ಭೂತಾಯಿಗೆ ಭಾರತ ಶಕ್ತಿ: ಕೇಂದ್ರದಿಂದ ಒಂದು ದೇಶ, ಒಂದು ರಸಗೊಬ್ಬರ ಯೋಜನೆ
Team Udayavani, Aug 26, 2022, 8:30 AM IST
ಹೊಸದಿಲ್ಲಿ: ದೇಶಾದ್ಯಂತ ರಸಗೊಬ್ಬರ ಬ್ರ್ಯಾಂಡ್‌ಗಳಲ್ಲಿ ಏಕೀಕೃತ ವ್ಯವಸ್ಥೆ ಜಾರಿ ಮಾಡಲೆಂದು ಕೇಂದ್ರ ಸರಕಾರವು “ಒಂದು ದೇಶ, ಒಂದು ರಸಗೊಬ್ಬರ’ ಯೋಜನೆ ಯನ್ನು ಜಾರಿ ಗೊಳಿಸಿದೆ.
ಇನ್ನು ಮುಂದೆ ದೇಶದ ಎಲ್ಲ ರಸ ಗೊಬ್ಬರ ಕಂಪೆನಿ ಗಳೂ “ಭಾರತ್’ ಎಂಬ ಏಕೈಕ ಬ್ರ್ಯಾಂಡ್ ಹೆಸರಿ ನಲ್ಲೇ ರಸ ಗೊಬ್ಬರ ವನ್ನು ಮಾರುವಂತೆ ಕೇಂದ್ರ ಸರಕಾರ ಗುರುವಾರ ಆದೇಶಿಸಿದೆ.
ಯಾವುದೇ ಕಂಪೆನಿ ರಸಗೊಬ್ಬರ ಉತ್ಪಾದಿಸಿ ದರೂ ಎಲ್ಲ ಚೀಲಗಳ ಮೇಲೆ “ಭಾರತ್’ ಎಂಬ ಹೆಸರೇ ಇರಲಿದೆ. ಅಂದರೆ, “ಭಾರತ್ ಯೂರಿಯಾ, ಭಾರತ್ ಡಿಎಪಿ’ ಇತ್ಯಾದಿ ಇರಲಿದೆ. ಈ ನಿಯಮ ಎಲ್ಲ ರಸ ಗೊಬ್ಬರ ಕಂಪೆನಿ, ಸರಕಾರಿ ಸ್ವಾಮ್ಯದ ಕಂಪೆನಿ ಮತ್ತು ಮಾರುಕಟ್ಟೆ ಏಜೆನ್ಸಿಗಳಿಗೆ ಅನ್ವಯವಾಗಲಿದೆ.
ಏನಿದು “ಭಾರತ್’ ಯೋಜನೆ?:
ಪ್ರಧಾನಮಂತ್ರಿ ಭಾರತೀಯ ಜನ್ ಉರ್ವರಕ್ ಪರಿ ಯೋಜನಾ (ಪಿಎಂ ಬಿಜೆಪಿ) ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಇದರಡಿ ಕೇಂದ್ರ ಸರಕಾರವು ವಾರ್ಷಿಕವಾಗಿ ರಸಗೊಬ್ಬರ ಕಂಪೆನಿಗಳಿಗೆ ಸಬ್ಸಿಡಿಯನ್ನು ನೀಡುತ್ತದೆ. ಈ ಸಬ್ಸಿಡಿಯ ಬಗ್ಗೆ ಚೀಲದ ಮೇಲೆಯೇ ಮುದ್ರಿಸಬೇಕು ಎಂಬುದು ಕೇಂದ್ರದ ಅಭಿಪ್ರಾಯ. ಕೇಂದ್ರ ಸರಕಾರವೇ ಚೀಲಗಳನ್ನು ವಿನ್ಯಾಸಗೊಳಿಸಲಿದ್ದು, ಅ. 2ರಿಂದ ಜಾರಿ ಗೊಳ್ಳಲಿದೆ. ಸೆ.15ರಿಂದ ಹಳೇ ವಿನ್ಯಾಸದ ಚೀಲಗಳನ್ನು ಖರೀದಿಸಬಾರದು. ಈಗಾಗಲೇ ಕಂಪೆನಿಗಳ ಬಳಿ ಇರುವ ಹಳೇ ಚೀಲಗಳನ್ನು ಡಿ.12ರ ಒಳಗೆ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ.
ಚೀಲಗಳ ಮೇಲೆ ಏನಿರಬೇಕು? :
ಸರಕಾರದ ವಿನ್ಯಾಸದಂತೆ ಚೀಲದ ಮೇಲೆ ಮೂರನೇ ಎರಡರಷ್ಟು ಭಾಗದಲ್ಲಿ ಪ್ರಧಾನಮಂತ್ರಿ ಭಾರತೀಯ ಜನ್‌ಉರ್ವರಕ್ ಪರಿಯೋಜನಾ ಮತ್ತು ಭಾರತ್ ಡಿಎಪಿ ಅಥವಾ ಭಾರತ್ ಯೂರಿಯಾ ಅಥವಾ ಭಾರತ್ ಎಂಒಪಿ ಅಥವಾ ಭಾರತ್ ಎನ್‌ಪಿಕೆ ಎಂದು ಮುದ್ರಿಸಬೇಕು.
ಕೇಂದ್ರ ಸರಕಾರದ ಈ ಆದೇಶಕ್ಕೆ ರಸಗೊಬ್ಬರ ಕಂಪೆನಿಗಳು ವಿರೋಧ ವ್ಯಕ್ತಪಡಿಸಿವೆ. ಈ ನಿರ್ಧಾರದಿಂದಾಗಿ ತಮ್ಮ ಬ್ರ್ಯಾಂಡ್ ವ್ಯಾಲ್ಯೂ ಕಡಿಮೆಯಾಗುತ್ತದೆ ಎಂಬುದು ಉದ್ಯ ಮದ ತಜ್ಞರ ಅಭಿಪ್ರಾಯ. ತಮ್ಮ ಬ್ರ್ಯಾಂಡ್‌ನ ಜತೆ, ರೈತರ ಜತೆ ಸಂಪರ್ಕಹೊಂದಿ, ಬೇರೆ ಬೇರೆ ಕಂಪೆನಿ ಗಳ ಉತ್ಪನ್ನಗಳಿಗೂ, ತಮ್ಮ ಉತ್ಪನ್ನಗಳಿಗೂ ಇರುವ ವ್ಯತ್ಯಾಸದ ಬಗ್ಗೆ ಹೇಳುತ್ತಿದ್ದೆವು. ಹೊಸ ನಿಯಮದಂತೆ ಅದಕ್ಕೆ ಅವಕಾಶವಿಲ್ಲ. ಉತ್ಪಾದಕರು ಮತ್ತು ಆಮದುದಾರರ ಜತೆ ಮಾತ್ರ ಕಂಪೆನಿಗಳ ಸಂಪರ್ಕವಿರಲಿದೆ.
ಸರಕಾರದ ಮೇಲೂ ಅಡ್ಡಪರಿಣಾಮ?:
ಉದ್ಯಮದ ವಿಶ್ಲೇಷಕರ ಪ್ರಕಾರ, ಈ ಹೊಸ ಪದ್ಧತಿ ಯಿಂದಾಗಿ ಸರಕಾರದ ಮೇಲೂ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ. ಒಂದು ವೇಳೆ, ರೈತರಿಗೆ ನೀಡಿದ ರಸಗೊಬ್ಬರದ ಗುಣಮಟ್ಟವು ಸರಿಯಾಗಿಲ್ಲವೆಂದಾದರೆ, ಆಗ ರೈತರು ನೇರವಾಗಿ ಸರಕಾರವನ್ನೇ ದೂಷಿಸುತ್ತಾರೆ. ಆಗ ಸರಕಾರದ ವರ್ಚಸ್ಸಿಗೆ ಧಕ್ಕೆ ಆಗಬಹುದು ಎಂದು ಹೇಳಲಾಗಿದೆ.
ಕಾಂಗ್ರೆಸ್ ಆಕ್ಷೇಪ :
ಇದು ಒಂದು ದೇಶ, ಒಂದು ರಸಗೊಬ್ಬರ ಯೋಜನೆ ಯಲ್ಲ; ಬದಲಿಗೆ ಒಂದು ದೇಶ, ಒಬ್ಬ ವ್ಯಕ್ತಿ, ಒಂದು ರಸ ಗೊಬ್ಬರ ಯೋಜನೆ ಎಂದು ಕಾಂಗ್ರೆಸ್‌ನ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ. ಈ ಯೋಜನೆ ಮೂಲಕ ಬಿಜೆಪಿ ಸರ್ವವ್ಯಾಪಿ ಮತ್ತು ಸ್ವಯಂ ಪ್ರಚಾರಕ್ಕೆ ಮುಂದಾಗಿದೆ. ಅಂದರೆ, ಈ ಯೋಜನೆ ಹೆಸರು ಪಿಎಂ-ಬಿಜೆಪಿ. ಹೀಗಾಗಿ, ಅವರು ಪ್ರಧಾನಿ ಮತ್ತು ಬಿಜೆಪಿ ಎಂಬ ಎರಡನ್ನು ಜತೆಗೂಡಿ ಗೊಬ್ಬರದ ಚೀಲದ ಮೇಲೆ ಮುದ್ರಿಸಲಾಗಿದೆ ಎಂದಿದ್ದಾರೆ.
ಏಕೆ ಈ ಯೋಜನೆ? :
ಕೇಂದ್ರ ಸರಕಾರದ ಪ್ರಕಾರ ರಸಗೊಬ್ಬರಗಳು ಒಂದೇ ಬ್ರ್ಯಾಂಡ್‌ನಲ್ಲಿ ಇರಬೇಕು. ಇದರಿಂದ ಸರಕು ಸಾಗಣೆ ವೆಚ್ಚ ಹಾಗೂ ಸಾಗಣೆ ಸಮಯ ಕಡಿಮೆ ಯಾಗಲಿದೆ. ಬ್ರ್ಯಾಂಡ್‌ಗಳ ಹೊರತಾಗಿಯೂ ರಸಗೊಬ್ಬರವು ವರ್ಷವಿಡೀ ಲಭ್ಯವಿರುತ್ತದೆ. ಕೈಗಾರಿಕಾ ಬಳಕೆಗೆ ಯೂರಿ ಯಾ ಬಳಕೆ ನಿಲ್ಲಲಿದೆ. ರಸಗೊಬ್ಬರ ಕಂಪೆನಿಗಳಿಗೆ ಸಬ್ಸಿಡಿ ನೀಡುವ ಕೇಂದ್ರ ಸರಕಾರವೇ ಅವುಗಳ ದರ ಹಾಗೂ ಮಾರಾಟ ಕೇಂದ್ರವನ್ನೂ ತೀರ್ಮಾನಿಸಲಿದೆ. ಹೀಗಾಗಿ ರಸಗೊಬ್ಬರಕ್ಕಾಗಿ ಹೆಚ್ಚು ವೆಚ್ಚ ಮಾಡಿ, ಕಡಿಮೆ ಹೆಸರು ಪಡೆದುಕೊಳ್ಳುವುದೇಕೆ ಎಂಬ ಕಾರಣವೂ ಈ ನಿರ್ಧಾರದ ಹಿಂದಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.