ತುಮಕೂರು: ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಅರ್ಚಕ ಮರಳಿ ಸ್ವಧರ್ಮಕ್ಕೆ
Team Udayavani, Aug 22, 2022, 4:23 PM IST
ತುಮಕೂರು: ತಾಲೂಕಿನ ಊರ್ಡಿಗೆರೆ ಹೋಬಳಿಯ ಹಿರೇಹಳ್ಳಿಯಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಅರ್ಚಕ ಎಚ್.ಆರ್.ಚಂದ್ರಶೇಖರಯ್ಯ ಅವರನ್ನು ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಮನವೊಲಿಸಿ ಪುನಃ ಸ್ವಧರ್ಮಕ್ಕೆ ಕರೆ ತಂದಿದ್ದಾರೆ.
ಚಂದ್ರಶೇಖರಯ್ಯ ಹಿರೇಹಳ್ಳಿ ದೇವಾಲಯದ ಅರ್ಚಕ ರಾಗಿದ್ದರು. ತಮ್ಮ ವೈಯಕ್ತಿಕ ಸಮಸ್ಯೆಗಳು ಅವರನ್ನು ನಾನಾ ಸಂಧಿಗ್ಧತೆಗೆ ಒಳ ಮಾಡಿದ್ದರಿಂದ ಬೇಸರಗೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ನಿರ್ಧಾರ ಕೈಗೊಂಡಿದ್ದರು.ನಂತರ ಮಸೀದಿಯಲ್ಲಿ ತಮ್ಮ ಹೆಸರನ್ನು ಮುಬಾರಕ್ ಪಾಷ ಎಂದು ನಾಮಕರಣ ಮಾಡಿಕೊಂಡಿದ್ದರು. ಸ್ಥಳೀಯ ಪತ್ರಿಕೆಯಲ್ಲಿ ತಮ್ಮ ಹೆಸರು ಬದಲಾಯಿಸಿ ಕೊಳ್ಳುವ ಬಗ್ಗೆ ನೀಡಿದ್ದ ಜಾಹೀರಾತು ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ತಿಳಿದಿದ್ದು, ಕಾರ್ಯ ಪ್ರವೃತ್ತರಾದ ಶಿವಣ್ಣ ಚಂದ್ರಶೇಖರಯ್ಯ ಅವರ ಹಿರೇಹಳ್ಳಿಗೆ ಹೋಗಿ ಅವರ ಮನೆಯಲ್ಲಿ ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು.
ಹಿಂದೂ ಧರ್ಮದಲ್ಲಿ ನಿನಗೇನು ಸಮಸ್ಯೆ ಇದೆ ಎಂಬುದು ತಿಳಿಸು, ನಾನೇ ಮುಂದೆ ನಿಂತು ಪರಿ ಹರಿಸುತ್ತೇನೆ ಎಂದ ಅವರು, ನಂತರ ತಮ್ಮ ಕಚೇರಿಗೆ ಕರೆಸಿಕೊಂಡು ಮಾತನಾಡಿ ಧೈರ್ಯ ಹೇಳಿ ಮನಸ್ಸು ಬದಲಾಯಿಸಿದರು.
ಸೊಗಡು ಶಿವಣ್ಣರ ಮಾತಿಗೆ ಮನ್ನಣೆ ನೀಡಿ ಮತ್ತೆ ಹಿಂದೂ ಧರ್ಮಕ್ಕೆ ಬಂದರ ನನ್ನ ವೈಯಕ್ತಿಕ ಕಾರಣದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದೆ. ಮಾಜಿ ಸಚಿವರಾದ ಎಸ್.ಶಿವಣ್ಣ ಅವರು ಹೇಳಿದ ಮಾತುಗಳಿಂದ ನಾನು ಮತ್ತೆ ನಮ್ಮ ಧರ್ಮಕ್ಕೆ ಬಂದಿದ್ದೇನೆ. ನನಗೆ ಈಗ ಸಂತೋಷವಾಗಿದೆ. – ಎಚ್.ಆರ್.ಚಂದ್ರಶೇಖರಯ್ಯ, ಅರ್ಚಕ
ಹಿಂದೂ ಧರ್ಮದಿಂದ ಮುಸ್ಲಿಂ, ಕ್ರೆçಸ್ತ ಧರ್ಮಕ್ಕೆ ಮತಾಂತರವಾಗುವುದು ನಡೆಯುತ್ತಿದ್ದು, ಇದು ನಿಲ್ಲಬೇಕು. ಮತಾಂತರಗೊಂಡಿದ್ದ ಚಂದ್ರಶೇಖರಯ್ಯಗೆ ಬುದ್ಧಿ ಹೇಳಿ ಮತ್ತೆ ನಮ್ಮ ಧರ್ಮಕ್ಕೆ ಕರೆ ತಂದಿ ದ್ದೇನೆ. ಈಗ ಆತ ಮತ್ತು ಕುಟುಂಬ ಸಂತಸಗೊಂಡಿದೆ. ಸರ್ಕಾರ ಮತಾಂತರಕ್ಕೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. –ಸೊಗಡು ಎಸ್.ಶಿವಣ್ಣ, ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.