ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ನ್ಯಾ|ಶಾಮಪ್ರಸಾದ
Team Udayavani, Aug 29, 2022, 12:56 PM IST
ಸೇಡಂ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯದ ಕಟ್ಟಡದ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಹಾಗೂ ತ್ವರಿತವಾಗಿ ಪೂರ್ಣಗೊಳಿಸುವಂತೆ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ.ಶಾಮಪ್ರಸಾದ ಹೇಳಿದರು.
ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯದ ಕಟ್ಟಡದ ಮೇಲಾºಗದಲ್ಲಿ ನಿರ್ಮಾಣಗೊಳ್ಳುತ್ತಿರುವ 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಮೊದಲ ಮಹಡಿ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ವಕೀಲರು ನಿರಂತರ ಅಧ್ಯಯನಶೀಲರಾಗಬೇಕು. ಕಕ್ಷಿದಾರರ ಪರವಾಗಿ ಆಳವಾದ ಅಧ್ಯಯನ ನಡೆಸಿ ವಾದ ಮಂಡಿಸುತಿದ್ದಾರೆ ಎನ್ನುವ ಭಾವನೆ ನ್ಯಾಯಾಧೀಶರಿಗೆ ಮೂಡಬೇಕು. ಈ ರೀತಿಯ ಅಧ್ಯಯನವನ್ನು ವಕೀಲರು ಮೈಗೂಡಿಸಿಕೊಳ್ಳಬೇಕು. ಈ ಹಿಂದೆ ನ್ಯಾಯಾಲಕ್ಕೆ ಹೋಗುವ ವಕೀಲರನ್ನು ಅತ್ಯಂತ ಗೌರವದಿಂದ ಕಾಣುತಿದ್ದರು. ಇತ್ತೀಚಿನ ವಕೀಲರಲ್ಲಿ ಅಧ್ಯಯನದ ಕೊರತೆ ಕಂಡು ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಅಶೋಕ ಕಿಣಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು. ಅಲ್ಲದೆ ಈ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಭಾಗವಹಿಸಬೇಕು. ಪರಿಕ್ಷಾರ್ಥಿಗಳ ಅನುಕೂಲಕ್ಕಾಗಿ ತರಬೇತಿ ಕೇಂದ್ರಗಳನ್ನು ತೆರೆಯಬೇಕು ಎಂದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಬಿ.ಪಾಟೀಲ್, 4ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಕರಣ ಗುಜ್ಜರ, ಸಹಾಯಕ ಆಯುಕ್ತ ಎಂ. ಕಾರ್ತಿಕ, ವಕೀಲರ ಸಂಘದ ಅಧ್ಯಕ್ಷ ಸತೀಶ ಪಾಟೀಲ ತರನಳ್ಳಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಆಡಕಿ ವೇದಿಕೆಯಲ್ಲಿದ್ದರು. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ಜಗನ್ನಾಥ ಹಲಿಂಗೆ, ಇಇ ಕೃಷ್ಣ ಅಗ್ನಿಹೋತ್ರಿ, ವಕೀಲರಾದ ಎಸ್.ಕೆ.ದೇಶಪಾಂಡೆ, ಸಾಯಿರೆಡ್ಡಿ, ಬಸವರಾಜ ತಡಕಲ್, ಜಗನ್ನಾಥ ತರನಳ್ಳಿ, ಮಲ್ಲಣ್ಣಗೌಡ ಬೆನಕನಹಳ್ಳಿ, ಮಹೇಂದ್ರರೆಡ್ಡಿ, ಅನಂತಯ್ಯ ಮುಸ್ತಾಜರ, ಭೀಮರಾವ ದಂಡೋತಿ, ಅಶೋಕ ಬಂದಗಿ, ಸಂಗಮೇಶ ಮರಗೋಳ, ಶಿವಾನಂದಸ್ವಾಮಿ, ಎಸ್.ಎಸ್. ಅಪ್ಪಾಜಿ, ಶಿವಲೀಲಾ ಅಪ್ಪಾಜಿ, ಮಹಾನಂದ, ಮಹಾದೇವಿ ಅವಂಟಿ, ಚಂದ್ರಕಲಾ ಇಂಜಳ್ಳಿಕರ್, ರಾಘವೇಂದ್ರ ಮುಸ್ತಾಜರ, ರಾಜೇಂದ್ರ ಮುನ್ನೂರ, ವಿಜಯಕಮಾರ ಮಿಸ್ಕಿನ್, ಚಾಂದಪಾಶ ಬುರಗಪಲ್ಲಿ, ನಾಗೇಶ ಮಿಟ್ಟಿ, ಶಾಂತಯ್ಯಸ್ವಾಮಿ ಬಟಗೇರಾ, ಹಣಮಂತ ರೆಡ್ಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.