ಪ್ರಾಣ ಹಿಂಡುತ್ತಿರುವ ಬೈಕಂಪಾಡಿ ಜಂಕ್ಷನ್ ಗುಂಡಿಗಳು
Team Udayavani, Aug 23, 2022, 1:16 PM IST
ಬೈಕಂಪಾಡಿ: ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ತಿರುಗುವ ಜಂಕ್ಷನ್ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಬೃಹತ್ ಹೊಂಡಗಳು ವಾಹನ ಚಾಲಕರ ಜೀವ ಹಿಂಡುತ್ತಿವೆ.
ಕೈಗಾರಿಕಾ ಪ್ರದೇಶದಿಂದ ಹೊರ ಬರುವ ನೂರಾರು ಲಾರಿಗಳು ಈ ಹೊಂಡ ಗುಂಡಿಯಲ್ಲಿ ಚಲಿಸಿ ಮೇಲೆ ಬರಲು ಸಾಧ್ಯವಾಗದೆ ಕೆಟ್ಟು ನಿಲ್ಲುತ್ತಿವೆ. ಕೂಳೂರಿನಿಂದ ಬರುವ ಬೃಹತ್ ಕಂಟೈನರ್ಗಳು, ಲಾರಿಗಳು ಬೈಕಂಪಾಡಿ ಜಂಕ್ಷನ್ನಲ್ಲೇ ತಿರುವು ಪಡೆಯುತ್ತಿದ್ದು, ಈ ಹೊಂಡಕ್ಕೆ ಬಿದ್ದ ವಾಹನಗಳು ಮೇಲೇಳದೆ ಟ್ರಾಫಿಕ್ ಜಾಮ್ಗೂ ಕಾರಣವಾಗುತ್ತಿದೆ.
ಈ ಭಾಗದಲ್ಲಿ ಹೆದ್ದಾರಿಯ ಹೊಂಡ ವನ್ನು ಮುಚ್ಚಲು ಇಲಾಖೆ ಗುತ್ತಿಗೆ ನೀಡಿದೆ. ಆದರೆ ರಸ್ತೆಯ ಇಕ್ಕೆಲಗಳಲ್ಲಿರುವ ಸರ್ವಿಸ್ ರಸ್ತೆ ಹಾಗೂ ಹೊಂಡವನ್ನು ನಿರ್ಲಕ್ಷé ಮಾಡುತ್ತಿದೆ. ಸಣ್ಣ ವಾಹನಗಳು ಸ್ವಲ್ಪ ಬದಿಗೆ ಸರಿದರೂ ಪಲ್ಟಿ ಹೊಡೆಯುವುದು ಖಚಿತ ಎನ್ನುವಷ್ಟರ ಮಟ್ಟಿಗೆ ಭಾರೀ ಹೊಂಡ ಸೃಷ್ಟಿಯಾಗಿದೆ.
ತಾತ್ಕಾಲಿಕವಾಗಿಯಾದರೂ ಕಾಂಕ್ರಿಟ್ ತುಂಬಿಸಿ ರಸ್ತೆಯ ಇಕ್ಕೆಲಗಳನ್ನು ದುರಸ್ತಿ ಪಡಿಸಿಕೊಡಬೇಕು ಎಂಬುದು ನಮ್ಮ ಆಗ್ರಹ ಎನ್ನುತ್ತಾರೆ ರಿಕ್ಷಾ ಚಾಲಕ ಉಮೇಶ್ ಇಡ್ಯಾ ಅವರು.
ಪ್ರಾಣ ಭೀತಿ ನಿವಾರಿಸಿ
ಬೈಕಂಪಾಡಿ ಜಂಕ್ಷನ್, ಪಣಂಬೂರು ರಿಲಯನ್ಸ್ ಪೆಟ್ರೋಲ್ ಬಂಕ್ ಮುಂಭಾಗ, ಎನ್ಎಂಪಿಟಿ ಮಲ್ಯ ಗೇಟ್, ಎನ್ಎಂಪಿಟಿ ಸರ್ವಿಸ್ ರಸ್ತೆಗಳು ದ್ವಿಚಕ್ರ ಸವಾರರಿಗೆ ಹಾಗೂ ಸಣ್ಣ ವಾಹನಗಳಿಗೆ ಅಪಾಯವನ್ನು ಒಡ್ಡುತ್ತಿರುವ ಪ್ರಮುಖ ಸ್ಥಳಗಳು. ಇದನ್ನು ತತ್ಕ್ಷಣ ದುರಸ್ತಿ ಪಡಿಸಿ ಹೆದ್ದಾರಿ ಸಂಚಾರದಲ್ಲಿ ಪ್ರಾಣ ಭೀತಿಯನ್ನು ಇಲಾಖೆಯ ಅಧಿಕಾರಿಗಳು ನಿವಾರಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.