ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ
Team Udayavani, Aug 31, 2022, 2:27 PM IST
ಕನಕಗಿರಿ: ಗಣಪತಿ ಹಬ್ಬ ಎಂದರೇ ಸಾಕು, ಮಕ್ಕಳಿಗೆ ಇಂದಿನ ಯುವ ಪೀಳಿಗೆಗೆ ಎಲ್ಲಿಲ್ಲದ ಸಂತಸ. ದೈವ ಸ್ವರೂಪಿ ಗಣೇಶನನ್ನು ಸ್ವಾಗತಿಸಲು ಭಾಜ ಭಜಂತ್ರಿ ಮೆರವಣಿಗೆ ಮೂಲಕ ಹೊತ್ತು ತರುವುದುಂಟು. ವಿಸರ್ಜಿಸುವಾಗಲು ಡಿಜೆ ಹಾಡುಗಳನ್ನು ಹಾಕಿ ನಾನಾ ಭಂಗಿಯ ರೀತಿಯಲ್ಲಿ ನೃತ್ಯ ಮಾಡಿ ಸಂತೋಷ ವ್ಯಕ್ತ ಪಡಿಸುತ್ತಾರೆ.
ಆದರೆ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಅರ್ಥಪೂರ್ಣವಾದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲಾಗುತ್ತಿದೆ. ಈ ಗ್ರಾಮದಲ್ಲಿ ಕೇವಲ 1000 ಕ್ಕೂ ಕಡಿಮೆ ಜನ ಇಲ್ಲಿ ವಾಸವಾಗಿದ್ದು ಮಕ್ಕಳು ಉನ್ನತ ವಿಧ್ಯಾಭ್ಯಾಸಕ್ಕಾಗಿ ವಿವಿಧ ಪಟ್ಟಣಗಳಿಗೆ ತೆರಳಬೇಕಾಗುತ್ತದೆ. ಆದರೆ ಕೆಲವೊಂದು ವಿಧ್ಯಾವಂತ ಯುವಕರು ಗ್ರಾಮದ ಬೆಳವಣಿಗೆ ಹಿತಾಸಕ್ತಿ ಅರಿತು, ಗಣೇಶ ಹಬ್ಬದ ನಿಮಿತ್ತ ಗಜಾನನ ಸಮಿತಿಯನ್ನು ಕಟ್ಟಿಕೊಂಡು ಪ್ರತಿ ವರ್ಷವು ಗ್ರಾಮದಲ್ಲಿ ಇರುವ ಪ್ರಾಥಮಿಕ, ಪ್ರೌಡ, ಪಿಯು, ಪದವಿ ವಿಧ್ಯಾರ್ಥಿಗಳಿಗೆ ಹಬ್ಬದ ನಿಮಿತ್ತವಾಗಿ ರಸ ಪ್ರಶ್ನೆ, ಪ್ರಭಂದ ಸ್ಪರ್ಧೆ, ಕಬ್ಬಡಿ, ವಾಲಿಬಾಲ್, ಓಟದ ಸ್ಪರ್ದೆ, ರಂಗೋಲಿ ಸ್ಪರ್ಧೆ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಣೆ ಮಾಡುವ ಮೂಲಕ ಮಾನಸಿಕ, ದೈಹಿಕ, ಶೈಕ್ಷಣಿಕ ಸಾಮರ್ಥ್ಯವನ್ನು ಪರೀಕ್ಷಿಸುವುದು ವಿಶೇಷವಾಗಿದೆ. ಅಲ್ಲದೆ ಸ್ಪರ್ಧೆಗಳಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಉತ್ತೇಜಿಸುವುದು ಮುಖ್ಯವಾದ ಅಂಶವಾಗಿದೆ.
ರಕ್ತದಾನ ಶಿಬಿರ: ದಾನಗಳಲ್ಲಿ ಶ್ರೇಷ್ಟ ದಾನ ಎಂದು ಕರೆಸಿಕೊಳ್ಳುವ ರಕ್ತದಾನ ಎಷ್ಟೊ ಜೀವಿಗಳಿಗೆ ಬೇಕಾದ ಮೂಲ ಅಸ್ತ್ರ. ಇಲ್ಲಿನ ಗಜಾನನ ಸಮಿತಿ ಆಯೋಜಕ ಯುವಕರು ಗಣೇಶ ಹಬ್ಬದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಿ ರಕ್ತದಾನ ಮಾಡುವಂತೆ ಗ್ರಾಮದವರಲ್ಲಿ ಮನವಿ ಮಾಡಿಕೊಂಡು ರಕ್ತ ಸಂಗ್ರಹಿಸಿ ಗಂಗಾವತಿಯ ಅಂಜನಾದ್ರಿ ರಕ್ತ ನೀದಿ ಕೇಂದ್ರ ಹಾಗೂ ರಕ್ತ ವಿಭಜನಾ ಘಟಕಕ್ಕೆ ರವಾನಿಸಿ ಜೀವಗಳನ್ನು ಉಳಿಸುವ ಪ್ರಯತ್ನದಲ್ಲಿ ತೋಡಗಿರುವುದು ಒಳ್ಳೆಯ ಸಂದೇಶಕ್ಕೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.