ಆ್ಯತ್ಲೀಟ್‌ಗಳಿಗೆ ಏಕಲವ್ಯ,ಕ್ರೀಡಾರತ್ನ ಪ್ರದಾನ: ಆಳ್ವಾಸ್‌ನ ಮೂವರಿಗೆ ಕ್ರೀಡಾರತ್ನ ಪ್ರಶಸ್ತಿ
Team Udayavani, Aug 29, 2022, 11:31 PM IST
ಬೆಂಗಳೂರು: ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಡೆಯಿತು. ಈ ವೇಳೆ ರಾಜ್ಯ ಸರಕಾರದಿಂದ ಕ್ರೀಡಾ ಸಾಧಕರಿಗೆ ಏಕಲವ್ಯ, ಕ್ರೀಡಾರತ್ನ, ಜೀವಮಾನ ಸಾಧನೆ ಪ್ರಶಸ್ತಿಗಳನ್ನು ವಿವಿಧ ಕ್ರೀಡಾಪಟುಗಳಿಗೆ ನೀಡಲಾಯಿತು. ಜತೆಗೆ ಕ್ರೀಡಾ ಬೆಳವಣಿಗೆಗೆ ಅತ್ಯುತ್ತಮ ಕೊಡುಗೆ ನೀಡಿದ ಸಂಸ್ಥೆಗಳಿಗೂ ಪ್ರಶಸ್ತಿ ನೀಡಲಾಯಿತು.
ಈ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಕ್ರೀಡಾ ಕ್ಷೇತ್ರಕ್ಕೆ ಸರಕಾರ ಹಿಂದೆಂದಿಗಿಂತ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ ನೀಡಲಾಗಿದೆ. 31 ಕಾರ್ಮಿಕ ಮಕ್ಕಳಿಗೆ ಉಚಿತವಾಗಿ ಪೈಲಟ್ ತರಬೇತಿ ಕೂಡ ನೀಡಲಾಗುತ್ತಿದೆ. ಶೀಘ್ರದಲ್ಲಿ ಕ್ರೀಡಾ ನೀತಿ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಕೆಒಎ ಅಧ್ಯಕ್ಷ ಡಾ| ಕೆ.ಗೋವಿಂದರಾಜು, ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆಯುಕ್ತ ಡಾ| ಎಚ್.ಎನ್. ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
2021-22ನೇ ಸಾಲಿನ ಕ್ರೀಡಾಪೋಷಕ ಪ್ರಶಸ್ತಿ
ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಟ್ರಸ್ಟ್ , ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., ಆರ್.ವಿ.ತಾಂತ್ರಿಕ ಮಹಾವಿದ್ಯಾಲಯ, ಬಸವನಗುಡಿ ಅಕ್ವಾಟಿಕ್ ಸೆಂಟರ್, ದ್ರಾವಿಡ್ ಪಡುಕೋಣೆ ಅಕಾಡೆಮಿ, ಹೂಡಿ ಸ್ಪೋರ್ಟ್ಸ್ ಕ್ಲಬ್, ಎಮಿನೆಂಟ್ ಶೂಟಿಂಗ್ ಹಬ್, ಧಾರವಾಡದ ಬಾಲ ಮಾರುತಿ ಸಂಸ್ಥೆ, ದಕ್ಷಿಣ ಕನ್ನಡದ ಬಾಲಾಂಜನೇಯ ಜಿಮ್ನಾಶಿಯಂ, ಮಂಡ್ಯದ ಪೀಪಲ್ ಎಜುಕೇಶನ್ ಟ್ರಸ್ಟ್.
ವಿವಿಧ ಕ್ರೀಡಾ ಪ್ರಶಸ್ತಿಗಳು+ನಗದು
ಇಬ್ಬರು ವಿಕಲಚೇತನ ಕ್ರೀಡಾಪಟುಗಳ ಸಹಿತ 44 ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಯಿತು. ಇದರಲ್ಲಿ 15 ಮಂದಿಗೆ ಏಕಲವ್ಯ (ತಲಾ 2 ಲಕ್ಷ ರೂ.), 14 ಮಂದಿಗೆ ಕ್ರೀಡಾರತ್ನ (ತಲಾ 1 ಲಕ್ಷ ರೂ.), 5 ಮಂದಿಗೆ ಜೀವಮಾನದ ಕ್ರೀಡಾಸಾಧನೆ (ತಲಾ 1.5 ಲಕ್ಷ ರೂ.), 10 ಸಂಸ್ಥೆಗಳಿಗೆ ಶ್ರೇಷ್ಠ ಕ್ರೀಡಾಪೋಷಕ ಪ್ರಶಸ್ತಿ ನೀಡಲಾಯಿತು (ತಲಾ
5 ಲಕ್ಷ ರೂ.).
1,000 ಮಂದಿಗೆ ತಲಾ 1 ಲಕ್ಷ ರೂ. ಕ್ರೀಡಾ ಪ್ರತಿಭಾ ಪುರಸ್ಕಾರ!
ಸಹಸ್ರ ಕ್ರೀಡಾ ಪ್ರತಿಭಾ ಪುರಸ್ಕಾರವನ್ನು ರಾಜ್ಯ ಸರಕಾರ ಮೂರು ವರ್ಷದ ಹಿಂದೆ ಜಾರಿ ಮಾಡಿತ್ತು. ಇದು ಒಂದು ಬಾರಿಯ ಯೋಜನೆಯಾಗಿ ಘೋಷಣೆಯಾಗಿರುವ ನಗದು ಬಹುಮಾನ. ಕಳೆದ ವರ್ಷ 250 ಮಂದಿಗೆ ಈ ಪುರಸ್ಕಾರ ಲಭಿಸಿತ್ತು. ಈ ವರ್ಷ 750 ಮಂದಿಗೆ ಪುರಸ್ಕಾರ ನೀಡಲಾಗಿದೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಐವರನ್ನು ಪುರಸ್ಕರಿಸಲಾಯಿತು. ಈ ಯೋಜನೆಯಡಿ ಆಯ್ಕೆಯಾದ ಪ್ರತಿಯೊಬ್ಬರಿಗೂ ತಲಾ 1 ಲಕ್ಷ ರೂ. ನೀಡಲಾಗಿದೆ.
2020ನೇ ಸಾಲಿನ ಪ್ರಶಸ್ತಿ ಪುರಸ್ಕೃತರು
ಏಕಲವ್ಯ ಪ್ರಶಸ್ತಿ: ಕೆ.ಎಸ್. ಜೀವನ್, ಕೆ. ಅಶ್ವಿನಿ ಭಟ್, ಲೋಪಾಮುದ್ರಾ ತಿಮ್ಮಯ್ಯ, ದಾನಮ್ಮ ಚಿಚಖಂಡಿ, ಎಂ.ಎಸ್. ವಸುಂಧರಾ, ಪ್ರಶಾಂತ್ ಕುಮಾರ್ ರೈ, ಎ. ಮುನೀರ್ ಬಾಷಾ, ನಿತಿನ್, ಜಿ. ತರುಣ್ ಕೃಷ್ಣಪ್ರಸಾದ್, ಎಸ್.ಪಿ.ಲಿಖೀತ್, ಅನಘÂì ಮಂಜುನಾಥ್, ಆಶ್ವಲ್ ರೈ, ಪ್ರಧಾನ್ ಸೋಮಣ್ಣ, ಕರುಣ್ ನಾಯರ್, ವಿ. ರಾಧಾ.
ಜೀವಮಾನ ಸಾಧನೆ ಪ್ರಶಸ್ತಿ: ಜಿ.ವಿ. ಗಾಂವ್‌ಕರ್, ಕ್ಯಾ| ದಿಲೀಪ್ ಕುಮಾರ್, ವೀರನಗೌಡ ಪಾಟೀಲ, ಡಾ| ಎಂ. ನಿರಂಜನಮೂರ್ತಿ.
ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ: ಪೂಜಾ ಗಾಲಿ, ಬಿ.ಎನ್. ಕಿರಣ್ ಕುಮಾರ್, ಗೋಪಾಲ ನಾಯ್ಕ, ಕೆ.ದೀಕ್ಷಾ, ಶಿವಯೋಗಿ ಬಸಪ್ಪ ಬಾಗೇವಾಡಿ, ಪಿ.ಗೋಪಾಲಕೃಷ್ಣ, ಲಕ್ಷ್ಮೀ ಬಸವರಾಜ ರೆಡೇಕರ್, ರಾಘವೇಂದ್ರ ಎಸ್.ಹೊಂಡದಕೇರಿ, ಸಿದ್ದಪ್ಪ ಪಾಂಡಪ್ಪ ಹೊಸಮನಿ, ಸೂರಜ ಸಂಜು ಅನ್ನಿಕೇರಿ, ಬಿ.ಎಂ. ಶಶಾಂಕ್, ಡಿ. ನಾಗರಾಜ್, ಪಿ.ಎಸ್. ಶ್ರೀವರ್ಷಿಣಿ, ಅವಿನಾಶ್ ವಿ. ನಾಯ್ಕ.
ಆಳ್ವಾಸ್‌ನ ಮೂವರಿಗೆ ಕ್ರೀಡಾರತ್ನ ಪ್ರಶಸ್ತಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂವರು ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ 2020ನೇ ಸಾಲಿನ “ಕರ್ನಾಟಕ ಕ್ರೀಡಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಾಲ್ ಬ್ಯಾಡ್ಮಿಂಟನ್ ನಲ್ಲಿ ಕಿರಣ್ ಕುಮಾರ್, ಕುಸ್ತಿಯಲ್ಲಿ ಲಕ್ಷ್ಮೀ ರೆಡೇಕರ್ ಹಾಗೂ ಖೋಖೋದಲ್ಲಿ ದೀಕ್ಷಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಿರಣ್‌ಕುಮಾರ್
ರಾಜ್ಯ ತಂಡದ ನಾಯಕರಾಗಿರುವ ಕಿರಣ್ ಒಟ್ಟು 16 ಬಾರಿ ರಾಷ್ಟ್ರೀಯ ಸೀನಿಯರ್ ಹಾಗೂ ಫೆಡರೇಶನ್ ಕಪ್ ಚಾಂಪಿಯನ್‌ಶಿಪ್ ಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಕೂಟಗಳಲ್ಲಿ 4 ಚಿನ್ನ, 4 ಬೆಳ್ಳಿ ಹಾಗೂ 8 ಕಂಚಿನ ಪದಕ ಪಡೆದಿದ್ದಾರೆ. ಅ. ಭಾ. ಅಂತರ್ ವಿ.ವಿ. ಕೂಟದ ಚಾಂಪಿಯನ್ ತಂಡದ ನಾಯಕರಾಗಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದು, 4 ಬಾರಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದಾರೆ.
ಲಕ್ಷ್ಮೀ ರೆಡೇಕರ್
ಒಟ್ಟು 5 ಬಾರಿ ರಾಷ್ಟ್ರೀಯ ಸೀನಿಯರ್ ಹಾಗೂ ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ಅವರು ರಾಷ್ಟ್ರೀಯ ಜೂ. ಕೂಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ. 2 ಬಾರಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಹಾಗೂ 1 ಬಾರಿ ಖೇಲೋ ಇಂಡಿಯಾ ಕೂಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. 3 ಬಾರಿ ಅ. ಭಾ. ಅಂತರ್ ವಿ.ವಿ. ಕುಸ್ತಿಯಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದರು.
ದೀಕ್ಷಾ
ಒಟ್ಟು 8 ಬಾರಿ ರಾಷ್ಟ್ರೀಯ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ದೀಕ್ಷಾ 4 ಬೆಳ್ಳಿ ಹಾಗೂ 4 ಕಂಚಿನ ಪದಕ ಗಳಿಸಿದ್ದಾರೆ. 4 ಬಾರಿ ಅ. ಭಾ. ಅಂತರ್ ವಿ.ವಿ. ಕೂಟಗಳಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದು 1 ಚಿನ್ನ ಹಾಗೂ 1 ಬೆಳ್ಳಿಯ ಪದಕ ಪಡೆದಿದ್ದಾರೆ. ಭೋಪಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆಹ್ವಾನಿತ ಖೋಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಚಿತ ಶಿಕ್ಷಣದ ವಿದ್ಯಾರ್ಥಿಗಳಾಗಿರುವ ಪ್ರಶಸ್ತಿ ವಿಜೇತ ಕ್ರೀಡಾಪಟುಗಳ ಸಾಧನೆಗೆ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.