ಕರ್ನಾಟಕ ಮಹಿಳಾ ಯಕ್ಷಗಾನ ವತಿಯಿಂದ ಪೌರಾಣಿಕ ಯಕ್ಷಗಾನ ಪ್ರಸಂಗಗಳ ಉತ್ಸವ
Team Udayavani, Aug 31, 2022, 12:38 PM IST
ಬೆಂಗಳೂರು : ಕರ್ನಾಟಕ ಮಹಿಳಾ ಯಕ್ಷಗಾನ ವತಿಯಿಂದ ಇತ್ತೀಚಿಗೆ ಗವಿಪುರದ ಉದಯಭಾನು ಕಲಾ ಸಂಘದಲ್ಲಿ ಪೌರಾಣಿಕ ಯಕ್ಷಗಾನ ಪ್ರಸಂಗಗಳ ಉತ್ಸವ ಏರ್ಪಡಿಸಲಾಗಿತ್ತು. ಗೌರಿ ಕೆ. ಸಾಸ್ತಾನ ನಿರ್ದೇಶನದಲ್ಲಿ ಮಹಿಳಾ ಕಲಾವಿದರಿಂದ ದಕ್ಷ ಯಜ್ಞ ಹಾಗೂ ಶ್ರೀನಿವಾಸ ಸಾಸ್ತಾನ ನಿರ್ದೇಶನದಲ್ಲಿ ಬಾಲ ಕಲಾವಿದರಿಂದ ಕೃಷ್ಣ ಗಾರುಡಿ ಪ್ರಸಂಗಗಳ ಪ್ರದರ್ಶನ ನಡೆಯಿತು.