ಫ್ಲಿಪ್ಕಾರ್ಟ್ ನಿಂದ ಹಬ್ಬದ ಸೀಸನ್ಗಾಗಿ ಫ್ಯಾಷನ್ ಸಂಗ್ರಹ
Team Udayavani, Aug 25, 2022, 9:33 PM IST
ಬೆಂಗಳೂರು: ಮುಂಬರುವ ಹಬ್ಬದ ಸೀಸನ್ ಮತ್ತು ಬಹು ನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ ಬರುತ್ತಿರುವ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ಇಂದು ಹೊಸ ಶರತ್ಕಾಲ-ಚಳಿಗಾಲದ ಫ್ಯಾಷನ್ ಸಂಗ್ರಹವನ್ನು ತನ್ನ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಿದೆ.
ಭಾರತದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಟಾಪ್ ಬ್ರ್ಯಾಂಡ್ ಗಳ ಲಕ್ಷಾಂತರ ಹೊಸ ಸ್ಟೈಲಿಶ್ ಫ್ಯಾಷನ್ ಸಂಗ್ರಹವನ್ನು ಹೊಂದಿದೆ. ಸಿದ್ಧ ಉಡುಪು, ಅಕ್ಸೆಸರಿಗಳು ಮತ್ತು ಪಾದರಕ್ಷೆಗಳು ಸೇರಿದಂತೆ ಇನ್ನೂ ಹಲವು ವಿಭಾಗಗಳ ಉತ್ಪನ್ನಗಳು ಲಭ್ಯವಿವೆ. ಈ ಹಿಂದಿನ ಬೇಸಿಗೆ ಸೀಸನ್ ಮತ್ತು ಎಂಡ್ ಆಫ್ ಸೀಸನ್ ಸೇಲ್ ನಲ್ಲಿ ಎಲ್ಲಾ ವರ್ಗದ ಶಾಪರ್ ಗಳು ಗಣನೀಯ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ಈ ಹೊಸ ಸೀಸನ್ ನ ಬಿಡುಗಡೆಯು ದೇಶದ ಮೆಟ್ರೋ ನಗರಗಳು ಮತ್ತು 2 ನೇ ಶ್ರೇಣಿಯ ಪ್ರದೇಶಗಳಲ್ಲಿರುವ ಮಿಲಿಯನ್ ಗಟ್ಟಲೆ ಗ್ರಾಹಕರಿಗೆ ಕ್ಯುರೇಟೆಡ್ ಫ್ಯಾಶನ್ ಮತ್ತು ಲೈಫ್ ಸ್ಟೈಲ್ ಆಫರ್ ಗಳನ್ನು ನೀಡಲಿದೆ.
ಇದಲ್ಲದೇ, ಶರತ್ಕಾಲ ಚಳಿಗಾಲದ ಸಂಗ್ರಹವನ್ನು ಪರಿಚಯಿಸುತ್ತಿರುವ ಫ್ಲಿಪ್ ಕಾರ್ಟ್ ಮುಂಬರುವ ಹಬ್ಬದ ಸೀಸನ್ ಗಾಗಿ ಹಲವಾರು ತಂತ್ರಜ್ಞಾನ ನೇತೃತ್ವದ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಪರಿಷ್ಕೃತವಾದ ಶಾಪಿಂಗ್ ಅನುಭವವನ್ನು ಒದಗಿಸಲು ಸಜ್ಜಾಗಿದೆ.
ಫ್ಲಿಪ್ ಕಾರ್ಟ್ ಸಾಮಾಜಿಕ ಮಾಧ್ಯಮದಲ್ಲಿ ಪ್ಲಾಟ್ ಫಾರ್ಮ್ ನ ವಿಸ್ತಾರವಾದ ಶರತ್ಕಾಲ-ಚಳಿಗಾಲದ ಫ್ಯಾಶನ್ ಕ್ಯುರೇಶನ್ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ #NewForYou ಅಭಿಯಾನಕ್ಕಾಗಿ ಫ್ಯಾಶನ್ ಮತ್ತು ಲೈಫ್ ಸ್ಟೈಲ್ ನಾದ್ಯಂತ 100 ಕ್ಕೂ ಹೆಚ್ಚು ಮಾರಾಟಗಾರರೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.
ಫ್ಲಿಪ್ ಕಾರ್ಟ್ ನ ಈ ಶರತ್ಕಾಲ ಚಳಿಗಾಲದ ಫ್ಯಾಶನ್ ಸಂಗ್ರಹದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳ ಉಡುಪುಗಳು, ಪಾದರಕ್ಷೆಗಳು ಮತ್ತು ಇನ್ನಿತರೆ ಪರಿಕರಗಳ ವ್ಯಾಪಕ ಶ್ರೇಣಿಯನ್ನು ಕಾಣಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.