ಪುಟಿದೆದ್ದ ಕರ್ನಾಟಕದ ಆರ್ಥಿಕತೆ; ಉತ್ತರಪ್ರದೇಶ, ಕೇರಳದ್ದು ಕಳಪೆ ಸಾಧನೆ
ಕೊರೊನಾಪೂರ್ವ ಮಟ್ಟಕ್ಕೆ ತಲುಪಿದ 19 ರಾಜ್ಯಗಳ ಪ್ರಗತಿ ದರ
Team Udayavani, Aug 23, 2022, 6:45 AM IST
ನವದೆಹಲಿ: ಕೊರೊನಾ ಸೋಂಕಿನ ಆಘಾತದಿಂದ ಪಾತಾಳಕ್ಕಿಳಿದಿದ್ದ ಆರ್ಥಿಕತೆಗಳು ಈಗ ಪುಟಿದೇಳಲಾರಂಭಿಸಿವೆ. ಕರ್ನಾಟಕ ಸೇರಿದಂತೆ 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ನಿಟ್ಟಿನಲ್ಲಿ ಧನಾತ್ಮಕ ಬೆಳವಣಿಗೆಯನ್ನು ಕಂಡಿದ್ದು, 2021-22ರ ಹಣಕಾಸು ವರ್ಷದಲ್ಲಿ ಎರಡಂಕಿ ಪ್ರಗತಿಯನ್ನು ಸಾಧಿಸಿವೆ.
21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಧಿಕೃತ ದತ್ತಾಂಶಗಳ ವಿಶ್ಲೇಷಣೆಯಿಂದ ಈ ಅಂಶ ತಿಳಿದುಬಂದಿದೆ. ಆದರೆ, ಗುಜರಾತ್ ಹಾಗೂ ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳ ಪ್ರಗತಿ ದರದ ಅಂಕಿಅಂಶ ಲಭ್ಯವಾಗಿಲ್ಲ.
ಈ ವಿಶ್ಲೇಷಣೆಯ ಪ್ರಕಾರ, ಕೇಂದ್ರ ಸರ್ಕಾರವು ಕೊರೊನಾ ಹಿನ್ನೆಲೆಯಲ್ಲಿ ರಾಷ್ಟ್ರೀಯ ಲಾಕ್‌ಡೌನ್ ಹೇರಿದಾಗ ಕುಸಿದಿದ್ದ 19 ರಾಜ್ಯಗಳು- ಕೇಂದ್ರಾಡಳಿತ ಪ್ರದೇಶಗಳ ಜಿಎಸ್‌ಡಿಪಿ(ರಾಜ್ಯದ ಒಟ್ಟು ಆಂತರಿಕ ಉತ್ಪನ್ನ) ದರ 2021-22ರಲ್ಲಿ ಕೊರೊನಾಪೂರ್ವ ಮಟ್ಟಕ್ಕೆ ತಲುಪಿದೆ. ಇಂಥ ಸಾಧನೆ ಮಾಡಿದ ರಾಜ್ಯಗಳೆಂದರೆ, ಕರ್ನಾಟಕ, ಆಂಧ್ರಪ್ರದೇಶ, ರಾಜಸ್ಥಾನ, ಬಿಹಾರ, ತೆಲಂಗಾಣ, ದೆಹಲಿ, ಒಡಿಶಾ, ಮಧ್ಯಪ್ರದೇಶ, ಹರ್ಯಾಣ, ತ್ರಿಪುರ, ಸಿಕ್ಕಿಂ, ಹಿಮಾಚಲಪ್ರದೇಶ, ಮೇಘಾಲಯ, ಜಾರ್ಖಂಡ್, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ , ಉತ್ತರಾಖಂಡ ಮತ್ತು ಪುದುಚೇರಿ.
ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಅಂಕಿಅಂಶಗಳನ್ನು ಅಪ್‌ಲೋಡ್ ಮಾಡಲಾಗಿದೆ.
ಹಿಂದುಳಿದ ಉ.ಪ್ರದೇಶ, ಕೇರಳ:
ವಿಶೇಷವೆಂದರೆ, ಉತ್ತರಪ್ರದೇಶ ಮತ್ತು ಕೇರಳ ರಾಜ್ಯಗಳ ಉತ್ಪಾದಕತೆ ಮಾತ್ರ ಸತತ 3 ವರ್ಷಗಳಿಂದಲೂ ಕುಸಿಯುತ್ತಲೇ ಇವೆ. 2021-22ರಲ್ಲಿ ಈ ಎರಡು ರಾಜ್ಯಗಳ ಜಿಎಸ್‌ಡಿಪಿ ಕೊರೊನಾಪೂರ್ವ ಮಟ್ಟಕ್ಕಿಂತಲೂ ಕಡಿಮೆ ದಾಖಲಾಗಿದೆ.
ಕರ್ನಾಟಕದ ಜಿಎಸ್‌ಡಿಪಿ
2019-20ರಲ್ಲಿ – 11,490 ಕೋಟಿ ರೂ.
2020-21ರಲ್ಲಿ – 11,440 ಕೋಟಿ ರೂ.
2021-22ರಲ್ಲಿ – 12,520 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.