ಬಿಡಿಎ ಬದಲಿ ನಿವೇಶನ ಪಡೆಯಲು ಯಾವುದೇ ಪ್ರಭಾವ ಬಳಸಿಲ್ಲ: ಆರಗ ಜ್ಞಾನೇಂದ್ರ
ಬಿಡಿಎ ನಿಂದ ನ್ಯಾಯ ಪಡೆಯಲು, ನ್ಯಾಯಾಲಯದ ಮೊರೆ ಹೋಗಲು ಸಹ ನಿರ್ಧರಿಸಿದ್ದೇನೆ
Team Udayavani, Aug 27, 2022, 5:23 PM IST
ಬೆಂಗಳೂರು: ಕಳೆದ ಹದಿನೇಳು ವರ್ಷಗಳ ಹಿಂದೆ ಬಿಡಿಎ ನಿಂದ ಮಂಜೂರಾದ ನಿವೇಶನವನ್ನು, ವಿವಿಧ ಕಾರಣಗಳನ್ನು ನೀಡಿ ಮಂಜೂರಾತಿ ಮಾಡಿದ ಬಿಡಿಎಯೇ ವಾಪಸ್ ಪಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟೀಕರಣ ನೀಡಿದ್ದಾರೆ.
ಮಂಜೂರಾತಿ ಪಡೆದ ನಿವೇಶನ ಕ್ಕಾಗಿ ಕಳೆದ ಹದಿನೇಳು ವರ್ಷಗಳಲ್ಲಿ ಮೂರು ಬಾರಿ ನೋಂದಣಿ ಸಂಬಂಧ ಶುಲ್ಕ ಪಾವತಿ ಮಾಡಿದ್ದರೂ, ಬಿಡಿಎ ನಿವೇಶನ ಪಡೆದು ಮನೆ ಕಟ್ಟಲು ಸಾಧ್ಯವಾಗಿಲ್ಲ.ಈ ಹಿಂದೆ, ಶಾಸಕರೂ ಹಾಗೂ ಸಚಿವರುಗಳಿಗೆ, ಬಿಡಿಎ ನಿವೇಶನಗಳನ್ನು, ಹಂಚಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈ ಕೋರ್ಟ್ ನಲ್ಲಿ ಸಲ್ಲಿಸಲಾಗಿತ್ತು.ಅರ್ಜಿಯ ಸಂಬಂಧ, ಮಂಜೂರಾತಿ ಪಡೆದ ನಿವೇಶನದ ಕುರಿತು, ಪರಿಶೀಲಿಸಲು, ರಾಜ್ಯ ಹೈ ಕೋರ್ಟ್ ನೇಮಿಸಿದ್ದ ನ್ಯಾಯಾಧೀಶ ಫಾರೂಖ್ ಸಮಿತಿ ಸಹ ಸ್ತಿರೀಕರಿಸಿದ್ದು, ಬಿಡಿಎ ನಿಯಮಾವಳಿಗಳ ಅನುಸಾರವಾಗಿಯೇ, ನನಗೆ ನಿವೇಶನ ಮಂಜೂರಾತಿ ಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.
ಬಿಡಿಎ ನಿಂದ ನಿವೇಶನ ಮಂಜೂರಾತಿ ಗಾಗಿ ಯಾವುದೇ ಪ್ರಭಾವ ಅಥವಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಜಿ ಕೆಟಗರಿ ಅಡಿಯಲ್ಲಿ, ಈ ಹಿಂದೆ ಇತರ ಶಾಸಕರೂ ಹಾಗೂ ಸಚಿವರು ಮಂಜೂರಾತಿ ಪಡೆದ ರೀತಿಯಲ್ಲಿಯೇ ನನಗೂ ಬಿಡಿಎ ನಿವೇಶನ ಮಂಜೂರಾಗಿರುತ್ತದೆ.ಪ್ರಸ್ತುತ ಬದಲಿ ನಿವೇಶನ ಮಂಜೂರು ಮಾಡಲು, ಬಿಡಿಎ, ನಿಗದಿ ಪಡಿಸಿದ ಅಧಿಕ ಶುಲ್ಕವನ್ನೂ ಸಹ ಪಾವತಿಸಿದ್ದೇನೆ. ಈ ಹಿಂದೆ ನೂರಾರು ಮಂದಿ, ಬಿಡಿಎ ನಿಂದ ನಿವೇಶನ ಮಂಜೂರಾತಿ ಪಡೆದು, ನೋಂದಣಿ ಶುಲ್ಕ ಕಟ್ಟಿದ್ದರೂ, ನಿವೇಶನವನ್ನು ಪಡೆಯುವುದರಿಂದ ವಂಚಿತರಾಗಿದ್ದರು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಅವರಿಗೆ, ಬಿಡಿಎ ಪರ್ಯಾಯ ನಿವೇಶನ ನೀಡಿ, ಪರಿಹಾರ ಒದಗಿಸಿದೆ.ನಾನು, ಮೂರು ಬಾರಿ ಮಂಜೂರಾದ ನಿವೇಶನಕ್ಕೆ ನೋಂದಣಿ ಮಾಡಿದ್ದರೂ, ನಿವೇಶನದ ಹಕ್ಕು ಪಡೆಯಲು ಇದುವರೆಗೂ ಸಾಧ್ಯವಾಗಿಲ್ಲ. ಬಿಡಿಎ ನಿಂದ ನ್ಯಾಯ ಪಡೆಯಲು, ನ್ಯಾಯಾಲಯದ ಮೊರೆ ಹೋಗಲು ಸಹ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.