ಪರಿಸರ ಸ್ನೇಹಿ ಗಣಪತಿ ಮೂರ್ತಿಗೂ ಬೇಡಿಕೆ ಕುಸಿತ
Team Udayavani, Aug 27, 2022, 2:29 PM IST
ಅರಕಲಗೂಡು: ಗಣಪತಿ ತಯಾರಿಕೆಯನ್ನೆ ವೃತ್ತಿಯಾಗಿಸಿಕೊಂಡಿರುವ ತಾಲೂಕಿನ ಕೇರಳಾಪುರದ ಕಲಾವಿದ ವಿಶ್ವನಾಥ್ ಅವರ ಕುಟುಂಬ ಪರಿಸರ ಸ್ನೇಹಿ ಗಣಪತಿ ತಯಾರಿಕೆಗೆ ಹೆಸರಾಗಿದೆ. ಮೂರು ತಲೆಮಾರುಗಳಿಂದ ಈ ಕುಟುಂಬದ ಸದಸ್ಯರು ಗಣಪತಿ ತಯಾರಿಕೆಯನ್ನು ತನ್ನ ಕುಲ ಕಸುಬಾಗಿಸಿಕೊಂಡಿದ್ದು ಹಾಸನ, ಮೈಸೂರು, ಕೊಡಗು ಜಿಲ್ಲೆಗಳಿಗೆ ಮಾರಾಟ ಮಾಡಿ ಇದರಲ್ಲಿ ಬರುವ ಆದಾಯವನ್ನೆ ತಮ್ಮ ಜೀವನೋಪಾಯಕ್ಕಾಗಿ ನಂಬಿಕೊಂಡಿದ್ದಾರೆ.
ಗೌರಿ ಗಣೇಶ ಹಬ್ಬದ ಎರಡು ತಿಂಗಳ ಮುಂಚಿನಿಂದ ಗಣಪತಿ ತಯಾರಿಕೆಗೆ ಈ ಕುಟುಂಬದ ಸದಸ್ಯರು ಸಿದ್ಧತೆ ನಡೆಸುತ್ತಾರೆ. ಮೊದಲೆಲ್ಲಾ ಸಮೀಪದ ಕೆರೆಗಳಿಂದ ತಾವೆ ಉತ್ತಮ ಗುಣಮಟ್ಟದ ಮಣ್ಣನ್ನು ಆಯ್ಕೆ ಮಾಡಿ ತರುತ್ತಿದ್ದರು. ಈಗ ದಿಢೀರ್ ಸುರಿಯುವ ಮಳೆಗೆ ಕೆರೆಗಳು ತುಂಬಿರುವ ಕಾರಣ ಮಣ್ಣು ತರುವುದು ಹರಸಹಾಸವಾಗಿದೆ. ಸಾವಿರಾರು ರೂ.ಹಣ ತೆತ್ತು ದೂರದ ಕಡೆಯಿಂದ ಟ್ರಾಕ್ಟರ್ ನಲ್ಲಿ ಮಣ್ಣು ತರಿಸಿ ಗಣೇಶನ ವಿಗ್ರಹಗಳನ್ನು ಮಾಡಬೇಕಿರುವ ಕಾರಣ ವೆಚ್ಚ ಹೆಚ್ಚುತ್ತಿದೆ.
ಈ ಸುತ್ತಮುತ್ತಲ ಊರುಗಳಿಗೆ ಹಿಂದೆಲ್ಲ ನಾವೊಬ್ಬರೆ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದೆವು. ಇದರಿಂದ ನಾಲ್ಕು ಕಾಸು ಸಂಪಾದನೆಯಾಗಿ ಜೀವನೋಪಾಯ ನಡೆಯುತ್ತಿತ್ತು. ಈಗ ಅಲ್ಲಲ್ಲಿ ವಿಗ್ರಹ ತಯಾರು ಮಾಡುವವರು ಇರುವ ಕಾರಣ ಮಾರಾಟ ಕಡಿಮೆಯಾಗಿದೆ. ಹಿಂದೆಲ್ಲ ಗಲ್ಲಿಗಲ್ಲಿಗಳಲ್ಲಿ ಗಣಪತಿ ಕೂರಿಸಿ ಪೂಜೆ ನಡೆಸುತ್ತಿದ್ದರು. ಈಗ ಇದಕ್ಕೆ ಕಾನೂನು ಅಡ್ಡಿಯಾಗಿದೆ. ಅಲ್ಲದೆ ಇಂದಿನ ಯುವಕರಲ್ಲಿ ಅಂತಹ ಉತ್ಸಾಹ ಮರೆಯಾಗುತ್ತಿದೆ. ಹೀಗಾಗಿ ವಿಗ್ರಹ ಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. – ವಿಶ್ವನಾಥ್, ಕಲಾವಿದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.