3.30 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್ ರದ್ದು: ಹೊಸದಾಗಿ 2.70 ಲಕ್ಷ ಕಾರ್ಡ್ ಹಂಚಿಕೆ
Team Udayavani, Aug 24, 2022, 7:35 AM IST
ಬೆಂಗಳೂರು: ರಾಜ್ಯದಲ್ಲಿ 3.30 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ರದ್ದುಪಡಿಸಿದ ಅಕ್ರಮ ಬಿಪಿಎಲ್ ಕಾರ್ಡ್ಗಳಲ್ಲಿ 85 ಸಾವಿರ ಆದಾಯ ತೆರಿಗೆ ಪಾವತಿದಾರರದು ಮತ್ತು 22 ಸಾವಿರ ಸರಕಾರಿ ನೌಕರರದು ಎಂದು ಸುದ್ದಿಗಾರ ರಿಗೆ ಅವರು ತಿಳಿಸಿದ್ದಾರೆ. 2.70 ಲಕ್ಷ ಕಾರ್ಡ್ ಹೊಸದಾಗಿ ನೀಡುತ್ತಿದ್ದೇವೆ. ಇನ್ನೂ 1.50 ಲಕ್ಷ ಮಂದಿ ಹೊಸ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.
ಕೊರೊನಾ ಸಂದರ್ಭ ಆರಂಭಿಸಲಾದ ಕೇಂದ್ರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆ.ಜಿ. ಅಕ್ಕಿ ಉಚಿತ ವಿತರಣೆ ಸಪ್ಟೆಂಬರ್ನಿಂದ ಸ್ಥಗಿತ ಗೊಳ್ಳಲಿದೆ. ಸಬ್ಸಿಡಿ ಕಡಿತ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಭಿ ಪ್ರಾಯವನ್ನು ಕೇಂದ್ರ ಸರಕಾರ ಒಪ್ಪಿ ರಾಜ್ಯಗಳಿಗೆ ನಿರ್ದೇಶನ ನೀಡಿದರೆ ಅನ್ನಭಾಗ್ಯ, ಉಚಿತ ವಿದ್ಯುತ್ ಮತ್ತಿತರ ಯೋಜನೆಗಳ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸಚಿವರು ತಿಳಿಸಿದ್ದಾರೆ.
ಕುಚ್ಚಲಕ್ಕಿ ಪೂರೈಕೆಗೆ ಅಡ್ಡಿ
ಕರಾವಳಿ ಭಾಗದವರಿಗೆ ಕುಚ್ಚಲಕ್ಕಿ ಒದಗಿಸುವ ಸಲುವಾಗಿ ಬೆಂಬಲ ಬೆಲೆ ನೀಡಿ ಅದನ್ನು ಖರೀದಿ ಸಲು ತೀರ್ಮಾನಿಸಿದ್ದೆವು. ಆದರೆ ಅಗತ್ಯ ಪ್ರಮಾಣ ದಲ್ಲಿ ನಮಗೆ ಲಭ್ಯವಾಗುತ್ತಿಲ್ಲ. ನಾವು ನಿಗದಿ ಪಡಿ ಸಿದ್ದಕ್ಕಿಂತ ಹೆಚ್ಚಿನ ದರವನ್ನು ಕೇರಳದಲ್ಲಿ ನೀಡು ತ್ತಿರು ವುದರಿಂದ ಕುಚ್ಚಲಕ್ಕಿ ಅಲ್ಲಿಗೆ ಪೂರೈಕೆಯಾಗುತ್ತಿದೆ ಎಂದು ಸಚಿವ ಕತ್ತಿ ತಿಳಿಸಿದರು.
ಹೊಸದಾಗಿ ಕಾರ್ಡ್ ನೀಡುವ ಬಗ್ಗೆ ಹಣಕಾಸು ಇಲಾಖೆಯ ಅನುಮತಿ ಕೇಳಿದ್ದೇವೆ. ಅವರು ಒಪ್ಪಿಗೆ ಕೊಟ್ಟ ಕೂಡಲೇ ಕಾರ್ಡ್ ವಿತರಿಸುತ್ತೇವೆ. ಒಂದು ಬಿಪಿಎಲ್ ಕಾರ್ಡ್ಗೆ ಆಹಾರ ಧಾನ್ಯ ಒದಗಿಸಲು ರಾಜ್ಯ ಸರಕಾರ 550 ರೂ. ವೆಚ್ಚ ಮಾಡುತ್ತಿದೆ.
– ಉಮೇಶ್ ಕತ್ತಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.