30 ಸಾವಿರ ಬಂಡವಾಳದಿಂದ ದಿನಕ್ಕೆ ಕೋಟಿ ದುಡಿಮೆ: ಇದು ವಾವ್!ಮೊಮೊ ಯಶಸ್ಸಿನ ಕಥೆ
2011ರಲ್ಲಿ ಬೆಂಗಳೂರಿನ ಫೀನಿಕ್ಸ್ ಮಾಲ್ ನಲ್ಲಿ ವಾವ್! ಮೊಮೊ ಮಳಿಗೆ ತೆರಯಲಾಗಿತ್ತು.
ಕೀರ್ತನ್ ಶೆಟ್ಟಿ ಬೋಳ, Sep 1, 2022, 5:40 PM IST
ನೇಪಾಳದ ಖ್ಯಾತ ಖಾದ್ಯವಾದ ಮೊಮೊಸ್ ಗಳು ಪೂರ್ವ ಮತ್ತು ಉತ್ತರ ಭಾರತದಲ್ಲೂ ಪ್ರಸಿದ್ಧ. ನೇಪಾಳಿ ಪ್ರಭಾವ ಹೆಚ್ಚಿರುವ ಕೋಲ್ಕತ್ತಾದಲ್ಲಿ ಈ ಮೊಮೊಸ್ ಬೀದಿ ಬದಿ ವ್ಯಾಪಾರದ ಆಹಾರ. ಚೈನೀಸ್ ಆಹಾರ ತಯಾರಿಸುವ ಕೋಲ್ಕತ್ತಾದ ಪ್ರತಿ ಬೀದಿ ಬದಿ ವ್ಯಾಪಾರಿಯೂ ಮೊಮೊ ತಯಾರಿಸುತ್ತಾನೆ. ಅಂತಹಾ ಮೊಮೊಗಳನ್ನು ಬ್ರ್ಯಾಂಡ್ ಮಾಡುತ್ತೇವೆ ಎಂದು ಹೊರಟ ಇಬ್ಬರ ಸಾಹಸದ ಕಥೆ ಇದು. ಹೌದು ಇದು ಸಾಗರ್ ದರ್ಯಾನಿ ಮತ್ತು ಬಿನೋದ್ ಕುಮಾರ್ ಹೋಮಗೈ ರ ಕಥೆ. ಇದು ವಾವ್! ಮೊಮೊಸ್ ನ ಯಶಸ್ಸಿನ ಕಥೆ.
ಕೋಲ್ಕತ್ತಾದ ಕ್ಸೇವಿಯರ್ ಕಾಲೇಜಿನ ಸಹಪಾಠಿಗಳಾದ ಸಾಗರ್ ಮತ್ತು ಬಿನೋದ್ 2008ರಲ್ಲಿ ವಾವ್! ಮೊಮೊಸ್ ಆರಂಭಿಸಿದರು. ಗುಣಮಟ್ಟದ ಆಹಾರ ನೀಡಿದರೆ ಜನರು ಕೈ ಬಿಡುವುದಿಲ್ಲ ಎಂದರಿತು ತಮ್ಮಲ್ಲಿದ್ದ 30 ಸಾವಿರ ರೂ. ಬಂಡವಾಳ ಹಾಕಿದ್ದರು.
2008ರಲ್ಲಿ 6×6 ರ ಗೂಡಂಗಡಿಯಲ್ಲಿ ಆರಂಭವಾದ ವಾವ್! ಮೊಮೊಸ್ ಇಂದು ದಿನಕ್ಕೆ ಕೋಟಿಗೂ ಹೆಚ್ಚು ದುಡಿಯುತ್ತಿದೆ. ಇವರ ಮೊದಲ ಅಡುಗೆ ಮನೆ 200 ಸ್ಕ್ವೇರ್ ಫೂಟ್ ನಲ್ಲಿ ಆರಂಭವಾಗಿತ್ತು. ಕಿರಾಣಿ ಅಂಗಡಿಯಲ್ಲಿ ಸಾಲ ಮಾಡಿ ಕಷ್ಟದಿಂದಲೇ ಆರಂಭಿಸಿದ ಮೊಮೊ ಮಳಿಗೆ ಇಂದು ವಾವ್ ಎನ್ನುವಷ್ಟು ಬೆಳೆದಿದೆ. ಆಗ ಇವರ ಅಡುಗೆಮನೆಯಲ್ಲಿ ಇದ್ದಿದ್ದು ಒಂದೇ ಒಂದು ಟೇಬಲ್ ಮತ್ತು ಸ್ವಲ್ಪ ಸಂಬಳದಲ್ಲಿ ಕೆಲಸ ಮಾಡುವ ಇಬ್ಬರು ಅರೆಕಾಲಿಕ ಬಾಣಸಿಗರು ಮಾತ್ರ.
“ವಾವ್!ಮೊಮೊ ಆರಂಭಿಸಿದಾಗ ಮನೆಯವರ ಬೆಂಬಲ ಇತ್ತು. ಆದರೆ ಸಂಬಂಧಿಕರು ಮತ್ತು ಕೆಲವು ಬಳಗ ಟೀಕೆ ಮಾಡುತ್ತಿದ್ದಾರೆ. ‘ನೀವು ಮಗನಿಗೆ ಇಷ್ಟೆಲ್ಲಾ ವಿದ್ಯೆ ನೀಡಿದ್ದೀರಿ, ಆದರೆ ಅವನು ಮೊಮೊ ಮಾರುತ್ತಿದ್ದಾನೆ’ ಎಂದು ಹೀಯಾಳಿಸುತ್ತಿದ್ದರು. ಆದರೆ ಹೆತ್ತವರ ಬೆಂಬಲ ನನಗೆ ಸದಾ ಸಿಗುತ್ತಿತ್ತು” ಎಂದು 14 ವರ್ಷದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಸಾಗರ್.
ಆರಂಭದಲ್ಲಿ ಸಾಗರ್ ನ ಮನೆಯ ಬಳಿ ಮೊಮೊಸ್ ತಯಾರಿಸಿ ಅದನ್ನು ದಕ್ಷಿಣ ಕೋಲ್ಕತ್ತಾದ ಗಚ್ವಾಲಾ ಟೋಲಿಗಂಜ್ ನಲ್ಲಿರುವ ಸ್ಪೆನ್ಸರ್ಸ್ ರಿಟೇಲ್ ನಲ್ಲಿ ಸಣ್ಣ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದರು. ತಮ್ಮ ಮನೆಯಿಂದಲೇ ಪಾತ್ರೆಗಳನ್ನು ತಂದು ಅಡುಗೆ ಮಾಡಬೇಕಿತ್ತು. ಬೆಳಗ್ಗೆ ಎರಡೆರಡು ರಿಕ್ಷಾ ಬದಲಿಸಿ ಮೊಮೊಗಳನ್ನು ಅಂಗಡಿಗೆ ಕೊಂಡೊಯ್ಯುತ್ತಿದ್ದ ಇವರು ಹಿಂದೆ ಬರುವಾಗ ಹಣ ಉಳಿಸಲೆಂದು ನಡೆದುಕೊಂಡು ಬರುತ್ತಿದ್ದರು. ಹೀಗೆ ಆರಂಭವಾಗಿತ್ತು ಪ್ರಯಾಣ.
ಮೊದ ಮೊದಲು ಗ್ರಾಹಕರಿಗೆ ಉಚಿತವಾಗಿ ಸ್ಯಾಂಪಲ್ ಗಳನ್ನು ನೀಡಿ ತಮ್ಮ ಮೊಮೊಸ್ ರುಚಿಯ ಪ್ರಚಾರ ಮಾಡಿದ್ದರು. ಬೀದಿ ಬದಿ ವ್ಯಾಪಾರಸ್ಥರ ಬಳಿ ಸಿಗುತ್ತಿದ್ದ ಮೊಮೊಗಳಿಗೆ ಹೈಟೆಕ್ ಸ್ಪರ್ಶ ನೀಡಿದ್ದ ಈ ಯುವಕರಿಗೆ ಹಲವು ಸವಾಲುಗಳು ಆಗಾಗ ಎದುರಾಗುತ್ತಿದ್ದವು. ಕೆಲವು ಬಾರಿ ಇದೆಲ್ಲಾ ಸಾಕು ಎಂದೆನಿಸಿತ್ತು ಎನ್ನುತ್ತಾರೆ ಸಾಗರ್ ದರ್ಯಾನಿ.
ವಾವ್! ಮೊಮೊಸ್ ನ ಟಿ ಶರ್ಟ್ ಗಳನ್ನು ಧರಿಸಿ ಮೊಮೊ ಮಾರುತ್ತಿದ್ದ ಸಾಗರ್ ಮತ್ತು ಬಿನೋದ್, ಮುಂದಿನ ಎರಡು ವರ್ಷಗಳಲ್ಲಿ ಇಂತಹ ಸಣ್ಣ ಅಂಗಡಿಗಳನ್ನು ಕೋಲ್ಕತ್ತಾದ ಟೆಕ್ ಪಾರ್ಕ್ ಗಳು, ಮಾಲ್ ಗಳು, ಹೈಪರ್ ಮಾರ್ಕೆಟ್ ಗಳಲ್ಲಿ ಆರಂಭಿಸಿದ್ದರು.
ಅವರು ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಗೆ 16 ವಿವಿಧ ವಿಧದ ಮೊಮೊಗಳನ್ನು ನೀಡುತ್ತಾರೆ. ಸಸ್ಯಾಹಾರಿಗಳಿಗೆ ಕಾರ್ನ್ ಮತ್ತು ಚೀಸ್ ಸೇರಿವೆ. ಮಾಂಸಾಹಾರಿಗಳು ಅವರು ಚಿಕನ್ ಮತ್ತು ಚೀಸ್, ಚಿಕನ್, ಪ್ರಾನ್ ಮತ್ತು ಶೆಜ್ವಾನ್ ಮೊಮೊಗಳನ್ನು ವಾವ್ ಮೊಮೊಸ್ ನೀಡುತ್ತದೆ. ಅಲ್ಲದೆ ಅವರ ಚಾಕೊಲೇಟ್ ಮೊಮೊಗಳು ಕೂಡಾ ಪ್ರಸಿದ್ದಿ ಪಡೆದಿದೆ.
14 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಸಾಗರ್ ಮತ್ತು ಬಿನೋದ್ 2010 ರಲ್ಲಿ ಕೋಲ್ಕತ್ತಾದ ಸಾಲ್ಟ್ ಲೇಕ್ ನಲ್ಲಿರುವ ಸೆಕ್ಟರ್ ನಾಲ್ಕರಲ್ಲಿ ತಮ್ಮ ಮೊದಲ ಸ್ವತಂತ್ರ ಔಟ್ಲೆಟನ್ನು ಪ್ರಾರಂಭಿಸಿದರು. ಸದ್ಯ ಈ ಔಟ್ ಲೆಟ್ 1,200 ಚದರ ಅಡಿಗಳಿಗೆ ವಿಸ್ತರಿಸಿದೆ. ವಾವ್! ಮೊಮೊ ಇಷ್ಟೆಲ್ಲಾ ಬೆಳೆದರೂ ಉತ್ತರ ಭಾರತದ ಮಾಲ್ ಗಳಲ್ಲಿ ಇವರಿಗೆ ಜಾಗ ನೀಡಲಿಲ್ಲ. ಕಾರಣ ಮೊಮೊ ಬೀದಿ ಬದಿ ಮಾರುವ ಆಹಾರ, ಮಾಲ್ ಗಳಿಗೆ ಬಂದು ನಿಮ್ಮಲ್ಲಿ ಯಾರು ಖರೀದಿ ಮಾಡುತ್ತಾರೆ ಎಂಬ ಸಬೂಬು ನೀಡಿದ್ದರು. ಹೀಗಾಗಿ ಸಾಗರ್ ಮತ್ತು ಬಿನೋದ್ ಕೋಲ್ಕತ್ತಾದ ಹೊರಗಡೆ ತಮ್ಮ ಮೊದಲ ಔಟ್ ಲೆಟನ್ನು ನಮ್ಮ ಬೆಂಗಳೂರಿನಲ್ಲಿ ತೆರೆದಿದ್ದರು. 2011ರಲ್ಲಿ ಬೆಂಗಳೂರಿನ ಫೀನಿಕ್ಸ್ ಮಾಲ್ ನಲ್ಲಿ ವಾವ್! ಮೊಮೊ ಮಳಿಗೆ ತೆರಯಲಾಗಿತ್ತು.
ಇದಾದ ಬಳಿಕ ಈ ಯುವಕರು ಹಿಂದೆ ನೋಡಿಲ್ಲ. ಮುಂಬೈ, ನೋಯ್ಡಾ, ಗುರ್ಗಾಂವ್, ಚೆನ್ನೈ, ಲಕ್ನೋ, ಕಟಕ್, ಪುರಿ, ಕೊಚ್ಚಿನ್, ಭುವನೇಶ್ವರ್, ಕಾನ್ಪುರ ಹೀಗೆ ಹಲವೆಡೆ ತಮ್ಮ ಔಟ್ ಲೆಟ್ ಗಳನ್ನು ತೆರೆದರು.
ಆರಂಭದಲ್ಲಿ ತಿಂಗಳಿಗೆ 60 ಸಾವಿರ ರೂ ದುಡಿಯುತ್ತಿದ್ದ ವಾವ್! ಮೊಮೊ ಇದೀಗ ಪ್ರತಿ ತಿಂಗಳು 40ರಿಂದ 45 ಕೋಟಿ ರೂ ಸಂಪಾದನೆ ಮಾಡುತ್ತಿದೆ. ಈ ಆರ್ಥಿಕ ವರ್ಷದಲ್ಲಿ ನಮ್ಮ ಆದಾಯ 500 ಕೋಟಿ ರೂ ತಲುಪಲಿದೆ. ದಿನಕ್ಕೆ ಒಂದು ಲಕ್ಷ ಪ್ಲೇಟ್ ಮೊಮೊಗಳು ಅಂದರೆ, ತಿಂಗಳಿಗೆ ಸುಮಾರು ಒಂದೂವರೆ ಕೋಟಿಯಷ್ಟು ಮೊಮೊಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸಾಗರ್.
ಸದ್ಯ ಪ್ಯಾಕೇಜ್ ಮೊಮೊಸ್ ಗಳನ್ನು ಆರಂಭಿಸಿರುವ ವಾವ್! ಮೊಮೊ ಸದ್ಯ 19 ನಗರಗಳಲ್ಲಿ 425 ಔಟ್ ಲೆಟ್ ಗಳನ್ನು ಹೊಂದಿದೆ. 2700 ಮಂದಿಗಿಂತಲೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.