ಕಿರುಕುಳ: ಭಜರಂಗದಳ ನಿಷೇಧಕ್ಕೆ ಆಗ್ರಹ

Team Udayavani, Aug 23, 2022, 4:34 PM IST

tdy-17

ಸಕಲೇಶಪುರ: ಗೋರಕ್ಷಣೆ ಹೆಸರಿನಲ್ಲಿ ಭಜರಂಗದಳ ಕಾರ್ಯಕರ್ತರು ವಿನಾಕಾರಣ ದಲಿತರಿಗೆ ತೊಂದರೆ ಕೊಡುತ್ತಿದ್ದು, ಪೊಲೀಸರು ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಆರೋಪಿಸಿ ಸಮುದಾಯದ ಪರ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟಿಸಿದವು.

ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ದಲಿತ ಪರ ಸಂಘಟನೆಗಳ ಕಾರ್ಯಕರ್ತರು, ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು, ಮಿನಿವಿಧಾನಸೌಧದ ಮುಂಭಾಗ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಹಳೇ ಬಸ್‌ ನಿಲ್ದಾಣದಲ್ಲಿ ಕೆಲಕಾಲ ರಸ್ತೆ ತಡೆ ಮಾಡಿ ಬಹಿರಂಗಸಭೆ ನಡೆಸಿದರು.

ಹದಗೆಟ್ಟ ಶಾಂತಿ ಸುವ್ಯವಸ್ಥೆ: ಈ ವೇಳೆ ದಲಿತ ಮುಖಂಡರು ಮಾತನಾಡಿ, ಸಕಲೇಶಪುರ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ. ಎರಡು ವರ್ಷಗಳಿಂದೀಚೆಗೆ ಹಿಂದುತ್ವದ ಹೆಸರಿನಲ್ಲಿ ಭಜರಂಗದಳದ ರಘು, ಸಹಚರರು ಗಲಬೆ ಎಬ್ಬಿಸುತ್ತಿದ್ದಾರೆ. ಇಂತಹವರಿಗೆ ಪೊಲೀಸ್‌ ಠಾಣೆಯಲ್ಲಿ ರಾಜಮರ್ಯಾದೆ ನೀಡುತ್ತಿರುವುದು ಖಂಡನೀಯ ಎಂದು ದೂರಿದರು.

ಗೋರಕ್ಷಣೆ ಹೆಸರಲ್ಲಿ ಹಲ್ಲೆ: ಶನಿವಾರ ಸಾಕಲು ಹಸು-ಕರು ತರುತ್ತಿದ್ದ ಹಲಸುಲಿಗೆ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜು ಅವರ ಮೇಲೆ ಗೋರಕ್ಷಣೆ ಹೆಸರಿನಲ್ಲಿ ಭಜರಂಗದಳದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿರುವ ದೀಪುವನ್ನು ಕೂಡಲೇ ಬಂಧಿಸಬೇಕು ಹಾಗೂ ಈ ಬಗ್ಗೆ ಕೇಳಲು ಹೋದ ದಲಿತ ಹೋರಾಟಗಾರರ ಮೇಲೆ ಕೇಸು ದಾಖಲಿಸಿರುವ ಡಿವೈಎಸ್‌ಪಿ ಉದಯ್‌ ಭಾಸ್ಕರ್‌ ಅವರನ್ನು ಅಮಾನತ್ತು ಮಾಡಬೇಕು, ಭಜರಂಗದಳ ಸಂಘಟನೆ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸ್‌ ಬಂದೋಬಸ್ತ್: ನಂತರ ಉಪವಿಭಾಗಾಧಿಕಾರಿ ಪ್ರತೀಕ್‌ ಬಯಾಲ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೊಳೆನರಸೀಪುರ ಡಿವೈಎಸ್‌ಪಿ ಮುರಳೀಧರ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ದಲಿತ ಮುಖಂಡರಾದ ವೇಣು, ರಾಧಾಕೃಷ್ಣ, ಬೈಕೆರೆ ದೇವರಾಜ್‌, ವಳಲಹಳ್ಳಿ ವೀರೇಶ್‌, ಹೆತ್ತೂರು ನಾಗರಾಜ್‌, ಲಕ್ಷ್ಮಣ್‌ ಕೀರ್ತಿ, ಎಸ್‌.ಎನ್‌ ಮಲ್ಲಪ್ಪ, ಪುರಸಭೆ ಸದಸ್ಯ ಅಣ್ಣಪ್ಪ, ಕೌಡಹಳ್ಳಿ ತಿಮ್ಮಯ್ಯ, ಕಲ್ಗಣೆ ಪ್ರಶಾಂತ್‌, ದೊಡ್ಡಿರಯ್ಯ, ನಲ್ಲುಲ್ಲಿ ಈರಯ್ಯ, ಸಿಐಟಿಯು ಧರ್ಮೇಶ್‌, ಪೃಥ್ವಿ, ರಾಜಶೇಖರ್‌, ಸಂದೇಶ್‌, ಹೆನ್ನಲಿ ಶಾಂತರಾಜು, ಸಂದೀಪ್‌ ಮುಂತಾದವರು ಹಾಜರಿದ್ದರು.

ಟಾಪ್ ನ್ಯೂಸ್

IFFI: ನವೆಂಬರ್ 20 ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

sanjay manjrekar

Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್‌ ಸಂಜಯ್‌ ಮಾಂಜ್ರೇಕರ್

West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ

West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivalinge-Gowda

CM ಸಿದ್ದರಾಮಯ್ಯ ರಾಜೀನಾಮೆ ಸಲ್ಲದು; ಶಾಸಕ ಶಿವಲಿಂಗೇಗೌಡ

5-hasan

Hasana:ಅನಾರೋಗ್ಯ: 3 ದಿನಗಳಿಂದ ನಿಂತಲ್ಲೇ ನಿಂತಿದ್ದ ಕಾಡಾನೆ ಸಾವು

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

11

Hasan: 100 ರೂ.ಗೆ ಸ್ನೇಹಿನನ್ನೇ ಹತ್ಯೆಗೈದ ಕಿರಾತಕರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

IFFI: ನವೆಂಬರ್ 20 ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

sanjay manjrekar

Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್‌ ಸಂಜಯ್‌ ಮಾಂಜ್ರೇಕರ್

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.