ಗಣೇಶ ಚತುರ್ಥಿ: ಗಣೇಶನಿಂದ ನಾವು ಕಲಿಯೋದೇನು ? ಹೇಗಿರಬೇಕು ಸಾಂಪ್ರದಾಯಿಕ ಆಚರಣೆ

ಗಣೇಶನನ್ನು ಗಣೇಶ ಚತುರ್ಥಿಯ 10 ದಿನಗಳವರೆಗೆ ಇಟ್ಟರೆ ಅತ್ಯಂತ ಶುಭ ಎಂಬ ನಂಬಿಕೆ ಇದೆ.

ದಿನೇಶ ಎಂ, Aug 28, 2022, 5:45 PM IST

CHAUTI GANESHA uv web exclusive thumb copy CHAUTI

ಮಹಾ ಗಣಪತಿಯ ರೂಪ ಕೇವಲ ಆಕಾರವಲ್ಲ ಅದು ಜೀವನ ಸಂದೇಶಗಳ ಸಮೂಹ ಶಕ್ತಿ. ಜಗತ್ತನ್ನು ಜನರು ನೋಡುವ ಬಗೆ ಅವರವರ ದೃಷ್ಟಿಕೋನಗಳನ್ನು ಆಧರಿಸಿರುತ್ತವೆ. ದೃಷ್ಟಿಕೋನಗಳು ವೈಯಕ್ತಿಕ ಜೀವನಾನುಭವಗಳು ಮತ್ತು ಸುತ್ತಲಿನ ವಾತಾವರಣಗಳ ಪ್ರಭಾವವನ್ನು ಒಳಗೊಂಡಿರುತ್ತವೆ. ನಾವು ಕೂಡ ಗಣಪತಿಯನ್ನು ನೋಡುವ ಬಗೆ ಕೇವಲ ಮೇಲ್ನೋಟದ ನೋಟ ಸಾಲದು, ಆಂತರ್ಯದ ಅನುಭವಗಳ ಮಂಥನ ಮಾಡಿ ಒಳದೃಷ್ಟಿಯಿಂದ ನೋಡಿ ಕಲಿಯುವುದು ಗಣಪತಿಯಿಂದ ಬಹಳಷ್ಟಿದೆ.

ಗಣಪತಿಯ ಸಣ್ಣ ಕಣ್ಣು ಸೂಕ್ಷ್ಮ ದೃಷ್ಟಿಯ ಸಂಕೇತ, ಅಗಲವಾದ ಕಿವಿಗಳು ಎಲ್ಲವನ್ನೂ ತಾಳ್ಮೆಯಿಂದ ಆಲಿಸುವ ಗುಣದ ಸಂಕೇತ, ಉದ್ದವಾದ ಸೊಂಡಿಲು– ಕೇವಲ ವಾಸನೆಗಳ ಆಘ್ರಾಣಕಲ್ಲಾ. ಎಲ್ಲಾ ಬಗೆಯ ಜ್ಞಾನಗಳ ಆಘ್ರಾಣಿನಿಸಿಕೊಳ್ಳುವ ಮತ್ತು ಸುತ್ತಲಿನ ಪರಿಸರದ ಸ್ಪಂದನೆಯನ್ನು ಅರಿಯುವ ಅಗತ್ಯತೆಯ ಸೂಚಕ. ಗಣೇಶನ ದೊಡ್ಡ ಹೊಟ್ಟೆಯದ್ದು ಕೇವಲ ಹಸಿವಲ್ಲ, ಅದು ಜ್ಞಾನದ ಹಸಿವಿನ ಸೂಚಕ. ಮೋದಕಾದಿ ತಿನಿಸುಗಳು ಸಿಹಿ – ಸಂತೋಷಗಳನ್ನು ದಯಪಾಲಿಸುವ ಮಂಗಳಕರ ಮಹಾಗಣಪತಿಯ ಸೂಚಕ.

ವಿನಾಯಕ ಚೌತಿ ಎಂದೂ ಕರೆಯಲ್ಪಡುವ ಈ ಹಬ್ಬವು ಭಾರತದಾದ್ಯಂತ ಆಚರಿಸುವ ಅತಿ ದೊಡ್ಡ ಹಬ್ಬವಾಗಿದೆ.  ಜಾತಿ – ಮತಗಳ ಬೇಧವಿಲ್ಲದೆ ಒಟ್ಟಾಗಿ ಭಾವೈಕ್ಯತೆಯ ಪ್ರತೀಕವಾದ ಹಬ್ಬವೆಂದರೆ ಅದು ಗಣೇಶ ಚತುರ್ಥಿ. ಗಣೇಶ ಹಬ್ಬವನ್ನು ಒಂದು ದಿನದಿಂದ 11 ದಿನಗಳವರೆಗೂ ಆಚರಿಸಲಾಗುತ್ತದೆ.  ಆಚರಣೆಯ ಬಳಿಕ ನಿಗದಿತ ದಿನಗಳಲ್ಲಿ ಮಾತ್ರ ಗಣೇಶನನ್ನು ವಿಸರ್ಜನೆ ಮಾಡಬೇಕು. ಅದರಲ್ಲೂ  ಗಣೇಶನನ್ನು ಗಣೇಶ ಚತುರ್ಥಿಯ 10 ದಿನಗಳವರೆಗೆ ಇಟ್ಟರೆ ಅತ್ಯಂತ ಶುಭ ಎಂಬ ನಂಬಿಕೆ ಇದೆ.   ಚತುರ್ಥಿಯಲ್ಲಿ 16 ಆಚರಣೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ  4 ಪ್ರಮುಖ ಆಚರಣೆಗಳು ಮುಖ್ಯವಾಗುತ್ತದೆ.

ಗಣೇಶ ಚತುರ್ಥಿಯ 4 ಪ್ರಮುಖ ಆಚರಣೆಗಳು ಹೀಗಿವೆ:

ಆವಾಹನೆ ಮತ್ತು ಪ್ರಾಣ ಪ್ರತಿಷ್ಠಾಪನೆ : -ಪ್ರಜ್ವಲನ’ ಮತ್ತು ‘ಸಂಕಲ್ಪ’ ಮಾಡಿದ ನಂತರ ಇದು ಮೊದಲ ಹೆಜ್ಜೆಯಾಗಿದೆ. ಮಂತ್ರ ಪಠಣದೊಂದಿಗೆ, ಗಣಪತಿಯನ್ನು ಸ್ಥಾಪಿಸಿದ ಮೂರ್ತಿಗೆ ಭಕ್ತಿ ಪೂರ್ವಕವಾಗಿ ಆಹ್ವಾನಿಸಲಾಗುತ್ತದೆ, ಇದು ‘ಮೂರ್ತಿ’ ಅಥವಾ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಆಚರಣೆಯಾಗಿದೆ.

ಷೋಡಶೋಪಚಾರ:  ಷೋಡಶೋಪಚಾರದ ಪೂಜೆಯು 16 ಬಗೆಯ ಪೂಜೆಯ ವಿಧಾನಗಳನ್ನು ಒಳಗೊಂಡಿರುತ್ತದೆ, ಈ 16 ಬಗೆಯ ಉಪಚಾರಗಳೆಂದರೆ… ಗಣೇಶನ ಪಾದಗಳನ್ನು ತೊಳೆದ ನಂತರ, ವಿಗ್ರಹವನ್ನು ಹಾಲು, ತುಪ್ಪ, ಜೇನುತುಪ್ಪ, ಮೊಸರು, ಸಕ್ಕರೆಯಿಂದ ಕೂಡಿದ ಪಂಚಾಮೃತ ಅಭಿಷೇಕ ನಂತರ ಪರಿಮಳಯುಕ್ತ ಎಣ್ಣೆ ಮತ್ತು ಗಂಗಾಜಲದಿಂದ ಅಭಿಷೇಕ. ನಂತರ ಹೊಸ ವಸ್ತ್ರ, ಹೂವುಗಳು, ಮುರಿಯದ ಅಕ್ಷತೆಯ ಅಕ್ಕಿ, ಹಾರ, ಸಿಂಧೂರ ಮತ್ತು ಚಂದನದ ಜೊತೆಗೆ ಗಣೇಶನನ್ನು ಅಲಂಕರಿಸಿ.  ಮೋದಕ, ವೀಳ್ಯದೆಲೆ, ತೆಂಗಿನಕಾಯಿ (ನೈವೇದ್ಯ)  ಧೂಪ, ದೀಪ, ಸ್ತೋತ್ರಗಳು, ಮಂತ್ರಗಳನ್ನು ಪಠಿಸುವ ಮೂಲಕ ಪೂಜಿಸಲಾಗುತ್ತದೆ.

ಉತ್ತರಪೂಜೆ : ಈ ಆಚರಣೆಯನ್ನು ವಿಸರ್ಜನಕ್ಕೆ ಮೊದಲು ನಡೆಸಲಾಗುತ್ತದೆ. ಅತ್ಯಂತ ಸಂತೋಷ ಮತ್ತು ಭಕ್ತಿಯಿಂದ, ಎಲ್ಲಾ ವಯೋಮಾನದ ಜನರು ಉತ್ಸವದಲ್ಲಿ ಭಾಗವಹಿಸುತ್ತಾರೆ.  ಜನರು ಹಾಡುತ್ತಾ, ನೃತ್ಯ ಮಾಡುತ್ತಾ… ಮಂತ್ರಗಳ ಪಠಣ, ಆರತಿ, ಹೂವುಗಳ ಜೊತೆಗೆ ವಿದಾಯ ಹೇಳುವ ವಿಶೇಷ ಆಚರಣೆ.

ಗಣಪತಿ ವಿಸರ್ಜನೆ : ಮುಂದಿನ ವರ್ಷ ಜ್ಞಾನ ರೂಪಿಯಾಗಿ ಭಗವಂತ ಹಿಂತಿರುಗಲಿ ಎಂದು ಹಾರೈಸಿ ಗಣೇಶನ ಮೂರ್ತಿಯನ್ನು ಜಲಮೂಲಗಳಲ್ಲಿ ವಿಸರ್ಜಿಸಲಾಗುತ್ತದೆ.

 “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗುಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ।। ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆಜಸವು ಜನಜೀವನಕೆ”  – ಮಂಕುತಿಮ್ಮ

ಡಿ.ವಿ.ಜಿಯ ಈ ಕಗ್ಗದಂತೆ, ಹಿರಿಯರ ಪ್ರತಿ ಆಚರಣೆಗಳ ಹಿಂದೆ ಜೀವನ ಸಾರ ಸಾರುವ ಮತ್ತು ವೈಜ್ಞಾನಿಕ, ತಾತ್ವಿಕ ಸತ್ಯಗಳನ್ನೊಳಗೊಂಡ ದೈವಿಕ ಜ್ಞಾನದ ಸ್ಪರ್ಶವಿರುತ್ತದೆ. ಹೊಸ ತಲೆಮಾರು ಅದನ್ನರಿತು ಮೂಲ ಉದ್ದೇಶ, ಆಚರಣೆಗಳಿಗೆ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಆಚರಣೆಗಳನ್ನು ಆಡಂಬರದ ಡಂಬಾಚಾರಿಕೆ ಇಲ್ಲದೆ ಆಚರಿಸುವ ಕಡೆ ಗಮನಕೊಡಬೇಕಿದೆ, ಇದನ್ನು ಅರಿಯೋಣ, ಅರಿತು ಬಾಳೋಣ, ಅರಿವೇ ಗುರು, ಗುರುವೇ ದೇವರು.

  • ದಿನೇಶ ಎಂ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿನಾಯಕ ಗಣಗಳ ನಾಯಕ…ಗಣಪತಿಯ ಮದುವೆ ಬಗ್ಗೆ ಪುರಾಣ ಕಥೆಯಲ್ಲೇನಿದೆ…

ವಿನಾಯಕ ಗಣಗಳ ನಾಯಕ…ಗಣಪತಿಯ ಮದುವೆ ಬಗ್ಗೆ ಪುರಾಣ ಕಥೆಯಲ್ಲೇನಿದೆ…

web exclusive news ojijofkbh

ಭಾಂದವ್ಯ ಬೆಸೆಯುವ ರಾಷ್ಟ್ರೀಯ ಹಬ್ಬ ಗಣೇಶ ಚತುರ್ಥಿ

ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

thumb gauri

ಗೌರಿಯ ಪ್ರಥಮ ಪೂಜೆ…ತವರಲ್ಲಿ ಮಾಡಿದ ಮೊದಲ ಹಬ್ಬ

ಗಣೇಶೋತ್ಸವ ಸ್ಪೆಷಲ್ ; ವಿಶ್ವನಾಯಕ ವಿನಾಯಕ

ಗಣೇಶೋತ್ಸವ ಸ್ಪೆಷಲ್ ; ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳಲ್ಲಿ ಬೆಳಗುವ ಬೆಳಕ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.