![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Sep 2, 2022, 9:10 AM IST
ಮಂಗಳೂರು:
ಕೆಂಜಾರು-ಕೆಪಿಟಿ, ಹೆದ್ದಾರಿ ಸಂಚಾರ ನಿಷೇಧ :
ಬಜಪೆ-ಕೆಂಜಾರು-ಮರವೂರು-ಮರಕಡ-ಕಾ ವೂರು-ಬೋಂದೆಲ್- ಪದವಿನಂಗಡಿ-ಯೆಯ್ನಾಡಿ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್ ನಿಂದ ಕೊಟ್ಟಾರ ಚೌಕಿ-ಕೂಳೂರು-ಎನ್‌ಎಂಪಿಎವರೆಗೆ ಹಾದು ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ರೀತಿಯ ವಾಹನಗಳನ್ನು ನಿಲ್ಲಿಸುವಂತಿಲ್ಲ. ಇದೇ ರಸ್ತೆಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಎಲ್ಲ ಸರಕು ವಾಹನ, ಘನ ವಾಹನ, ಪ್ರವಾಸಿ ವಾಹನ ಹಾಗೂ ಇತರ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಆದರೆ ಗೋಲ್ಡ್ ಪಿಂಚ್ ಸಿಟಿ ಮೈದಾನದ ಸಮಾವೇಶಕ್ಕೆ ಹೋಗುವ ಅತೀ ಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರ ವಾಹನಗಳು ನಿಗದಿತ ನಿಲುಗಡೆ ಸ್ಥಳಗಳಿಗೆ ಹೋಗಲು, ಮತ್ತು ತುರ್ತು ಸೇವೆಯ ವಾಹನಗಳಿಗೆ ನಿಷೇಧಿತ ರಸ್ತೆಗಳಲ್ಲಿ ಸಂಚರಿಸಬಹುದು.
ಗೋಲ್ಡ್ ಪಿಂಚ್ ಮೈದಾನ ಮತ್ತು ಸುತ್ತಲಿನ 500 ಮೀ. ವ್ಯಾಪ್ತಿಯ ರಸ್ತೆಗಳಲ್ಲೂ ಎಲ್ಲ ವಾಹನಗಳ ನಿಲುಗಡೆ ಗೆ ನಿಷೇಧ. ಸೆ. 2ರಂದು ಬೆಳಗ್ಗೆ 10ರಿಂದ ಪ್ರಧಾನಿಯವರು ವಿಮಾನ ನಿಲ್ದಾಣದಿಂದ ನಿರ್ಗಮಿಸುವವರೆಗೆ ನಂತೂರು, ಬಿಕರ್ನಕಟ್ಟೆ- ಕೈಕಂಬ, ಮಂಗಳ ಜ್ಯೋತಿ, ವಾಮಂ ಜೂರು, ಪೊರ್ಕೊಡಿ, ಮೂಲ್ಕಿ, ಹಳೆಯಂಗಡಿ, ಜೋ ಕಟ್ಟೆ ಕ್ರಾಸ್, ಲೇಡಿಹಿಲ್ ಸೇರಿದಂತೆ 9 ಜಂಕ್ಷನ್‌ಗಳಲ್ಲಿ ಸಂಚಾರ ಬದಲಾಯಿಸಿ, ಪರ್ಯಾಯ ರಸ್ತೆ ಗುರುತಿಸ ಲಾಗಿದೆ.
15 ಕಡೆ ಪಾರ್ಕಿಂಗ್‌ಗೆ ವ್ಯವಸ್ಥೆ :
ಉಡುಪಿ ಕಡೆಯಿಂದ ಬರುವ ಘನ ವಾಹನಗಳು, ಗೂಡ್ಸ್ ವಾಹನಗಳು ಪಡುಬಿದ್ರಿ ಜಂಕ್ಷನ್‌ನಿಂದ ಕಾರ್ಕಳ- ಬೆಳ್ಮಣ್ ಮಾರ್ಗವಾಗಿ ಮೂಡುಬಿದಿರೆ, ಕಿನ್ನಿಗೋಳಿ ಮೂಲಕ ಮಂಗಳೂರು, ಬಂಟ್ವಾಳ, ಮೆಲ್ಕಾರ್, ಮುಡಿಪು, ತೊಕ್ಕೊಟ್ಟು, ಪುತ್ತೂರು, ಬೆಂಗಳೂರು, ಮೈಸೂರು ಕಡೆಗೆ ಸಂಚರಿಸಬಹುದು. ಇನ್ನಿತರ ಲಘು ವಾಹನಗಳು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಮೂಲ್ಕಿಯಿಂದ ಕಿನ್ನಿಗೋಳಿ-ವಿಜಯ ಸನ್ನಿಧಿ-ಕಟೀಲು-ಬಜಪೆ- ಕೈಕಂಬ- ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡುಬಿದಿರೆ ಮಾರ್ಗವಾಗಿ ಸಾಗಬಹುದು. ಸುರತ್ಕಲ್‌ನಿಂದ ಮಂಗ ಳೂರು ಕಡೆಗೆ ಬರುವ ವಾಹನಗಳು ಕಾನ ರಸ್ತೆ- ಜೋಕಟ್ಟೆ -ಪೊರ್ಕೋಡಿ – ಬಜಪೆ ಕೈಕಂಬ-ಗುರುಪುರ ಮಾರ್ಗ ವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡುಬಿದಿರೆ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗಬಹುದು.
ತಲಪಾಡಿ, ಉಳ್ಳಾಲ ಕಡೆಯಿಂದ ಬಿ.ಸಿ.ರೋಡ್, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬೆಂಗಳೂರು, ಮೈಸೂರು ಕಡೆಗೆ ಹೋಗುವ ವಾಹನಗಳು ಕೆ.ಸಿ.ರೋಡ್ ಹಾಗೂ ತೊಕ್ಕೊಟ್ಟು-ಮುಡಿಪು ಮಾರ್ಗವಾಗಿ ಬಿ.ಸಿ.ರೋಡ್ ಕಡೆಗೆ ಸಂಚರಿಸುವುದು ಹಾಗೂ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು ನಂತೂರು- ವಾಮಂಜೂರು- ಗುರುಪುರ, ಕೈಕಂಬ, ಬಜಪೆ, ಕಟೀಲು- ಕಿನ್ನಿಗೋಳಿ- ಮೂಲ್ಕಿ ಮಾರ್ಗವಾಗಿ ಉಡುಪಿ ಕಡೆಗೆ ಹೋಗಬಹುದು. ಬಸ್ ಸಂಚಾರ ವ್ಯತ್ಯಯ ಸಾಧ್ಯತೆ ಫಲಾನುಭವಿ ಮತ್ತು ಸಾರ್ವಜನಿಕರನ್ನು ಸಮಾವೇಶಕ್ಕೆ ಕರೆತರಲು ಸುಮಾರು 150ಕ್ಕೂ ಹೆಚ್ಚಿನ ಸಿಟಿ ಬಸ್‌ಗಳು ತೆರಳಲಿವೆ. ಇದರ ಜತೆ ಮಂಗಳೂರು ಕಮೀಷನರೆಟ್ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಹಿನ್ನೆಲೆ, ವಾಹನ ಸಂಚಾರ ಮಾರ್ಪಾಡು ಮಾಡಿರುವುದು ಹಾಗೂ ಸಾರ್ವಜನಿಕರ ಓಡಾಟ ಕಡಿಮೆ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಲವೊಂದು ಸಿಟಿ ಬಸ್ ಕಾರ್ಯಾಚರಣೆ ಕಡಿತಗೊಳಿಸಲು ನಿರ್ಧರಿಸಿದೆ. ಈ ಕಾರಣದಿಂದಾಗಿ ನಗರದಲ್ಲಿ ಶೇ.30ರಷ್ಟು ಬಸ್‌ಗಳು ಮಾತ್ರ ಸಂಚರಿಸುವ ಸಾಧ್ಯತೆ ಇದೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.