅನುದಾನ ಪಡೆಯುವುದು ಸೇರಿ ಇನ್ನಿತರ ಕಾರಣಗಳಿಂದಾಗಿ ಬಿಬಿಎಂಪಿ ಆರ್ಥಿಕ ಸಂಕಷ್ಟದಲ್ಲಿದೆ. ಆದರೆ, ಮಾರ್ಷಲ್‌ಗಳ ಹೆಸರಲ್ಲಿ ಮಾತ್ರ ಪ್ರತಿ ವರ್ಷ 20 ಕೋಟಿ ರೂ.ಗೂ ಹೆಚ್ಚಿನ ವೆಚ್ಚ ಮಾಡಲಾಗುತ್ತಿದೆ.
ಆರ್ಥಿಕವಾಗಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಬಿಬಿಎಂಪಿ, ವೃಥಾ ವೆಚ್ಚ ಕಡಿವಾಣಕ್ಕೆ ಇನ್ನೂ ಮುಂದಾಗಿಲ್ಲ. ಶಿಕ್ಷಣ, ಎಂಜಿನಿಯರಿಂಗ್ ಸೇರಿ ವಿವಿಧ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಮರ್ಪಕ ಕೆಲಸಗಳಾಗುತ್ತಿಲ್ಲ. ಅದರಲ್ಲೂ ವಾರ್ಡ್ ಎಂಜಿನಿಯರ್‌ಗಳ ಕೊರತೆಯಿಂದಾಗಿ ವಾರ್ಡ್ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿದೆ. ಹೀಗಿದ್ದರೂ 973 ಜನ ಮಾರ್ಷಲ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಅವರ ವೇತನ ಸೇರಿ ಇನ್ನಿತರ ಕಾರ್ಯಕ್ಕಾಗಿ ವಾರ್ಷಿಕ 20 ಕೋಟಿ ರೂ.ಗೂ ಹೆಚ್ಚಿನ ಖರ್ಚು ಮಾಡಲಾಗುತ್ತಿದೆ.
ವಿಭಾಗಗಳ ನಡುವೆ ಗೊಂದಲ: ಬಿಬಿಎಂಪಿ ಆಡಳಿತ ವಿಭಾಗದ ಮಾಹಿತಿಯಂತೆ 973 ಮಾರ್ಷಲ್‌ಗಳು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಲಾ 25 ಸಾವಿರ ರೂ. ವೇತನ ನೀಡಲಾಗುತ್ತಿದೆ. ಅದರ ಪ್ರಕಾರ 973 ಮಾರ್ಷಲ್‌ಗಳಿಗಾಗಿ ಮಾಸಿಕ 2.43 ಕೋಟಿ ರೂ. ವ್ಯಯಿಸಲಾಗುತ್ತಿದೆ. ಆದರೆ, ಬಿಬಿಎಂಪಿ ಹಣಕಾಸು ವಿಭಾಗದ ಮಾಹಿತಿಯಂತೆ 437 ಮಾರ್ಷಲ್‌ಗಳು ಕೆಲಸ ಮಾಡುತ್ತಿದ್ದಾರೆ. ಅದನ್ನು ಗಮನಿಸಿದರೆ ಮಾಸಿಕ 1 ಕೋಟ ರೂ. ವೇತನ ಪಾವತಿಸಲಾಗುತ್ತಿದೆ. ಅದರ ಜತೆಗೆ ಮಾರ್ಷಲ್‌ಗಳಿಗೆ ಸಮವಸ್ತ್ರ, ಬೂಟು, ಗಸ್ತು ವಾಹನ ಸೇರಿ ಹೆಚ್ಚುವರಿಯಾಗಿ ವಾರ್ಷಿಕ 1 ಕೋಟಿ ರೂ.ಗೂ ಹೆಚ್ಚಿನ ಖರ್ಚು ಮಾಡಲಾಗುತ್ತಿದೆ. ಆಡಳಿತ ವಿಭಾಗದ ಮಾಹಿತಿಯನ್ನು ಗಮನಿಸಿದರೆ ಮಾರ್ಷಲ್‌ಗಳಿಗಾಗಿ ಬಿಬಿಎಂಪಿ ಮಾಡುತ್ತಿರುವ ವಾರ್ಷಿಕ ವೆಚ್ಚ 24 ಕೋಟಿ ರೂ. ದಾಟಲಿದೆ. ಅದೇ ಹಣಕಾಸು ವಿಭಾಗದ ಮಾಹಿತಿ ಯಂತೆ 12 ಕೋಟಿ ರೂ. ಹೆಚ್ಚಿನ ವೆಚ್ಚವಾಗುತ್ತಿದೆ.
ಜಾಗೃತಿ ಮೂಡಿಸುವುದೇ ಕೆಲಸ: ನಗರದಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಎನ್ನುವಂತೆ ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿದೆ. ಆರಂಭದಲ್ಲಿ ಮಾರ್ಷಲ್ ಗಳು ಜನರು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯುವುದು, ಕಸ ಎಸೆಯುವವರಿಗೆ ದಂ ಡ ವಿಧಿಸುವ ಕಾರ್ಯಕ್ಕೆ ನೇಮಕ ಮಾಡಲಾಗಿತ್ತು. ಅದರ ಜತೆಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಜನರ ನಿಯಂತ್ರಣದಂತಹ ಕೆಲಸಕ್ಕೆ ನೇಮಿಸಲಾಯಿತು. ಕೊರೊನಾ ಕಾಲದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದಕ್ಕೆ ಬಳಸಲಾಗಿತ್ತು. ಆದರೀಗ ಮಾರ್ಷಲ್‌ಗಳಿಗೆ ಸಮರ್ಪಕ ಕೆಲವೇ ಇಲ್ಲದಂತಾಗಿದೆ. ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ ತಡೆಯಂತಹ ಕೆಲಸದಲ್ಲಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಅದನ್ನು ಹೊರತುಪಡಿಸಿದರೆ ಘನತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ 262 ಮಾರ್ಷಲ್‌ಗಳು ಕೆಲಸ ಮಾಡುತ್ತಿದ್ದು, ಅವರುಗಳು ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಕಸ ಎಸೆಯುವುದನ್ನು ತಡೆಯುವ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ. ಅದರ ಜತೆಗೆ ಜನರಿಗೆ ಮಾಸ್ಕ್ ಧರಿಸುವುದು, ಕಸ ಎಸೆಯುವುದರಿಂದಾಗುವ ಸಮಸ್ಯೆಗಳ ಕುರಿತಂತೆ ಜನರಿಗೆ ತಿಳಿಹೇಳುತ್ತಾ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.
15 ಸಾವಿರ ಕೋಟಿ ರೂ. ಹೊಣೆಗಾರಿಕೆ : ಸದ್ಯ ಬಿಬಿಎಂಪಿಯ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಹಂತದಲ್ಲಿದೆ. ಆದರೂ, ಗುತ್ತಿಗೆದಾರರಿಗೆ ಬಿಲ್ ಪಾವತಿ, ಮುಂದೆ ಕೈಗೊಳ್ಳಬೇಕಿರುವ ಕಾಮಗಾರಿಗಳ ಮೊತ್ತ, ಸಾಲದ ಪ್ರಮಾಣ ಸೇರಿ ಬಿಬಿಎಂಪಿ ಮೇಲೆ 15 ಸಾವಿರ ಕೋಟಿ ರೂ. ಗೂ ಹೆಚ್ಚಿನ ಹೊಣೆಗಾರಿಕೆಯಿದೆ. ಹೀಗಾಗಿಯೇ ಬಿಬಿಎಂಪಿ ಪ್ರತಿಯೊಂದು ದೊಡ್ಡ ಯೋಜನೆ ಕೈಗೊಳ್ಳಬೇಕಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನವನ್ನು ಕಾಯಬೇಕಾದ ಪರಿಸ್ಥಿತಿಯಿದೆ. ಸ್ವಂತ ಆದಾಯದಲ್ಲಿ ಕೇವಲ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಸೇರಿ ಇನ್ನಿತರ ನಿರ್ವಹಣಾ ಕಾರ್ಯ ಮಾಡಬೇಕಿದೆ.
ಬಿಬಿಎಂಪಿಗೆ ಮಾರ್ಷಲ್‌ಗಳ ಅಗತ್ಯವಿದೆ. ಏಕಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ತ್ಯಾಜ್ಯ ಬ್ಲ್ಯಾಕ್‌ಸ್ಪಾಟ್ ಗಳ ಸೃಷ್ಟಿ ತಡೆಯುವ ಕೆಲಸವನ್ನು ಮಾರ್ಷ ಲ್‌ಗಳು ಮಾಡುತ್ತಿದ್ದಾರೆ. ಅವರಿಂದ ಬಿಬಿಎಂಪಿಗೆ ಹೊರೆಯಾಗುತ್ತಿಲ್ಲ. -ಜಯರಾಂ ರಾಯಪುರ, ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು)
-ಗಿರೀಶ್ ಗರಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.