ದೋಸೆಗೂ ಬಂತು ಪ್ರಿಂಟರ್! ನಿಮಿಷಗಳಲ್ಲಿ ತಿಂಡಿ ಸಿದ್ಧ ಎನ್ನುತ್ತಿದೆ ಈ ಸ್ಟಾರ್ಟ್‌ಅಪ್
Team Udayavani, Aug 25, 2022, 7:35 AM IST
ಚೆನ್ನೈ: ಹದವಾಗಿ ದೋಸೆ ಮಾಡುವುದೂ ಒಂದು ಕಲೆ. ಆದರಿದು ತಂತ್ರಜ್ಞಾನದ ಯುಗ. ದೋಸೆಯನ್ನೂ ಶುಚಿ, ರುಚಿಯಾಗಿ ತಯಾರಿಸಿಕೊಡಲು ಸಾಧನವೊಂದನ್ನು ಚೆನ್ನೈನ ಸ್ಟಾರ್ಟ್‌ಅಪ್ ತಯಾರಿಸಿದೆ!
ಎವೊಚೆಫ್ ಹೆಸರಿನ ಸ್ಟಾರ್ಟ್‌ಅಪ್ ವಿಶ್ವದ ಮೊದಲ ಸ್ಮಾರ್ಟ್ ದೋಸೆ ಮೇಕರ್ ಅನ್ನು ತಯಾರಿಸಿದೆ.
ಈ ದೋಸೆ ಮೇಕರ್‌ನಲ್ಲಿ ನೀವು ದೋಸೆ ಹಿಟ್ಟು ಹಾಕಿಬಿಟ್ಟರೆ ಸಾಕು. ನಿಮಿಷಗಳಲ್ಲಿ ಚೌಕಾಕಾರದ ದೋಸೆ ಸಿದ್ಧವಾಗಿಬಿಡುತ್ತದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಒಂದಿಷ್ಟು ಮಂದಿ ಇದನ್ನು ಕೊಂಡಾಡಿದ್ದರೆ, ಹಲವರು “ಅವಶ್ಯಕತೆಯೇ ಇಲ್ಲದ ಸಾಧನ’ ಎಂದು ದೂರಿದ್ದಾರೆ.
ಈ ದೋಸೆ ಮೇಕರ್‌ನಲ್ಲಿ ಹಿಟ್ಟನ್ನು ಹಾಕಿದರೆ ಸಾಕು. ಮಾಮೂಲಿ ಪ್ರಿಂಟರ್‌ಗಳಂತೆಯೇ ಇದು ದೋಸೆಯನ್ನೇ ಪ್ರಿಂಟ್ ಮಾಡಿಕೊಟ್ಟುಬಿಡುತ್ತದೆ. ದೋಸೆ ಎಷ್ಟು ದಪ್ಪವಿರಬೇಕು, ಎಷ್ಟು ಕ್ರಿಸ್ಪಿಯಾಗಿರಬೇಕು, ಎಷ್ಟು ಹೊತ್ತು ಕಾಯಿಸಬೇಕು ಎನ್ನುವುದನ್ನೂ ನೀವು ಈ ಮೇಕರ್‌ನಲ್ಲಿ ಸೆಟ್ ಮಾಡಿಕೊಳ್ಳಬಹುದು.
ಕೊಳ್ಳುವುದು ಹೇಗೆ?
ಸದ್ಯ ಈ ದೋಸೆ ಮೇಕರ್ ಅನ್ನು ಎವೊಚೆಫ್ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು. ವಿಶೇಷವಾಗಿ ಮನೆಯಿಂದ ದೂರ ಇರುವವರಿಗಾಗಿಯೇ ಈ ಮೇಕರ್ ಅನ್ನು ಮಾಡಿರುವುದಾಗಿ ಹೇಳಿಕೊಂಡಿರುವ ಸಂಸ್ಥೆ ವಿಶ್ವಾದ್ಯಂತ ಇದರ ಡೆಲಿವರಿ ಮಾಡುವುದಾಗಿ ತಿಳಿಸಿದೆ. ನಾಲ್ಕು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ದೋಸೆ ಮೇಕರ್ ಬೆಲೆ 15,999 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.