ಕೆಲಸದಾಕೆ, ಸೆಕ್ಯೂರಿಟಿ ಗಾರ್ಡ್ಗಳಿಂದಲೇ ದರೋಡೆ
Team Udayavani, Aug 27, 2022, 12:48 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ದರೋಡೆ ಹಾಗೂ ಕಳವು ಕೃತ್ಯಗಳಲ್ಲಿ ಮನೆಗೆಲಸ ಹಾಗೂ ಭದ್ರತೆಗಾಗಿ ನೇಮಕಗೊಂಡ ಸಿಬ್ಬಂದಿಯಿಂದಲೇ ನಡೆಯುತ್ತಿ ವೆ. ಮನೆಗೆಲಸ ಹಾಗೂ ಭದ್ರತೆಗಾಗಿ ನೇಮಕಗೊಂಡು ಮಾಲೀಕರ ವಿಶ್ವಾಸಗಳಿಸಿ ನಂತರ ಅಪರಾಧ ಕೃತ್ಯಗಳು ಎಸಗುತ್ತಿರುವುದು ವಿಚಾರಣೆಯಲ್ಲಿ ಪತ್ತೆಯಾಗುತ್ತಿದೆ.
ಶ್ರೀಮಂತರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿರುವ ಸೆಕ್ಯೂರಿಟಿಗಾರ್ಡ್ಗಳು ತಮ್ಮ ಸಹಚರರ ಜತೆ ಸೇರಿ ದರೋಡೆ, ಕಳ್ಳತನ ಕೃತ್ಯಕ್ಕೆ ಇಳಿಯತ್ತಿದ್ದಾರೆ. ಕೋಟ್ಯಂತರ ರೂ. ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಪೈಕಿ ಕೆಲವರು ಅದೇ ಮನೆಯಲ್ಲಿ ಸೆಕ್ಯೂರಿಟಿಗಾರ್ಡ್ಗಳಾಗಿದ್ದರೆ, ಇನ್ನು ಕೆಲವರು ಮನೆ ಕೆಲಸದವರು ಕೊಟ್ಟ ಮಾಹಿತಿ ಮೇರೆಗೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕೆಲ ಪ್ರಕರಣಗಳಲ್ಲಿ ಭದ್ರತಾ ಸಿಬ್ಬಂದಿಗಳು ತಮ್ಮ ಸಹಚರರ ನೆರವಿನೊಂದಿಗೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಕಳ್ಳತನ ನಡೆದ ಪ್ರದೇಶದ ಆಸು-ಪಾಸಿನಲ್ಲಿರುವ ಸೆಕ್ಯೂರಿಟಿಗಾರ್ಡ್ಗಳು ಕಳ್ಳರಿಗೆ ಬೀಗ ಹಾಕಿರುವ ಮನೆಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಈ ನಿಟ್ಟಿನಲ್ಲಿ ಸೆಕ್ಯೂರಿಟಿಗಾರ್ಡ್, ಮನೆಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಮಾಲೀಕರು ಅವರ ಹಿನ್ನೆಲೆಗಳನ್ನು ಪರಿಶೀಲಿಸಬೇಕು ಎಂದು ಪೊಲೀಸ್ ಅಧಿಕಾರಿ ತಿಳಿಸುತ್ತಾರೆ.
ಕೇಸ್ ನಂ.1: ಸೆಕ್ಯೂರಿಟಿ ಗಾರ್ಡ್ ಕೃತ್ಯ :
2 ತಿಂಗಳ ಹಿಂದೆ ಕೆಲಸ ಅರಸಿ ನೇಪಾಳದಿಂದ ನಗರಕ್ಕೆ ಬಂದಿದ್ದ ನೇಪಾಳದ ಪ್ರತಾಪ್ ಸಿಂಗ್ ಹಾಗೂ ಆತನ ಪತ್ನಿ ಸಂಗೀತಾ ಜೆಬಿನಗರದ ವಿನೋದ್ ಎಂಬುವವರ ಮನೆಯಲ್ಲಿ ಸೆಕ್ಯೂರಿಟಿಗಾರ್ಡ್ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲ ಸಮಯದ ಬಳಿಕ ತಾವು ಕೆಲಸಕ್ಕಿದ್ದ ಮಾಲೀಕನ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಜು.6 ರಂದು ಜೆಬಿನಗರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.
ಕೇಸ್ ನಂ.2 : ಕಲಸದಾಕೆಯ ಸುಲಿಗೆ:
ಬಸವೇಶ್ವರನಗರದ ನಿವಾಸಿ ವಿಘ್ನೇಶ್ವರಿ ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳ ಮೂಲದ ಅನು ಎಂಬಾಕೆ ತನ್ನ ಪತಿಯ ಜತೆ ಸೇರಿ ಫೆ.23ರಂದು ಮನೆ ಒಡತಿ ವಿಘ್ನೇಶ್ವರಿ ಕೈ-ಕಾಲು ಕಟ್ಟಿ, 1 ಕೋಟಿ ರೂ. ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು.
ಕೇಸ್ ನಂ.3: ಸಿಬ್ಬಂದಿ ದುಷ್ಕೃ ತ: ಎಚ್ಎಸ್ಆರ್ ಲೇಔಟ್ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಜಯಶ್ರೀ (83) ಮನೆಯ ಸಮೀಪದ ಮನೆಯಲ್ಲಿ ನೇಪಾಳ ಮೂಲದ ಖಡಕ್ ಸಿಂಗ್ ಸೆಕ್ಯೂರಿಟಿಗಾರ್ಡ್ ಆಗಿದ್ದ. ಜಯಶ್ರೀ ಒಂಟಿ ಯಾಗಿ ನೆಲೆಸಿರುವುದರ ಬಗ್ಗೆ ಮಾಹಿತಿ ಪಡೆದು ಕೊಂಡು ಆ.13ರಂದು ಐವರು ಸಹಚರರ ಜತೆ ಗೂಡಿ ವೃದ್ಧೆಯನ್ನು ಹತ್ಯೆಗೈದು 2.5 ಲಕ್ಷ ರೂ. ನಗದು, ಚಿನ್ನಾಭರಣ ದೋಚಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೇಸ್ ನಂ.4: ಸೆಕ್ಯೂರಿಟಿ ಕೃತ್ಯ : ಕೆ.ಜಿ.ಹಳ್ಳಿಯ ಫ್ಲ್ಯಾಟ್ವೊಂದರಲ್ಲಿ ಎಂಜಿನಿಯರ್ ದೀಪಕ್ ಕುಟುಂಬಸ್ಥರ ಜತೆ ವಾಸಿಸುತ್ತಿದ್ದರು. ಜ.6ರಂದು ತಿರುಪತಿಗೆ ಹೋದಾಗ ಅದೇ ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಗಾರ್ಡ್ ಇವರ ಮನೆಗೆ ಕನ್ನ ಹಾಕಿದ್ದ. ಸಿ.ಸಿ.ಕ್ಯಾಮೆರಾದಲ್ಲಿ ಕೃತ್ಯ ಪತ್ತೆಯಾಗಿದೆ.
ಮನೆ ಮಾಲೀಕರು ಸೂಕ್ತ ದಾಖಲೆ, ಹಿನ್ನೆಲೆ ಪರಿಶೀಲಿಸಿ ಸೆಕ್ಯೂರಿಟಿಗಾರ್ಡ್ಗಳನ್ನು ನೇಮಿಸಿದರೆ ಉತ್ತಮ. ಮನೆ ಕೆಲಸದವರು, ಸೆಕ್ಯೂರಿಟಿಗಾರ್ಡ್ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. – ಸುಬ್ರಮಣ್ಯೇಶ್ವರ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತ
– ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.