ಹೊಸಂಗಡಿಯ ಅಯ್ಯಪ್ಪ ಮಂದಿರದ ವಿಗ್ರಹ, ಭಂಡಾರ ಕಳವು ಆರೋಪಿಯ ಬಂಧನ
Team Udayavani, Aug 24, 2022, 12:57 AM IST
ಕುಂಬಳೆ: ಮಂಜೇಶ್ವರ ಹೊಸಂಗಡಿಯ ಅಯ್ಯಪ್ಪ ಮಂದಿರದಿಂದ ಆ. 20ರಂದು ಪಂಚಲೋಹ ವಿಗ್ರಹ ಹಾಗೂ ಭಂಡಾರವನ್ನು ಕಳವುಗೈದ ಆರೋಪಿಯಲ್ಲಿ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮಜಿಬೈಲು ಬೆಜ್ಜ ನಿವಾಸಿ ಜಯ ಭಂಡಾರಿ ಅವರ ಪುತ್ರ ಲಕ್ಷ್ಮೀಶ ಭಂಡಾರಿ (40) ಆರೋಪಿಯಾಗಿದ್ದು ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ರಾತ್ರಿ ಈತ ಹೊಸಂಗಡಿಯ ಅಯ್ಯಪ್ಪ ಮಂದಿರದ ಪಂಚಲೋಹದ ವಿಗ್ರಹವನ್ನು ಕಳವುಗೈದು ಬೈಕ್‌ನಲ್ಲಿ ಹೊತ್ತೂಯ್ಯಲಾಗದೇ ಮಂದಿರದ ಸಮೀಪದ ಪೊದೆಗಳೆಡೆಯಲ್ಲಿ ಎಸೆದು ಪರಾರಿಯಾಗಿದ್ದನು. ಸಿಸಿ ಕೆಮೆರಾ ಹಾಗೂ ಬೆರಳಚ್ಚಿನ ಜಾಡು ಹಿಡಿದು ಮಂಜೇಶ್ವರ ಪೊಲೀಸರು ಆರೋಪಿಯನ್ನು ಸೆರೆಹಿಡಿದಿದ್ದಾರೆ.
ದ.ಕ., ಕಾಸರಗೋಡು ಸಹಿತ ಹಲವೆಡೆಗಳಲ್ಲಿ ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದನು. ಅಯ್ಯಪ್ಪ ಮಂದಿರದ ವಿಗ್ರಹ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಮಂಜೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತ ಕಳವಿಗೆ ಬಳಸಿದ ಬೈಕ್ ಮತ್ತು ಆಯುಧಗಳನ್ನು ವಶಪಡಿಸಲಾಗಿದೆ. ಈತನನ್ನು ತನಿಖೆ ನಡೆಸಿದಾಗ ಈತ ಕಳ್ಳತನವನ್ನು ಮಾಡಿರುವುದು ಒಪ್ಪಿಕೊಂಡಿದ್ದಾನೆ. ಈತ ಓರ್ವ ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದು ಈತ ಕಳವು ತಂಡದಲ್ಲಿ ಓರ್ವನಾಗಿದ್ದು, ಉಳಿದವರ ಪತ್ತೆಗೆ ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.