ಸರಕಾರಗಳ ಪತನಕ್ಕೆ 6,300 ಕೋ. ರೂ.: ಅರವಿಂದ ಕೇಜ್ರಿವಾಲ್
Team Udayavani, Aug 28, 2022, 7:20 AM IST
ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಬಿಜೆಪಿ ವಿರುದ್ಧದ ವಾಗ್ಧಾಳಿ ಮುಂದುವರಿಸಿದ್ದಾರೆ. ಶನಿವಾರ ಅಸೆಂಬ್ಲಿ ಯಲ್ಲಿ ಮಾತನಾಡಿ, “ದೇಶಾದ್ಯಂತ ಬೇರೆ ಬೇರೆ ಪಕ್ಷಗಳ ಸರಕಾರಗಳನ್ನು ಉರುಳಿ ಸಲು ಬಿಜೆಪಿ 6,300 ಕೋಟಿ ರೂ. ವೆಚ್ಚ ಮಾಡಿದೆ. ಇಷ್ಟು ಹಣ ವೆಚ್ಚ ಮಾಡದೇ ಇರುತ್ತಿದ್ದರೆ, ಆಹಾರ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಬೇಕಾದ ಪರಿಸ್ಥಿತಿ ಉದ್ಭವವೇ ಆಗುತ್ತಿರಲಿಲ್ಲ’ ಎಂದಿದ್ದಾರೆ.
ಮಜ್ಜಿಗೆ, ಮೊಸರು, ಜೇನುತುಪ್ಪ, ಗೋದಿ, ಅಕ್ಕಿ ಮೇಲಿನ ಜಿಎಸ್ಟಿಯಿಂದ ಸರಕಾರಕ್ಕೆ ವಾರ್ಷಿಕ 7,500 ಕೋಟಿ ರೂ. ಆದಾಯವಿದೆ ಎಂದಿದ್ದಾರೆ ಕೇಜ್ರಿವಾಲ್. ಇದೇ ವೇಳೆ, ದಿಲ್ಲಿಯ ಬಿಜೆಪಿ ಶಾಸಕರು ಅಣಕು ವಿಧಾನಸಭೆ ಅಧಿವೇಶನ ನಡೆಸಿ ಆಪ್ ವಿರುದ್ಧ ವಾಗ್ಧಾಳಿ ನಡೆಸಿ ದ್ದಾರೆ. ಮದ್ಯ ಹಗರಣ ಸಂಬಂಧ ಡಿಸಿಎಂ ಸಿಸೋಡಿಯಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಮತ್ತೊಂದು ಸಂಘರ್ಷ?: ಈ ಎಲ್ಲ ಬೆಳವಣಿಗೆ ನಡುವೆಯೇ, ಕೇಜ್ರಿವಾಲ್ ಬದಲಿಗೆ ಅವರ ಸಿಬಂದಿ ಸಹಿ ಹಾಕಿದ್ದ ದಿಲ್ಲಿ ಸರಕಾರದ 47 ಕಡತಗಳನ್ನು ಲೆಫ್ಟಿನೆಂಟ್ ಗವರ್ನರ್ ವಾಪಸ್ ಕಳುಹಿಸಿದ್ದಾರೆ. ಇವುಗಳಲ್ಲಿ ಶಿಕ್ಷಣ, ವಕ್ಫ್ ಮತ್ತಿತರ ಇಲಾಖೆಗಳ ಕಡತಗಳೂ ಸೇರಿವೆ. ಇದು ಕೇಜ್ರಿವಾಲ್ ಸರಕಾರ ಮತ್ತು ಎಲ್ಜಿ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆಯಿದೆ. ನಿಮ್ಮ ಸಹಿ ಇಲ್ಲದಿರುವ ಕಡತಗಳನ್ನು ರವಾನಿಸಲಾಗುತ್ತಿದೆ ಎಂದು ಎಲ್ಜಿ ಕಚೇರಿಯು ಕೇಜ್ರಿವಾಲ್ಗೆ ಪತ್ರ ಬರೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.