ಮತ್ತೆ ಸ್ಫೋಟಕ ಶತಕ ಸಿಡಿಸಿದ ಚೇತೇಶ್ವರ ಪೂಜಾರ
Team Udayavani, Aug 24, 2022, 11:32 PM IST
ಲಂಡನ್: ಭಾರತೀಯ ಕ್ರಿಕೆಟಿಗ ಚೇತೇಶ್ವರ ಪೂಜಾರ ಅಂದ ಕೂಡಲೇ ನೆನಪಿಗೆ ಬರುವುದು ಟೆಸ್ಟ್ ಕ್ರಿಕೆಟ್!
ಟೆಸ್ಟ್ ಅಂದರೆ ಮೊದಲೇ ನಿಧಾನ, ಇಲ್ಲವರು ಇನ್ನಷ್ಟು ನಿಧಾನವಾಗಿ ಆಡಿ ಟೀಕೆಗೊಳಗಾಗಿದ್ದರು. ಅಂತಹ ಪೂಜಾರ ಐಪಿಎಲ್ ತಂಡಗಳಿಗೆ ಆಯ್ಕೆಯಾದರೂ, 11ರ ಬಳಗದಲ್ಲಿ ಸ್ಥಾನ ಪಡೆದಿದ್ದು ಹುಡುಕಿದರೆ ಮಾತ್ರ ಸಿಗುವಂತಹ ಘಟನೆ!
ಈಗವರು ಬದಲಾಗಿದ್ದಾರೆ, ಎಷ್ಟು ಬದಲಾಗಿ ದ್ದಾರೆ ಎಂದರೆ ಅತ್ಯಂತ ಸ್ಫೋಟಕ ಆಟಗಾರರನ್ನು ಸರಿಗಟ್ಟುವಂತೆ ಬದಲಾಗಿದ್ದಾರೆ. ಇದಕ್ಕೆ ಉದಾಹರಣೆ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಏಕದಿನ ಕಪ್.
ಈ ಕೂಟದಲ್ಲಿ ಅವರು ಮೂರು ಶತಕ ಗಳಿಸಿದ್ದಾರೆ. ಅದರಲ್ಲಿ ಸತತ ಎರಡು ಶತಕವೂ ಸೇರಿದೆ. ಮಂಗಳವಾರ ಸಸೆಕ್ಸ್ ತಂಡದ ನಾಯಕನಾಗಿ ಅವರು ಕೇವಲ 90 ಎಸೆತಗಳಲ್ಲಿ 132 ರನ್ ಚಚ್ಚಿದ್ದಾರೆ. ಇದರಲ್ಲಿ 20 ಬೌಂಡರಿ, 2 ಸಿಕ್ಸರ್ ಸೇರಿವೆ. ಇದರ ಪರಿಣಾಮ ಸಸೆಕ್ಸ್ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 400 ರನ್ ಕಲೆಹಾಕಿತು. ಮಿಡ್ಲ್ಸೆಕ್ಸ್ 243 ರನ್‌ಗಳಿಗೆ ಆಲೌಟಾಗಿ ಸೋತುಹೋಯಿತು.
ಬರೀ ಇಷ್ಟೇ ಆಗಿದ್ದರೆ ಏನೋ ಆಯಿತು ಎಂದುಕೊಳ್ಳಬಹುದಿತ್ತು. ಆದರೆ ಹಾಗಾಗಿಲ್ಲ. ಆ. 12ರಂದು ಪೂಜಾರ ವಾರ್ವಿಕ್‌ಶೈರ್ ಎದುರು ಅಬ್ಬರಿಸಿದ್ದರು. ಅಲ್ಲಿ 79 ಎಸೆತಗಳಲ್ಲಿ 107 ರನ್ ಚಚ್ಚಿದ್ದರು. ಆ.14ರಂದು ಸರ್ರೆ ಎದುರು ಕೇವಲ 131 ಎಸೆತಗಳಲ್ಲಿ 174 ರನ್ ಚಚ್ಚಿದ್ದರು.
ಮುಂದಿನೆರಡು ಪಂದ್ಯಗಳಲ್ಲಿ ಕ್ರಮವಾಗಿ 49, 66 ರನ್ ಗಳಿಸಿದ್ದರು. ಎಲ್ಲೂ ಅವರು ನಿಧಾನವಾಗಿ ಆಡಿಲ್ಲ. ಇದು ಸ್ಪಷ್ಟವಾಗಿ ಪೂಜಾರ ತಮ್ಮ ಟೀಕಾಕಾರರಿಗೆ ಬ್ಯಾಟ್‌ನಿಂದಲೇ ನೀಡಿದ ಉತ್ತರ. ಮುಂದವರು ಐಪಿಎಲ್ ಫ್ರಾಂಚೈಸಿಗಳ ಪಾಲಿನ ಮೆಚ್ಚಿನ ಆಟಗಾರರಾಗಿ ಆಯ್ಕೆಯಾಗುವುದು ಖಚಿತ ವೆಂದು ಹೇಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
IPL Mega Auction: ಹರಾಜು ಆರಂಭ; ಭರ್ಜರಿ ಬಿಡ್ ಗಳಿಸಿದ ವೇಗಿ ಅರ್ಶದೀಪ್ ಸಿಂಗ್
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.