ಇತರರ ಸಂತೋಷಕ್ಕಾಗಿ ಬದುಕು ಮುಡುಪಿಟ್ಟಿದ್ದ ಶ್ರೀಗಳು

Team Udayavani, Aug 23, 2022, 3:58 PM IST

ಇತರರ ಸಂತೋಷಕ್ಕಾಗಿ ಬದುಕು ಮುಡುಪಿಟ್ಟಿದ್ದ ಶ್ರೀಗಳು

ಮೈಸೂರು: ನಗರದ ಊಟಿ ರಸ್ತೆಯ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 107ನೇ ಜಯಂತಿ ಮಹೋತ್ಸವ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಶೇಖರಯ್ಯ, ಸುತ್ತೂರುಮಠದ ಶಿವರಾತ್ರಿ ರಾಜೇಂದ್ರಶ್ರೀಗಳು ಇತರರ ಕಷ್ಟಕ್ಕಾಗಿ, ಸಂತೋಷಕ್ಕಾಗಿ ತಮ್ಮ ಬದುಕನ್ನು ಮುಡುಪಿಟ್ಟ ಹೃದಯವಂತರು. ಅವರ ಆದರ್ಶಪಥವೇ ನಮ್ಮ ಜ್ಯೋತಿರ್ಪಥವಾಗಬೇಕು ಎಂದರು.

ಶ್ರೀಗಳು ದೈಹಿಕವಾಗಿ ಅಷ್ಟೇ ನಮ್ಮನ್ನು ಅಗಲಿದ್ದಾರೆ. ವಾಸ್ತವವಾಗಿ ನಮ್ಮ ಹೃನ್ಮನಗಳಲ್ಲಿ ಬದುಕಿ ದ್ದಾರೆ. ಅವರು ಚಿರಂತನರು. ಬದುಕಿದ್ದ ಕಾಲದಲ್ಲೇ ಅವರು ಲಕ್ಷಾಂತರ ಮನಸ್ಸು ಗೆದ್ದವರು. ಇಂದಿನ ಜೆಎಸ್‌ಎಸ್‌ ಸಂಸ್ಥೆ ಮತ್ತು ಮಹಾವಿದ್ಯಾಪೀಠದ ಹುಟ್ಟಿಗೆ ಪ್ರಗತಿಗೆ ಭದ್ರ ಬುನಾದಿ ಹಾಕಿದವರು ಎಂದು ಸ್ಮರಿಸಿದರು. ಶ್ರೀಗಳು ಜೀವನ ಕಟ್ಟಿಕೊಳ್ಳಲು ಕಾರಣರಾದ ತಂದೆ-ತಾಯಿಗಳಿಗಿಂತಲೂ ಹೆಚ್ಚಿನವರು. ಏಕೆಂದರೆ ತಂದೆ-ತಾಯಿಗಳು ಮಾಡಲಾಗದಂತಹ ಅನೇಕ ಸಹಾಯ ಮತ್ತು ಅನುಕೂಲ ಅನುಗ್ರಹಿಸಿದವರು.

ಆದ್ದರಿಂದಲೇ ಅವರು ಶಾಶ್ವತರು, ಚಿರಂಜೀವಿಗಳು. ಅಲ್ಲದೆ, ಶ್ರೀಗಳು ಶ್ರೇಷ್ಠವಾದ ಭಾವನಾಜೀವಿಗಳು, ಆದರ್ಶವಾದಿಗಳು. ಆದರ್ಶವಾದಿಗಳಿಂದ ಸಮಾ ಜಕ್ಕೆ ಒಳ್ಳೆಯದೇ ಆಗುತ್ತದೆ. ಸಕಲ ಜೀವಾತ್ಮರಿಗೆ ಲೇಸನು ಬಯಸುವವನು ನಿಜವಾದ ಶರಣ. ಶ್ರೀಗಳು ಎಲ್ಲರಿಗೂ ಲೇಸನ್ನೇ ಬಯಸಿದವರು ಎಂದರು.

ವಿದ್ಯಾಭ್ಯಾಸಕ್ಕೆಂದು ಮೈಸೂರಿಗೆ ಬಂದ ವರು ಇಲ್ಲಿ ವಿದ್ಯಾರ್ಥಿಗಳು ಪಡುತ್ತಿದ್ದ ಬವಣೆ ಯನ್ನು ನೋಡಿ, ನೊಂದು ತಮ್ಮ ವಿದ್ಯಾಭ್ಯಾಸ ಮೊಟಕಾದರೂ ಪರವಾಗಿಲ್ಲ. ಇಂತಹ ವಿದ್ಯಾರ್ಥಿ ಗಳಿಗೆ ತಮ್ಮ ಕಡೆಯಿಂದ, ಮಠದ ಕಡೆಯಿಂದ ಏನಾದರೂ ಅನುಕೂಲ ಮಾಡಬೇಕೆಂದು ಸ್ವಾರ್ಥ ವನ್ನು ಮರೆತು 12ರ ಹರೆಯದಲ್ಲಿ ತೆಗೆದುಕೊಂಡ ನಿರ್ಧಾರ ಒಂದು ಐತಿಹಾಸಿಕ ಘಟನೆ ಎನ್ನಬಹುದು. ಅಂದಿನ ಬ್ರಿಟಿಷರ ಆಡಳಿತ, ದಬ್ಟಾಳಿಕೆಯ ಸಂದರ್ಭದಲ್ಲಿ ಎಲ್ಲರೂ ವಿದ್ಯಾವಂತರಾಗಬೇಕು, ವಿದ್ಯೆಯೊಂದೇ ಎಲ್ಲ ಸಮಸ್ಯೆಗಳಿಗೆ ತಾರಕಮಂತ್ರ ವೆಂದು ಮನಗಂಡು ಕೇವಲ 12 ಮಕ್ಕಳಿಗೆ ಊಟದ ವ್ಯವಸ್ಥೆಯೊಂದಿಗೆ ಓದಲು ಅನುವು ಮಾಡಿಕೊಟ್ಟ ಶ್ರೀಗಳು. 1960ರ ಹೊತ್ತಿಗೆ ಸುತ್ತೂರುಮಠದಲ್ಲಿ 4 ಸಾವಿರ ವಿದ್ಯಾರ್ಥಿಗಳಿಗೆ ಜ್ಞಾನಾನ್ನ ದಾಸೋಹಕ್ಕೆ ಕಾರಣರಾದರು ಎಂದರು.

ಸಮೂಹಶಕ್ತಿಯಿಂದ ಅವರು ವಿದ್ಯಾಸಂಸ್ಥೆಗಳನ್ನು ಕಟ್ಟಿದರು. 1986ರ ಹೊತ್ತಿಗೆ 170ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳನ್ನು ನಿರ್ಮಾಣ ಮಾಡಿದರು ಎಂದರು. ಶ್ರೀಗಳು ನಾಡು ಕಂಡ ಮಹಾಚೇತನ: ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬ ಶಿವಯ್ಯ ಮಾತನಾಡಿ, ರಾಜೇಂದ್ರ ಶ್ರೀಗಳು ಈ ನಾಡು ಕಂಡ ಮಹಾಚೇತನ. ಇವರು ಹಬ್ಬಿಸಿದ ಜ್ಞಾನಜ್ಯೋತಿ ಇಂದು ವಿಶ್ವಾದ್ಯಂತ ಹರಡಿದೆ. ಉಚಿತಪ್ರಸಾದ ನಿಲಯದೊಂದಿಗೆ ಆರಂಭವಾದ ಸಂಸ್ಥೆ ಇಂದು 350ಕ್ಕೂ ಹೆಚ್ಚಿನ ಶಿಕ್ಷಣಸಂಸ್ಥೆಗಳಾಗಿ ಬೆಳೆದು ಜಾತ್ಯತೀತವಾಗಿ, ಧಾರ್ಮಿಕವಾಗಿ, ಸಾಂಸ್ಕೃ ತಿಕವಾಗಿ ರೂಪುಗೊಂಡಿವೆ. ಇವುಗಳ ಸ್ಥಾಪನೆಯಲ್ಲಿ ಶ್ರೀಗಳ ದೂರದರ್ಶಿತ್ವ, ಅಂತಃಕರಣ ಮತ್ತು ಮಾತೃ ವಾತ್ಸಲ್ಯ ಇದೆ ಎಂದು ಹೇಳಿದರು. ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿ ಅವರು ಆಶೀರ್ವಚನವನ್ನು ನೀಡಿದರು.

ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್‌, ಬೋಧಕ ರಾದ ಎಸ್‌.ಸೋಮಶೇಖರ್‌, ಡಾ. ಎನ್‌. ಮಹೇಶ್ವರಿ ಇತರರು ಇದ್ದರು.

ಟಾಪ್ ನ್ಯೂಸ್

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರMUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.