![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Sep 2, 2022, 9:13 AM IST
ಬೆಂಗಳೂರು: ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸಿಎಂ ಹಾಗೂ ಮಾಜಿ ಸಿಎಂ ಒಂದೇ ಕಾರಿನಲ್ಲಿ ಹೆಚ್ಎಎಲ್ ಏರ್ ಪೋರ್ಟ್ ಗೆ ಹೊರಟಿದ್ದು ವಿಶೇಷವಾಗಿತ್ತು.
ಕಾವೇರಿ ನಿವಾಸದಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಆರ್. ಅಶೋಕ್ ಹೊರಟರು. ಸಿಎಂ ಮತ್ತು ಅಶೋಕ್ ಅವರು ಯಡಿಯೂರಪ್ಪ ಕಾರಿನಲ್ಲಿ ಕುಳಿತು ಏರ್ ಪೋರ್ಟ್ ಗೆ ಪ್ರಯಾಣಿಸಿದರು.
ಮಂಗಳೂರಿನ ಮೋದಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಹಾಗು ಆರ್. ಅಶೋಕ್ ಭಾಗಿಯಾಗಲಿದ್ದಾರೆ.
3800 ಕೋಟಿ ರೂ ಮೊತ್ತದ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಇಂದು ಮಂಗಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ನಡೆಯಲಿದೆ. ಈ ಸಮಾವೇಶಕ್ಕೆ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸುಮಾರು 1.5 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ:ಇಂದು ಮಂಗಳೂರಿಗೆ ಪ್ರಧಾನಿ ಮೋದಿ
ಸಮಾವೇಶದಲ್ಲಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡುವರು. ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ ಅವರು ಸ್ವಾಗತಿಸುವರು. ಶಿಷ್ಟಾಚಾರದಂತೆ ಪ್ರಧಾನಿಯವರು ಭಾಗವಹಿಸುವ ವೇದಿಕೆಯಲ್ಲಿ 10 ಮಂದಿಗೆ ಮಾತ್ರ ಅವಕಾಶ. ರಾಜ್ಯಪಾಲರು, ಮೂವರು ಕೇಂದ್ರ ಸಚಿವರು, ಮುಖ್ಯಮಂತ್ರಿ, ಮೂವರು ರಾಜ್ಯ ಸಚಿವರು, ಸಂಸದರು ಇರುತ್ತಾರೆ. ಸರಕಾರಿ ಕಾರ್ಯಕ್ರಮವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರನ್ನು ವೇದಿಕೆಯಲ್ಲಿ ಅವಕಾಶ ಕಲ್ಪಿಸಲು ಪ್ರಧಾನಿಯವರ ಕಾರ್ಯಾಲಯದಿಂದ ಅನುಮೋದನೆ ಕೋರಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.