ಚೌತಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಓವೈಸಿ ಕಿಡಿ
Team Udayavani, Aug 29, 2022, 5:08 PM IST
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದೆ. ಇದರ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ನಿರ್ಧಾರವನ್ನು ಖಂಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಕರ್ನಾಟಕ ಸರ್ಕಾರದ ಈ ಆದೇಶವು ಭಾರತೀಯ ಸಂವಿಧಾನದ ಉಲ್ಲಂಘನೆಯಾಗಿದೆ. ಯಾರು ಏನು ಧರಿಸುತ್ತಾರೆ ಮತ್ತು ತಿನ್ನುತ್ತಾರೆ ಎಂಬುದು ಅವರ ಸ್ವಂತ ಆಯ್ಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿದೆ. ಕರ್ನಾಟಕದ ಜನಸಂಖ್ಯೆಯ 80% ಜನರು ಮಾಂಸ ತಿನ್ನುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಪಾಕ್ ಎದುರು ಗೆಲುವಿನ ಬಳಿಕ ಜಯ್ ಶಾ ರಾಷ್ಟ್ರ ಧ್ವಜ ನಿರಾಕರಿಸಿದ್ದೇಕೆ?
ಒಂದೆಡೆ ದೊಡ್ಡ ರೆಸ್ಟೋರೆಂಟ್‌ಗಳು ಮಾಂಸಾಹಾರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಆದರೆ ಪ್ರಾಮಾಣಿಕ ಜೀವನವನ್ನು ನಡೆಸಲು ಪ್ರಯತ್ನಿಸುವ ಸಣ್ಣ ಪುಟ್ಟ ವ್ಯಾಪಾರಿಗಳು ತೊಂದರೆಗೊಳಗಾಗುತ್ತಾರೆ, ಇದು ಅತ್ಯಂತ ತಪ್ಪು ನಿರ್ಧಾರವಾಗಿದೆ ಎಂದು ಒವೈಸಿ ಟೀಕಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.