ರೈತರ ಮೇಲಿನ ಮೊಕದ್ದಮೆ ವಾಪಸ್‌ ಪಡೆಯಿರಿ; ಎಚ್‌.ಡಿ. ಕುಮಾರಸ್ವಾಮಿ

ಹಳ್ಳಿಗಳಲ್ಲಿ 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ಜನವಿರೋಧಕ್ಕೆ ಕಾರಣವಾಗುತ್ತಿದೆ.

Team Udayavani, Aug 26, 2022, 5:24 PM IST

ರೈತರ ಮೇಲಿನ ಮೊಕದ್ದಮೆ ವಾಪಸ್‌ ಪಡೆಯಿರಿ; ಎಚ್‌.ಡಿ. ಕುಮಾರಸ್ವಾಮಿ

ದೇವನಹಳ್ಳಿ: ಆ.15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ 71 ಜನರ ಮೇಲೆ ಪೊಲೀಸರು ಹಾಕಿರುವ ಮೊಕದ್ದಮೆ ಕೂಡಲೇ ವಾಪಸ್‌ ಪಡೆಯಬೇಕು. ಕೈಗಾರಿಕೆಯಷ್ಟೇ ಕೃಷಿ ಭೂಮಿಗೂ ಮಹತ್ವ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಜಿಲ್ಲಾಡಳಿತ ಭವನದ ಎದುರು ಭೂಸ್ವಾಧೀನ ಹೋರಾಟ ಸಮಿತಿ ಹಾಗೂಪಕ್ಷಾತೀತವಾಗಿ ಭೂಸ್ವಾಧೀನ ವಿರೋಧ ಹಾಗೂ ರೈತರ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಫ‌ಲವತ್ತಾದ ಭೂಮಿಯನ್ನು ಕೈಗಾರಿಕೆ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿರುವುದು ಖಂಡನೀಯ. ರೈತರ ಅಸಮಾಧಾನದ ಬಗ್ಗೆ ಅಭಿವೃದ್ಧಿ ಮಾಡಲು ತಡೆ ನೀಡಬೇಕು. ಬರಡು ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. ಕೆಐಎಡಿಬಿಯಲ್ಲಿ ನಡೆದ ಹಗರಣಗಳಲ್ಲಿ ಹಲವಾರು ಮಂತ್ರಿಗಳು ಜೈಲಿಗೆ ಹೋಗಿದ್ದಾರೆ.

2009-2010ರಲ್ಲಿ ಕೈಗಾರಿಕಾ ಸಚಿವರಾಗಿದ್ದವರು ಜೈಲಿಗೆ ಹೋಗಿರುವ ನಿದರ್ಶನ ನಮ್ಮ ಮುಂದೆ ಇದೆ. ಇದೇ ರೀತಿ ಹಗರಣಗಳು ಹೊರಗೆ ಬರುತ್ತಿದ್ದರೆ 10ರಿಂದ 12 ಪರ±³‌ನ ಅಗ್ರಹಾರ ಜೈಲುಗಳ ನಿರ್ಮಾಣ ಮಾಡಬೇಕಾಗುತ್ತದೆ. ರೈತರ ಹೋರಾಟಕ್ಕೆ ನಮ್ಮ ಪಕ್ಷ ಸಂಪೂರ್ಣ ಬೆಂಬಲವಿದೆ ಎಂದರು.

ಸೆಪ್ಟೆಂಬರ್‌ 12ರಂದು ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಕೆಲವು ಹಳ್ಳಿಗಳು, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ, ಕುಂದಾಣ ಹೋಬಳಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಶಾಂತಿಯುತವಾಗಿ ಹೋರಾಟ ಮಾಡಿ, ನಿಮ್ಮ ಜೊತೆ ನಾವಿರುತ್ತೇವೆ ಎಂದರು.

ಅಧಿಕಾರ ದುರುಪಯೋಗ: ರೈತರ ವಿಚಾರವಾಗಿ ಯಾರೇ ಸಚಿವರಾಗಲಿ, ಮೂಗು ತೂರಿಸಿ ರೈತರ ವಿರುದ್ಧ ಹೋದರೆ ಡಾ. ಸುಧಾಕರ್‌ ಹಾಗೂ ಯಾರೇ ಆಗಲಿ, ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ರೈತರ ಆಕ್ರೋಶಕ್ಕೆ ಕಾರಣವಾಗಿ ಅವರಿಗೆ ದೌರ್ಜನ್ಯದಿಂದ ಅಧಿಕಾರ ದುರುಪಯೋಗ ಪಡಿಸಿಕೊಂಡು ದಬ್ಟಾಳಿಕೆ ಮಾಡಿದರೆ ಮುಂದೆ ದೊಡ್ಡ ಪ್ರಾಯಚ್ಚಿತ್ತ ಪಡಬೇಕಾಗುತ್ತದೆ. ಸಚಿವ ಸುಧಾಕರ್‌ ಅವರ ತಂಡ ಏನು ಮಾಡುತ್ತಿದೆ ಎಂಬುವ
ಮಾಹಿತಿಯಿದೆ ಎಂದು ಕಿಡಿಕಾರಿದರು.

ರೈತರ ಬದುಕಿನ ಜೊತೆ ಚೆಲ್ಲಾಟ: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಹಳ್ಳಿಗಳಲ್ಲಿ 1,777ಎಕರೆ ಜಮೀನನ್ನು 2ನೇ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಹೊರಡಿಸಿರುವುದನ್ನು ಕೈಬಿಡಬೇಕು. ಚನ್ನರಾಯ  ಪಟ್ಟಣದ ಹೋಬಳಿಯಲ್ಲಿ ವಿಮಾನ ನಿಲ್ದಾಣವಿರುವುದರಿಂದ ಕೈಗಾರಿಕೆಯನ್ನು ಅಭಿವೃದ್ಧಿ ಪಡಿಸಬೇಕಾಗದ ಒಂದೇ ಕಾರಣದಿಂದ ಈ ಭಾಗದಲ್ಲಿ ಫ‌ಲವತ್ತಾದ ಭೂಮಿಯಲ್ಲಿ ರೈತರು ದ್ರಾಕ್ಷಿ, ರಾಗಿ ಸೇರಿದಂತೆ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇಂತಹ ಬೆಲೆಬಾಳುವ ಭೂಮಿಯನ್ನು ಭೂಸ್ವಾಧೀನ ಮಾಡಿ, ಯಾರೋ ದಲ್ಲಾಳಿಗಳಿಗೆ ಭೂಮಿ ಕೊಡುವಂತಹದ್ದು ಈಗಿನ ಕೈಗಾರಿಕಾ ಸಚಿವರ ಬಗ್ಗೆ ಹೇಳಬೇಕಾದರೆ ಒಂದು ಬ್ರಹ್ಮಾಂಡವಾದ ವಿಷಯಗಳನ್ನು ಸಹ ಪ್ರಸ್ತಾಪನೆ ಮಾಡಬಹುದು. ಸಚಿವರು ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.

ಸಚಿವ ಸಂಪುಟದಿಂದ ನಿರಾಣಿ ಕೈಬಿಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಮತ್ತು ಐಟಿಐಆರ್‌ಗಾಗಿ ಯೋಜಿಸಿರುವ ಕುಂದಾಣ ಹೋಬಳಿಯ ನಾಲ್ಕು ಹಳ್ಳಿಗಳ 847ಎಕರೆ, ದೊಡ್ಡಬಳ್ಳಾಪುರ ತಾಲೂಕಿನ ಕಸಬಾಹೋಬಳಿಯ 1,031ಎಕರೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಕೆಐಎಡಿಬಿ ಸಂಸ್ಥೆಯನ್ನು ರಿಯಲ್‌
ಎಸ್ಟೇಟ್‌ ಸಂಸ್ಥೆಯನ್ನಾಗಿ ಮಾರ್ಪಡಿಸಿ ರೈತರಿಗೆ ದ್ರೋಹ ಮಾಡುತ್ತಿರುವ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿಯನ್ನು ಮಂತ್ರಿಮಂಡಳದಿಂದ ಕೈಬಿಡ  ಬೇಕು ಎಂದು ಒತ್ತಾಯಿಸಿದರು.

ಪಕ್ಷಾತೀತ ಪ್ರತಿಭಟನೆ ಯಶಸ್ವಿ: ಕಾರಹಳ್ಳಿ ಶ್ರೀನಿವಾಸ್‌ ಮಾತನಾಡಿ, ಈ ಹೋರಾಟದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಎಸ್‌ಪಿ ಮತ್ತು ವಿವಿಧ ಸಂಘಟನೆಯ ಹೋರಾಟಗಾರರು ಭಾಗಿಯಾಗುವುದರ ಮೂಲಕ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದ್ದಾರೆ. ಸರ್ಕಾರ ಈ ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಹಿಂಪಡೆಯದಿದ್ದರೆ, ಈ ಹೋರಾಟ ತೀವ್ರಗತಿಯಲ್ಲಿ ಮುನ್ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ಎಲ್‌.ಎನ್‌. ನಾರಾಯಣಸ್ವಾಮಿ, ಟಿ. ವೆಂಕಟರಮಣಯ್ಯ, ರಾಜ್ಯ ಸಿಪಿಎಂ ಕಾರ್ಯದರ್ಶಿ ಬೈರಾರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಚಂದ್ರತೇಜಸ್ವಿ, ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ಗೌಡ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಿ. ಮುನೇಗೌಡ, ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ. ಎ. ರವೀಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ವಿ. ಮಂಜುನಾಥ್‌, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ನಂದಿ ಗುಂದ ವೆಂಕಟೇಶ್‌,ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ತಿಮ್ಮರಾಯಪ್ಪ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಪಟಾಲಪ್ಪ, ತಾಲೂಕು ಸೊಸೈಟಿ ಅಧ್ಯಕ್ಷ ಎ. ದೇವರಾಜ್‌, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೊಣ್ಣಪ್ಪ, ಕಾಮೇನಹಳ್ಳಿ ರಮೇಶ್‌,ತಾಪಂ ಮಾಜಿ ಸದಸ್ಯ ಸಾದಹಳ್ಳಿ ಎಸ್‌.ಮಹೇಶ್‌, ಜಿಪಂ ಮಾಜಿ ಸದಸ್ಯ ಎಂ. ಬಸವರಾಜ್‌, ಎಂ.ವೀರಪ್ಪ, ವಿಎಸ್‌ಎಸ್‌ಎನ್‌ ಮಾಜಿ ಅಧ್ಯಕ್ಷ ರಾದ ವಿ.ಮುನಿರಾಜು, ರಾಮಣ್ಣ, ಕೋಡಗುರ್ಕಿ ಮಹೇಶ್‌,ಯರ್ತಿಗಾನಹಳ್ಳಿ ಶಿವಣ್ಣ, ರೈತ ಮುಖಂಡ ಮಾರೇಗೌಡ, ತಿಮ್ಮರಾಯಪ್ಪ, ನಂಜಪ್ಪ, ವೆಂಕಟ ರಮಣಪ್ಪ, ಮೋಹನ್‌, ರಮೇಶ್‌, ಭೈರೇಗೌಡ, ಚೇತನ್‌ಗೌಡ ಹಾಗೂ ಮತ್ತಿತರರು ಇದ್ದರು.

ಬರಡು ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಿ: ಎಚ್‌ಡಿಕೆ
ಕೈಗಾರಿಕೆಗಳ ಹೆಸರಿನಲ್ಲಿ ಕೃಷಿ ವಲಯವನ್ನು ವಶಕ್ಕೆ ಪಡೆಯುವ ರೈತರನ್ನು ಒಕ್ಕಲೆಬ್ಬಿಸಿ ಈಗಾಗಲೇ ವಿಮಾನ ನಿಲ್ದಾಣಕ್ಕೆ 12 ಸಾವಿರಕ್ಕೂ ಅಧಿಕ ಭೂಮಿ ಕೊಟ್ಟಿದ್ದರೂ, ಅದೇ ಪ್ರದೇಶದ ಹಳ್ಳಿಗಳಲ್ಲಿ 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ಜನವಿರೋಧಕ್ಕೆ ಕಾರಣವಾಗುತ್ತಿದೆ. ಸರ್ಕಾರದ ಕೈಗಾರಿಕಾ ಸಚಿವರು ರೈತರ ಬದುಕಿನ ಜೊತೆಯಲ್ಲಿ ಚೆಲ್ಲಾಟವಾಡುತ್ತಿರುವುದು ಖಂಡನೀಯವಾಗಿದೆ.ಸರ್ಕಾರಕ್ಕೆ ಹೇಳವುದೇನೆಂದರೆ ಬೆಂಗಳೂರು ಈಗಾಗಲೇ ದೊಡ್ಡಮಟ್ಟದಲ್ಲಿ ಜನಸಂದಣಿ ಇದೆ. ಬದಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ, ಇಲ್ಲಿ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರ್ಕಾರಗಳಿಂದ
ಸಾಧ್ಯವಾಗುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಪುನಃ ಬೆಂಗಳೂರು ಸುತ್ತಮುತ್ತ ಕೈಗಾರಿಕೆಗಳು ಬರಬೇಕೆಂಬ ಚಿಂತನೆಗಳೇನಿದೆ. ಅದನ್ನು ಬಿಟ್ಟು ಬರಡು ಭೂಮಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.