ಹಬ್ಬಕ್ಕೆ ಸಿದ್ಧಗೊಳ್ಳುತ್ತಿವೆ ಸುಂದರ ಗಣೇಶ ಮೂರ್ತಿಗಳು

­ವಕ್ರತುಂಡನ ಮೂರ್ತಿಗಳಿಗೆ ವಿವಿಧ ಬಣ್ಣಗಳಿಂದ ಅಂತಿಮ ರೂಪ ನೀಡುತ್ತಿರುವ ಕಲಾವಿದರು; ಪರಿಸರ ಸ್ನೇಹಿ ಮನಮೋಹಕ ಮಣ್ಣಿನ ವಿಘ್ನೇಶ್ವರ ಮೂರ್ತಿಗಳಿಗೆ ಆದ್ಯತೆ

Team Udayavani, Aug 22, 2022, 4:56 PM IST

18

ಲಕ್ಷ್ಮೇಶ್ವರ: ಸಕಲ ಕಷ್ಟಗಳ ನಿವಾರಕ, ಪ್ರಥಮ ಪೂಜಿತ, ವಿಘ್ನವಿನಾಶಕ ಗಣೇಶನ ಹಬ್ಬ ಸಮೀಪಿಸುತ್ತಿದ್ದು, ಗಣೇಶನ ಮೂರ್ತಿ ತಯಾರಕ ಕಲಾವಿದರು ವಿವಿಧ ರೂಪಗಳ ಬಣ್ಣದ ಮೂರ್ತಿಗಳಿಗೆ ಅಂತಿಮ ರೂಪ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಬ್ಬಕ್ಕೆ 6 ತಿಂಗಳ ಮೊಲದೇ ಪಟ್ಟಣದಲ್ಲಿ ಸಿದ್ಧಗೊಳ್ಳುವ ಸುಂದರ ಗಣೇಶ ಮೂರ್ತಿಗಳು ನೆರೆಯ ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಾರಾಟವಾಗುತ್ತವೆ.

ಕಳೆದ ನಾಲ್ಕೈದು ವರ್ಷಗಳ ಹಿಂದೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಿಓಪಿ ಗಣೇಶ ಮೂರ್ತಿಗಳನ್ನು ಸಂಪೂರ್ಣ ನಿಷೇಧಿಸಿ ಕಟ್ಟುನಿಟ್ಟಿನ ಆದೇಶ ನೀಡಿದಾಗಿನಿಂದ ಲಕ್ಷ್ಮೇಶ್ವರದ ಕಲಾವಿದರು ಪರಿಸರ ಸ್ನೇಹಿ ಗಣೇಶನ ಮೂರ್ತಿ ನಿರ್ಮಾಣಕ್ಕೆ ಬದ್ಧರಾಗಿದ್ದಾರೆ. ಜನರಿಂದ ಪರಿಸರ ಸ್ನೇಹಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಸಹಜವಾಗಿ ಕಲಾವಿದರು ಗ್ರಾಹಕರ ಮನದಿಂಗಿತ ಅರಿತು ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ನಿರ್ಮಿಸುತ್ತಿದ್ದಾರೆ. ಪಟ್ಟಣದ ಮೂರ್ತಿ ಕಲಾವಿದ ಸಹನರಾಜ ಚಕ್ರಸಾಲಿ ಸೇರಿದಂತೆ ಸುಮಾರು 15 ರಿಂದ 20ಕ್ಕೂ ಹೆಚ್ಚು ಮೂರ್ತಿ ಕಲಾವಿದರಿಂದ ಸ್ಥಳೀಯವಾಗಿ 15 ಸಾವಿರ ಗಣೇಶನ ಮೂರ್ತಿಗಳು ಅಂತಿಪ ರೂಪ ಪಡೆದು ಮಾರಾಟಕ್ಕೆ ಸಿದ್ಧಗೊಂಡಿವೆ. ಲಕ್ಷ್ಮೇಶ್ವರದಲ್ಲಿ ನಿರ್ಮಾಣವಾಗುವ ಗಣಪತಿ ಮೂರ್ತಿಗಳು ಅತ್ಯಂತ ಸುಂದರವಾಗಿರುವುದರಿಂದ ಪಟ್ಟಣ ಮತ್ತು ಸುತ್ತಮು ತ್ತಲಿನ ಗ್ರಾಮಗಳ ಜನರು, ಸಂಘ-ಸಂಸ್ಥೆಗಳು, ಸಾರ್ವ ಜನಿಕರು ಈಗಾಗಲೇ ತಮಗೆ ಇಷ್ಟವಾದ ಗಣೇಶನ ಮೂರ್ತಿಗಳನ್ನು ಗುರುತಿಸಿ ಮುಂಗಡ ಹಣ ನೀಡಿ ತಮ್ಮ ಗಣೇಶನ ಮೂರ್ತಿ ಗುರುತಿಸಿಟ್ಟಿದ್ದಾರೆ.

ಕಲಾವಿದರು ಏನಂತಾರೆ?: ಕಳೆದ 3 ವರ್ಷಗಳಿಂದ ಸರ್ಕಾರ ಪಿಓಪಿ ಮೂರ್ತಿಗಳನ್ನು ನಿಷೇಧಿಸಿದ್ದರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಬೇಡಿಕೆಗೆ ತಕ್ಕಂತೆ ಈ ವರ್ಷದ ಗಣೇಶೋತ್ಸವಕ್ಕೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ. ವಂಶಪಾರಂಪರ್ಯವಾಗಿ ನಮ್ಮ ಕುಟುಂಬಗಳು ಗಣೇಶನ ಮೂರ್ತಿ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಬದುಕು ಸಾಗಿಸುತ್ತಿದ್ದೇವೆ. ನೆರೆಯ ನಾಯಿಕೆರೂರ, ಕಡಕೋಳ ಮತ್ತಿತರ ಕಡೆಗಳಿಂದ ಮಣ್ಣು ಖರೀದಿಸಿ ತಂದು, ಹದ ಮಾಡಿ ಕುಟುಂಬದವರೆಲ್ಲರೂ ಸೇರಿ ಮೂರ್ತಿ ತಯಾರಿಸುತ್ತೇವೆ. ಈ ಸಲದ ಗಣೇಶೋತ್ಸವಕ್ಕಾಗಿ ಪಟ್ಟಣದ ಹತ್ತಾರು ಕುಟುಂಬಗಳು 15 ಸಾವಿರಕ್ಕಿಂತ ಹೆಚ್ಚು ಮೂರ್ತಿ ಸಿದ್ಧಪಡಿಸಿದ್ದು, ಗಣೇಶನ ಮೂರ್ತಿಗಳಿಗೆ ಅನುಗುಣವಾಗಿ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ. ಸಾಮಾನ್ಯ ಎತ್ತರ ಗಣಪತಿ ಮೂರ್ತಿಗಳು 500 ರೂ.ನಿಂದ 5 ಅಡಿ ಎತ್ತರದವರೆಗಿನ ಮಣ್ಣಿನ ಮೂರ್ತಿಗಳು 10 ಸಾವಿರ ರೂ. ವರೆಗೆ ಮಾರಾಟವಾಗುತ್ತವೆ ಎನ್ನುತ್ತಾರೆ ಕಲಾವಿದರು.

ಎಲ್ಲಾ ಮೂರ್ತಿಗಳು ಮಾರಾಟವಾದರೆ ಒಂದಿಷ್ಟು ಆದಾಯ

ಮಣ್ಣು-ಬಣ್ಣ ಇತರೇ ಖರ್ಚು ಸೇರಿ ಬೇಕಾದ ಎಲ್ಲ ವಸ್ತುಗಳ ಬೆಲೆ ಹೆಚ್ಚಳದಿಂದ ಗಣೇಶನ ಮೂರ್ತಿಗಳ ಬೆಲೆಯಲ್ಲೂ ಹೆಚ್ಚಳ ಅನಿವಾರ್ಯ. ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದರೂ ಮಹಾನಗರಗಳಲ್ಲಿ ಕೊನೆ ಹಂತದಲ್ಲಿ ಕದ್ದುಮುಚ್ಚಿ ಯಥೇತ್ಛವಾಗಿ ದೊಡ್ಡ ಗಾತ್ರದ ಪಿಓಪಿ ಗಣೇಶ ಮೂರ್ತಿಗಳು ಮಾರಾಟವಾಗುತ್ತವೆ. ಅವುಗಳ ಬೆಲೆ ಕಡಿಮೆ ಇರುವುದರಿಂದ ನಾವು ಸಿದ್ಧಪಡಿಸಿದ ದೊಡ್ಡ ಮೂರ್ತಿಗಳು ಮಾರಾಟವಾಗದೇ ಉಳಿಯುತ್ತವೆ. ನಿರ್ಮಾಣಗೊಂಡ ಎಲ್ಲಾ ಮೂರ್ತಿಗಳು ಮಾರಾಟವಾದರೆ ಮಾತ್ರ ಖರ್ಚು, ವೆಚ್ಚ ತೆಗೆದು ಸಣ್ಣ ಆದಾಯ ನಿರೀಕ್ಷಿಸಬಹುದಾಗಿದೆ ಎನ್ನುತ್ತಾರೆ ಕಲಾವಿದರಾದ ಪ್ರವೀಣ ಗಾಯ್ಕರ, ಫಕ್ಕಿರೇಶ ಕುಂಬಾರ, ಸಹನರಾಜ ಚಕ್ರಸಾಲಿ, ಪ್ರಕಾಶ ಕುಂಬಾರ, ಮಹೇಶ ಕುಂಬಾರ ಮತ್ತಿತರರು.

ಸನಾತನ ಪರಂಪರೆಯಂತೆ ಪ್ರತಿಯೊಬ್ಬರೂ ಶುದ್ಧ ಮಣ್ಣಿನ ಬಣ್ಣವಿಲ್ಲದ ಪರಿಸರ ಸ್ನೇಹಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದರೆ ಅದಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ. ಇದರಿಂದ ನಮ್ಮ ಸಂಸ್ಕೃತಿ ಉಳಿಸಿ-ಬೆಳೆಸಲು ಸಾಧ್ಯವಾಗುತ್ತದೆ. ಅಲ್ಲದೇ, ಜಲಮೂಲಗಳಿಗೆ ಮತ್ತು ಪರಿಸರ ಹಾನಿ ತಪ್ಪಿಸಬಹುದಾಗಿದೆ. ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಡುವ ಗಣೇಶನ ಮೂರ್ತಿಗಳ ವಿಸರ್ಜನೆ ಯನ್ನು 5, 7 ಇಲ್ಲವೇ 9 ಯಾವುದಾದರೊಂದು ದಿನ ನಿಗದಿಪಡಿಸಿ ಎಲ್ಲರೂ ಸೇರಿ ಸಾಮೂಹಿಕವಾಗಿ ಗಣೇಶ ವಿಸರ್ಜನೆ ಕಾರ್ಯ ಮಾಡಿದರೆ ಅರ್ಥಪೂರ್ಣವಾಗುತ್ತದೆ. ರಾಜ್ಯದ ಅನೇಕ ಹಿಂದೂಗಳೆಲ್ಲರೂ ಒಮ್ಮತದ ನಿರ್ಣಯದಿಂದ ವಿಶೇಷ ರೀತಿಯಲ್ಲಿ ಹಬ್ಬ ಆಚರಿಸುತ್ತಿರುವುದು ಎಲ್ಲ ಕಡೆ ಮಾದರಿಯಾಗಬೇಕು. –ಚಿಕ್ಕರಸ ಪೂಜಾರ, ಅರ್ಚಕರು, ಸೋಮೇಶ್ವರ ದೇವಸ್ಥಾನ

ಕಳೆದ 2 ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಕೆಲ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಈ ವರ್ಷ ಸಾರ್ವಜನಿಕ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಬೇಕೋ? ಬೇಡವೋ ಎಂಬ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ. ಈ ಬಗ್ಗೆ ಸರ್ಕಾರ ಕೈಗೊಳ್ಳುವ ನಿರ್ಧಾರ, ನಿಂಬಂಧನೆಗಳಿಗೆ ಎಲ್ಲರೂ ಬದ್ಧರಾಗಬೇಕಾಗುತ್ತದೆ. ಸದ್ಯ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಗಣೇಶ ಹಬ್ಬದ ಆಚರಣೆ ಸಂದರ್ಭದಲ್ಲಿ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗಿದೆ. –ಪರಶುರಾಮ ಸತ್ತಿಗೇರಿ, ಲಕ್ಷ್ಮೇಶ್ವರ ತಹಶೀಲ್ದಾರ್‌

ಟಾಪ್ ನ್ಯೂಸ್

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cyber crime

Cybercrime; ಚಾಲ್ತಿ ಖಾತೆ ತೆರೆದು ಕೋಟ್ಯಂತರ ರೂ.ವರ್ಗಾವಣೆ: ಇಬ್ಬರ ಬಂಧನ

Gadag; ಮಾನವ ಸರಪಳಿ ವೇಳೆ ಶಿಕ್ಷಕಿಯರ ಮೇಲೆ ಹೆಜ್ಜೇನು ದಾಳಿ

Gadag; ಮಾನವ ಸರಪಳಿ ವೇಳೆ ಶಿಕ್ಷಕಿಯರ ಮೇಲೆ ಹೆಜ್ಜೇನು ದಾಳಿ

7-mundaragi

ಜನರಿಗೆ ಪ್ರಜಾಪ್ರಭುತ್ವ ಅರಿವು ಮೂಡಿಸಿ, ಬಲ ತುಂಬುವ ಕಾರ್ಯಕ್ರಮ ಪ್ರಜಾಪ್ರಭುತ್ವ ದಿನಾಚರಣೆ

Sudden rise in cooking oil prices

Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್

ಗದಗ: ಅತಿವೃಷ್ಟಿಯಿಂದ ಬತ್ತಿದ ಕೆರೆಗಳಿಗೆ ಆಸರೆಯಾದ ತುಂಗಭದ್ರೆ!

ಗದಗ: ಅತಿವೃಷ್ಟಿಯಿಂದ ಬತ್ತಿದ ಕೆರೆಗಳಿಗೆ ಆಸರೆಯಾದ ತುಂಗಭದ್ರೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

6-bng

Bengaluru: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 23 ಲಕ್ಷ ರೂ. ವಂಚನೆ!

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

Karki kananda movie

Karki Movie: ಹಳ್ಳಿ ಹುಡುಗನ ಹೋರಾಟದ ಹಾದಿ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.