ಸುರತ್ಕಲ್, ಹೆಜಮಾಡಿ ಟೋಲ್ ಶೀಘ್ರ ವಿಲೀನ : ಪತ್ರಕ್ಕೆ ಸ್ಪಂದಿಸಿದ ಭೂಸಾರಿಗೆ ಸಚಿವ ಗಡ್ಕರಿ
Team Udayavani, Aug 23, 2022, 2:48 PM IST
ಕುಂದಾಪುರ: ಹೆಜಮಾಡಿಯಿಂದ ಕೇವಲ 11 ಕಿ.ಮೀ. ದೂರದಲ್ಲಿರುವ ಸುರತ್ಕಲ್‌ನಲ್ಲಿ ಹೆದ್ದಾರಿ ನಿಯಮಗಳನ್ನು ಮೀರಿ ಟೋಲ್ ವಸೂಲಾತಿ ನಡೆಯುತ್ತಿದ್ದು ಟೋಲ್ ರದ್ದು ಮಾಡಬೇಕೆಂದು ಕೇಂದ್ರ ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಇಲ್ಲಿನ ನಿವಾಸಿ ಸಾಫ್ಟ್ವೇರ್ ಉದ್ಯೋಗಿ ವಿಘ್ನೇಶ್ ಶೆಣೈ ಪತ್ರ ಬರೆದಿದ್ದಾರೆ. ಇದಕ್ಕೆ ಕೇವಲ 14 ದಿನಗಳಲ್ಲಿ ಸ್ಪಂದನೆ ದೊರೆತಿದೆ.
ಪ್ರಯಾಣ ದುಬಾರಿ
ಕುಂದಾಪುರದಿಂದ ಮಂಗಳೂರಿಗೆ ಹೋಗುವಾಗ ಸಾಸ್ತಾನ, ಹೆಜಮಾಡಿ, ಸುರತ್ಕಲ್‌ನಲ್ಲಿ ಟೋಲ್ ಪಾವತಿಸಬೇಕಾಗುತ್ತದೆ. ಸುರತ್ಕಲ್ ಟೋಲ್‌ನಲ್ಲಿ ಮಂಗಳೂರು ನೋಂದ ಣಿಯ ಕೆಲವು ವಾಹನಗಳಿಗೆ ಈಗಲೂ ರಿಯಾಯಿತಿ ಇದೆ. ಆದರೆ ಉಡುಪಿ ನೋಂದಣಿ ಯವರು ಕಡ್ಡಾಯ ಪಾವತಿಸಬೇಕು. ಇದರಿಂದ ಕುಂದಾಪುರ -ಉಡುಪಿ -ಮಂಗಳೂರು ನಡುವಿನ ಸವಾರರಿಗೆ ಪ್ರಯಾಣ ತೀರಾ ದುಬಾರಿಯಾಗುತ್ತದೆ.
ಉತ್ತರ
ಸುರತ್ಕಲ್ ಟೋಲ್‌ಗೇಟ್ ಆರಂಭಿಸಲು 2008ರ ಡಿ.5ರಂದು ನೋಟಿಫಿಕೇಶನ್ ಆಗಿದೆ. ಪಕ್ಕದ ಹೆಜಮಾಡಿಯಲ್ಲಿ ಟೋಲ್ ಆರಂಭಿಸಲು ಸೂಕ್ತ ಕಾರಣಗಳಿದ್ದವು. ಹಾಗಿದ್ದರೂ ಸುರತ್ಕಲ್ ಟೋಲ್ ಅನ್ನು ಹೆಜಮಾಡಿ ಟೋಲ್ ಜತೆ ವಿಲೀನ ಮಾಡಲು ಹೆ. ಇಲಾಖೆ ಪ್ರಾದೇಶಿಕ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ, ಅಲ್ಲಿ ಮಾನ್ಯತೆಗೊಂಡಿದ್ದು ಕಾರ್ಯಹಂತದಲ್ಲಿದೆ ಎಂದು ಉತ್ತರಿಸಲಾಗಿದೆ.
ಹೆದ್ದಾರಿ ಪ್ರಾಧಿಕಾರ ಮಾಹಿತಿ ಸುರತ್ಕಲ್ ಟೋಲ್‌ಗೇಟ್ ಸಮೀಪದಲ್ಲಿರುವ ಹೆಜಮಾಡಿ ಮತ್ತು ತಲಪಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನ ಮಾಡಲು ಹೆದ್ದಾರಿ ಇಲಾಖೆ ಪ್ರಾಧಿಕಾರ ಮುಂದಾಗಿದೆ ಎಂದು ಆ. 19ರಂದು ಮೂಲಗಳು ತಿಳಿಸಿದ್ದು ವರದಿಯಾಗಿತ್ತು.
ಸಚಿವ ನಿತಿನ್ ಗಡ್ಕರಿಗೆ ಪತ್ರ
ಹೆಜಮಾಡಿಯಿಂದ 11 ಕಿ.ಮೀ. ದೂರದಲ್ಲಿ ಸುರತ್ಕಲ್‌ಲ್ಲಿ ಟೋಲ್ ಗೇಟ್ ಇದೆ. ಇಲ್ಲಿನ ವ್ಯವಸ್ಥೆಗಳೂ ತೀರಾ ಕಳಪೆಯಾಗಿವೆ. ಸುಸಜ್ಜಿತವಿಲ್ಲದೇ, ಮೂಲಭೂತ ಸೌಕರ್ಯವೂ ಇಲ್ಲದೇ, ಉತ್ತರ ಭಾರತದ ಸಿಬಂದಿ ವಾಹನ ಚಾಲಕರ ಜತೆ ಒರಟಾಗಿ ವರ್ತಿಸುತ್ತಾರೆ ಎಂದು ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ. ಇದಕ್ಕೂ ಮೊದಲು ವಿಘ್ನೇಶ್ ಶೆಣೈ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಆ. 4ರಂದು ನಿತಿನ್ ಗಡ್ಕರಿ ಅವರಿಗೆ ಪತ್ರವನ್ನು ಮೇಲ್ ಮಾಡಿದ್ದರು. ಆ. 6ರಂದು ಅಲ್ಲಿಂದ ಮಂಗಳೂರು ಕಚೇರಿಗೆ ರವಾನೆಯಾಗಿದೆ. ಆ.18ರಂದು ಹೆದ್ದಾರಿ ಇಲಾಖೆ ಮಂಗಳೂರಿನ ಯೋಜನ ನಿರ್ದೇಶಕರಿಂದ ಉತ್ತರ ಕಳುಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.