ಮಾತನಾಡಲು ಹೆಚ್ಚಿನ ವಿಷಯವಿದೆ ಆದರೆ ಶಾಸಕರಿದ್ದಾರೆ: ಸಚಿವ ಬಿ.ಶ್ರೀರಾಮುಲು

ಏತ ನೀರಾವರಿ ಯೋಜನೆ ಉದ್ಘಾಟನೆಯಲ್ಲಿ ಬಿಜೆಪಿ v/s ಕಾಂಗ್ರೆಸ್

Team Udayavani, Sep 1, 2022, 1:33 PM IST

1-sdf-fsf

ಕುರುಗೋಡು: ರೈತರ ಬಹುದಿನಗಳ ಬೇಡಿಕೆಗೆ ಸರಕಾರ ಹಸಿರು ನಿಶಾನೆ ದೊರೆಯುವುದಕ್ಕೆ ಅನುಕೂಲ ಕಲ್ಪಿಸಿರುವುದು ಶ್ಲಾಘನಿಯ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

ಸಮೀಪದ ಕೋಳೂರು ಕ್ರಾಸ್ ನ ಸುಮಾರು 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಿ.7 ಪುನಚ್ಚೆತನ ಏತ ನೀರಾವರಿ ಯೋಜನೆ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅವರು, 1997-98 ರಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ಬಂತು ಅಲ್ಲಿಂದ ಈ ಯೋಜನೆಗಳು ನೆನಗುದಿಗೆ ಬಿದ್ದಿದ್ದು, ಸದ್ಯ ಬಿಜೆಪಿ ಸರಕಾರ ಏತ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದೆ ಎಂದರು.

ಕೋಳೂರು ಏತ ನೀರಾವರಿ ಬಹಳ ದಿನಗಳಿಂದ ನೆನಗುದಿಗೆ ಬಿದ್ದಿದ್ದು, ಈ ಭಾಗದ ರೈತರ ಬಹು ದಿನಗಳ ಬೇಡಿಕೆ ಸದ್ಯ ಈಡೇರಿರುವುದರಿಂದ ಸಾವಿರಾರು ರೈತರಿಗೆ ಅನುಕೂಲ ವಾಗಿದೆ ಎಂದರು.

ಮಾತನಾಡಲು ಹೆಚ್ಚಿನ ವಿಷಯಗಳು ಇದ್ದು ಪಕ್ಕದಲ್ಲಿ ಶಾಸಕರಿದ್ದಾರೆ ಮಾತನಾಡವುದು ಬೇಡ… ಎಂದು ಪದೇ ಪದೇ ಪೆಚಾಡಿದರು.

ನಂತರ ಶಾಸಕ ಗಣೇಶ್ ಮಾತನಾಡಿ, ರಾಜ್ಯದಲ್ಲಿ ಮೈತ್ರಿ ಸರಕಾರ ಇದ್ದಾಗ ಈ ಯೋಜನೆ ಅನುಸ್ಟಾನ ಗೊಂಡಿದೆ ಹೊರೆತು ಬಿಜೆಪಿ ಸರಕಾರದಲ್ಲಿ ಅಲ್ಲ ಎಂದರು.

ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು ಮಾಡುತ್ತಿರುವ ಹೋರಾಟ 200 ದಿನಗಳು ಪೂರೈಸಿದ್ದು, ಬಿಜೆಪಿ ಸರಕಾರ ಪ್ರಾರಂಭದಲ್ಲಿ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿ ಸದ್ಯ ಯಾವುದೇ ಇದರ ಬಗ್ಗೆ ತೆಲೆ ಕೆಡಿಸಿಕೊಳ್ಳುತ್ತಿಲ್ಲ ಇನ್ನೂ ಕೇವಲ 4 ರಿಂದ 5 ತಿಂಗಳ ಮಾತ್ರ ಬಿಜೆಪಿ ಸರಕಾರ ಆಡಳಿತ ಇರುವುದರಿಂದ ಇವರು ಯಾವುದೇ ಮೀಸಲಾತಿ ಹೆಚ್ಚಳ ಮಾಡುವುದಿಲ್ಲ ಇವರಿಗೆ ರಾಜ್ಯದ ಎಸ್ಸಿ, ಎಸ್ಟಿ ಸಮುದಾಯದ ಜನರು ಮುಂದಿನ ಚುನಾವಣೆ ಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಇದಲ್ಲದೆ ಕೋಳೂರು ಏತ ನೀರಾವರಿಯು 50 ಕ್ಯೂಸೆಕ್ಸ್ ಪ್ರಮಾಣದಲ್ಲಿ 3750 ಎಕರೆ ಪ್ರದೇಶದ ವ್ಯಾಪ್ತಿಯ ತುಂಬಾ ನೀರು ಸರಬರಾಜು ಆಗಲಿದೆ. ಇನ್ನೂ ಬೈಲೂರ್, ಸಿಂದಿಗೇರಿ, ಶಾನವಾಸಪುರ, ಕೊಂಚಗೇರಿ, ಡಿ. ಕಗ್ಗಲ್ ಗ್ರಾಮಗಳ ಜನರಿಗೆ ಅನುಕೂಲ ವಾಗಲಿದೆ ಎಂದು ತಿಳಿಸಿದರು. ಸದ್ಯ ಕಲ್ಲಕಂಭ, ಹಡ್ಲಿಗಿ ಗ್ರಾಮದಲ್ಲಿ ಏತ ನೀರಾವರಿ ಯೋಜನೆ ಯು ನೆನಗುದಿಗೆ ಬಿದ್ದಿದ್ದು ಶೀಘ್ರದಲ್ಲೇ ಅವುಗಳನ್ನು ಪುನಚ್ಚೆತನ ಗೊಳಿಸಲಾಗುವುದು ಎಂದರು.

ಪ್ರಾರಂಭದಲ್ಲಿ ದಮ್ಮೂರು ವೆಂಕವದೂತರ ದೇವಸ್ಥಾನದಿಂದ ಕೋಳೂರು ಡಿ 7 ಏತ ನೀರಾವರಿ ವರೆಗೆ ಎತ್ತಿನ ಬಂಡಿ ಮೂಲಕ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದರೆ ಸಚಿವ ಶ್ರೀ ರಾಮುಲು ತಮ್ಮ ಕಾರಿನ ಮೂಲಕ ತೆರಳಿ ಕೆಲ ನಿಮಿಷಗಳ ಶಾಸಕ ಗಣೇಶ್ ಬರುವವರಿಗೆ ಕಾದು ನಂತರ ಉದ್ಘಾಟನೆ ನೆರೆವೇರಿಸಿದರು.

ಉದ್ಘಾಟನೆ ವೇಳೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಗಣೇಶ್  ಪರ ಮತ್ತು ಸಚಿವ ಶ್ರೀರಾಮುಲು ಪರ ಜೈಕಾರ ಹಾಕಿದ್ದು ಬಲು ಜೋರಾಗಿ ಕಂಡು ಬಂತು, ಅಲ್ಲದೆ ಈ ಯೋಜನೆ ಶಾಸಕ ಗಣೇಶ್ ಅವರು ಅನುಮೋದನೆ ಗೊಳಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಸುರೇಶ್ ಬಾಬು ಅವರ ಶ್ರಮ ಇದಕ್ಕೆ ಶೂನ್ಯ ಎಂದು ಸಚಿವ ಶ್ರೀರಾಮುಲು ಅವರ ಎದುರೇ ಕಾಂಗ್ರೆಸ್ ಕಾರ್ಯಕರ್ತರು ಜೋರು ಜೋರಾಗಿ ಮಾತನಾಡಿದ್ದು, ಕಾರ್ಯಕರ್ತರ ನಡುವೆ ಕೆಲ ನಿಮಿಷ ಚರ್ಚೆಗೆ ಗ್ರಾಸ ವಾಗುವ ಸನ್ನಿವೇಶ ಮೇಲ್ನೋಟಕ್ಕೆ ಕಂಡು ಬಂತು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ವಿವಿಧ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳುಇದ್ದರು.

ಟಾಪ್ ನ್ಯೂಸ್

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

1-lokkk

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್‌

Ballari–Minister

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ

1-dinnu

Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.