ಮಂತ್ರಾಲಯದಲ್ಲಿ ಶ್ರೀಮನ್ಯಾಯಸುಧಾ ಮಂಗಳೋತ್ಸವ
Team Udayavani, Aug 25, 2022, 10:32 PM IST
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಶ್ರೀಮನ್ಯಾಯಸುಧಾ ಅಧ್ಯಯನ ಮುಗಿಸಿದ ಐದನೇ ತಂಡದ ಮಂಗಳೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮಠದ ಪ್ರಾಂಗಣದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಮತ್ತು ಮಹೋಪಾಧ್ಯಾಯ ಡಾ| ಗಿರಿಯಾಚಾರ್ ಸಮ್ಮುಖದಲ್ಲಿ ಸುಧಾ ಮಂಗಳ ಗ್ರಂಥದ ಕುರಿತು ಚರ್ಚೆ, ವ್ಯಾಖ್ಯಾನ ಮತ್ತು ಸಂವಾದಗಳು ನಡೆದವು. ದೇಶದ ವಿವಿಧೆಡೆಯಿಂದ 500ಕ್ಕೂ ಹೆಚ್ಚು ವಿದ್ವಾಂಸರು ಮಂಗಳೋತ್ಸವದಲ್ಲಿ ಭಾಗವಹಿಸಿದ್ದು, ಅಧ್ಯಯನ ಪೂರ್ಣಗೊಳಿಸಿದ ನಾಲ್ಕು ವಿದ್ಯಾರ್ಥಿಗಳನ್ನು ಪರೀಕ್ಷಿಸಿದರು.
ಸುಧಾ ಅಧ್ಯಯನ ಪೂರ್ಣಗೊಳಿಸಿದ ಶಶಿಧರಾಚಾರ್ಯ, ಸಂಪತ್ ಕುಮಾರಾಚಾರ್ಯ, ಸುಮುಖಾಚಾರ್ಯ ಹಾಗೂ ರಾಮಕೃಷ್ಣಾಚಾರ್ಯರಿಗೆ ಶ್ರೀ ಸುಬುಧೇಂದ್ರ ತೀರ್ಥರು ಪ್ರಮಾಣಪತ್ರ, 1 ಲಕ್ಷ ರೂ., ವಸ್ತ್ರ ಹಾಗೂ ಐದು ಬಗೆಯ ರಜತ ಪೂಜಾಪತ್ರೆಗಳನ್ನು ನೀಡಿ ಆಶೀರ್ವದಿಸಿದರು. ವಿದ್ಯಾರ್ಥಿಗಳು ಗುರುಗಳಿಗೆ ಫಲಪುಷ್ಪಗಳನ್ನು ಸಮರ್ಪಿಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಮಂತ್ರಾಲಯ ಶ್ರೀಮಠವು ವಿದ್ಯಾಮಠವೆಂದು ಪ್ರಸಿದ್ಧಿ ಪಡೆದಿದೆ. ವಿದ್ಯಾರ್ಥಿಗಳಿಗೆ ಹಾಗೂ ಗುರುಗಳಿವೆ ಆಶ್ರಯ ನೀಡಿದೆ. ಈ ಪರಂಪರೆಯು ಎಂದಿನಂತೆ ಮುಂದುವರಿಸಲಾಗಿದೆ. ಸಂಸ್ಕೃತ ವಿದ್ಯಾಪೀಠದಿಂದ ಐದನೇ ತಂಡವು ಶ್ರೀಮನ್ಯಾಯಸುಧಾ ಅಧ್ಯಯನ ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ಮಂಗಳೋತ್ಸವ ಆಯೋಜಿಸ ಲಾಗಿದೆ. 6ನೇ ತಂಡದ ಅಧ್ಯಯನವೂ ಅರ್ಧದಷ್ಟು ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಮಂಗಳ್ಳೋತ್ಸವ ಏರ್ಪಡಿಸಿ ಮಠಾಧೀಶರನ್ನು ಆಹ್ವಾನಿಸಲಾಗುವುದು. ಏಳು ತಂಡದಲ್ಲಿ 9 ವಿದ್ಯಾರ್ಥಿಗಳು ಸೇರ್ಪಡೆ ಆಗುತ್ತಿದ್ದಾರೆ ಎಂದರು. ಶ್ರೀಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ| ವಾದಿರಾಜಚಾರ್ಯ ಸೇರಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.