![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 25, 2022, 7:20 AM IST
ನವದೆಹಲಿ: ವಿಶ್ವ ಪ್ರಸಿದ್ಧ ತಾಜ್‌ಮಹಲ್ ನೋಡಬೇಕೆಂದರೆ ಇನ್ನು ಮುಂದೆ ನೀವು ಆನ್‌ಲೈನ್‌ನಲ್ಲೇ ಟಿಕೆಟ್ ಖರೀದಿಸುವ ದಿನಗಳು ಬರಬಹುದು.
ಜನರ ಸರತಿ ಸಾಲನ್ನು ತಪ್ಪಿಸುವ ನಿಟ್ಟಿನಲ್ಲಿ ತಾಜ್‌ಮಹಲ್ ಬಳಿ ಇರುವ ಕೌಂಟರ್‌ನಲ್ಲಿ ಟಿಕಟ್ ನೀಡದೆ, ಆನ್‌ಲೈನ್‌ನಲ್ಲಿ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣ(ಎಎಸ್‌ಐ) ಇಲಾಖೆ ತಿಳಿಸಿದೆ.
ಈ ಬಗ್ಗೆ ಪ್ರಸ್ತಾವನೆಯನ್ನು ನವದೆಹಲಿಯಲ್ಲಿ ಇರುವ ಎಎಸ್‌ಐ ವಲಯ ಕಚೇರಿಗೆ ಕಳುಹಿಸಲಾಗಿದೆ.
ಎಎಸ್‌ಐನ ಮತ್ತೊಬ್ಬ ಅಧಿಕಾರಿ ಮಾತನಾಡಿ ಟಿಕೆಟ್ ಕೌಂಟರ್‌ನಲ್ಲಿ ಜನ ಸಂದಣಿಗೆ ಅನುಸಾರವಾಗಿ ಹೆಚ್ಚುವರಿ ಸಿಬ್ಬಂದಿಯನ್ನೂ ನೀಡಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸಿದರೆ, ಈ ತೊಂದರೆ ತಪ್ಪಲಿದೆ ಎಂದರು.
ಜತೆಗೆ ಜನರಿಗೆ ಕೂಡ ಹೆಚ್ಚಿನ ತೊಂದರೆ ಇಲ್ಲದೆ ಭೇಟಿ ನೀಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದ ಕಾರಣ 2020 ಮತ್ತು 2021ರಲ್ಲಿ ತಾಜ್‌ಮಹಲ್ ಸಮೀಪ ಇರುವ ಟಿಕೆಟ್ ಕೌಂಟರ್‌ಗಳನ್ನು ಬಂದ್ ಮಾಡಿತ್ತು. ನಂತರ ಅದನ್ನು ಪುನಾರಂಭಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.