ಗದಗ: ವಿಜೃಂಭಣೆಯ ಕಾಶಿ ವಿಶ್ವನಾಥ ರಥೋತ್ಸವ
ಜಾತ್ರಾ ಸಮಿತಿು ಅಧ್ಯಕ್ಷ ಶೇಖಪ್ಪ ಮುಳವಾಡ ಅಧ್ಯಕ್ಷತೆ ವಹಿಸಿದ್ದರು
Team Udayavani, Aug 27, 2022, 6:08 PM IST
ಗದಗ: ನಾವಿಂದು ಧರ್ಮ, ಸಂಸ್ಕಾರ, ಸಾಮರಸ್ಯವನ್ನು ಬೆಳೆಸಿಕೊಳ್ಳಬೇಕು. ಜಾತ್ರೆ, ಉತ್ಸವಗಳು ಜನಸಮುದಾಯದಲ್ಲಿ ಭ್ರಾತೃತ್ವವನ್ನು ಮೂಡಿಸುತ್ತವೆ. ಇಂತಹ ಸದ್ಭಾವನೆ ಬೆಳೆಸುವಲ್ಲಿ ಕಾಶಿ ವಿಶ್ವನಾಥ ನಗರ ಮುಂಚೂಣಿಯಲ್ಲಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಇಲ್ಲಿನ ಕಾಶಿ ವಿಶ್ವನಾಥ ನಗರ ಬುಳ್ಳಾ ಪ್ಲಾಟ್‌ನ ಕಾಶಿ ವಿಶ್ವನಾಥ ರಥೋತ್ಸವ, ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ, ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಮುಖಂಡ ವಿಜಯಕುಮಾರ ಗಡ್ಡಿ ಮಾತನಾಡಿ, ಜಾತ್ರೆಗಳು ಜನರ ಮನಸ್ಸನ್ನು ಕಟ್ಟುವ ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿ ಕಾಶಿ ವಿಶ್ವನಾಥನ ಜಾತ್ರೆ ವೈವಿಧ್ಯಮಯವಾಗಿ ಆಚರಿಸುತ್ತಿರುವುದು ಅಭಿನಂದನೀಯ ಎಂದರು.
ಸಾಮೂಹಿಕ ವಿವಾಹ ಕಾರ್ಯಕ್ರಮ ದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಕಲ್ಲಯ್ಯಜ್ಜನವರು, ಅಟ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಆಶೀರ್ವದಿಸಿದರು. ನಂತರ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಸಂಜೆ ರಥೋತ್ಸವ ನೆರವೇರಿತು.
ಜಾತ್ರಾ ಸಮಿತಿು ಅಧ್ಯಕ್ಷ ಶೇಖಪ್ಪ ಮುಳವಾಡ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ಲಲಿತಾ ಅಸೂಟಿ, ಮುಖಂಡರಾದ ದುಂಡಪ್ಪ ಆಸಂಗಿ, ಕಳಕಪ್ಪ ಬನ್ನಿಗೋಳ, ದಾವಲಸಾಬ್ ಕುಮನೂರ, ಶಾಂತಪ್ಪ ಮುಳವಾಡ, ದೇವಪ್ಪ ಮಳಗಿ, ರಮೇಶ ಅಣ್ಣಿಗೇರಿ, ಬಸವಂತಪ್ಪ ಕಡಬಲಕಟ್ಟಿ, ಚನ್ನವೀರ ಮಳಗಿ, ಮಹಾಲಿಂಗಪ್ಪ ಬರಬರಿ ಸೇರಿದಂತೆ ಅನೇಕರು ಇದ್ದರು. ಬಿ.ಬಿ. ಅಸೂಟಿ ಸ್ವಾಗತಿಸಿದರು. ಶಾಂತಪ್ಪ ಅಕ್ಕಿ ನಿರೂಪಿಸಿದರು. ಅಶೋಕ ಗಡಾದ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.