ಬಟ್ಟೆ ಒಗೆಯಲು ಹೋಗಿದ್ದ ಮಹಿಳೆ ನಾಲೆಗೆ ಬಿದ್ದು ಸಾವು!
Team Udayavani, Sep 1, 2022, 11:53 AM IST
ಹುಣಸೂರು: ನಾಲೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆ ತಲೆ ಸುತ್ತು ಬಂದು ನಾಲೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಣ್ಣ ನಾಯಕರ ಪತ್ನಿ ಜಯಮ್ಮ (61 ವ) ಎಂಬುವವರೇ ಮೃತಪಟ್ಟ ದುರ್ದೈವಿ.
ಗ್ರಾಮದ ಬಳಿ ತುಂಬು ಹರಿಯುತ್ತಿರುವ ಹಾರಂಗಿ ನಾಲೆಯ ಉಪಕಾಲುವೆಯಲ್ಲಿ ಗಣೇಶ ಹಬ್ಬದ ದಿನದಂದು ಬಟ್ಟೆ ಒಗೆಯಲು ಹೋಗಿದ್ದ ವೇಳೆ ಜಯಮ್ಮ ತಲೆಸುತ್ತಿನಿಂದ ನೀರಿಗೆ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ. ಸಂಜೆ ವೇಳೆಗೆ ದಾರಿಹೋಕರು ನಾಲೆಯಲ್ಲಿ ಬಟ್ಟೆ ತೇಲುತ್ತಿದ್ದ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದ ಮೇರೆಗೆ ಮನೆಯವರು ಹೋಗಿ ನೋಡಿದ ವೇಳೆ ಜಯಮ್ಮನವರ ಶವ ತೇಲುತ್ತಿತ್ತು.
ಗ್ರಾಮಸ್ಥರ ನೆರವಿನಿಂದ ಕುಟುಂಬದವರು ಶವ ಮೇಲೆತ್ತಿದ ನಂತರ ಅಂತ್ಯ ಸಂಸ್ಕಾರ ನಡೆಸಿದರು.
ಇದನ್ನೂ ಓದಿ:ಇನ್ಮುಂದೆ ನಿಮಗೆ ನೀವೇ ವಾಟ್ಸಪ್ ಮೆಸೇಜ್ ಕಳುಹಿಸಬಹುದು: ಇಲ್ಲಿದೆ ನೋಡಿ ಹೊಸ ಫೀಚರ್ ನ ಮಾಹಿತಿ
ಕುಟುಂಬಸ್ಥರ ಆಕ್ರಂದನ: ಹಬ್ಬಕ್ಕೆ ಬಂದಿದ್ದ ನೆಂಟರಿಷ್ಟರು ಹಾಗೂ ಗ್ರಾಮಸ್ಥರು ಜಯಮ್ಮ ಸಾವಿಗೆ ಕಣ್ಣೀರು ಹಾಕಿದರು. ಗಣಪತಿ ಹಬ್ಬದ ಸಡಗರದಲ್ಲಿದ್ದ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರಿಗೆ ಪತಿ, ಓರ್ವ ಪುತ್ರ ಇಬ್ಬರು ಪುತ್ರಿಯರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್ಎಫ್ಡಿಪಿ ಪೋರ್ಟಲ್ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.